ಬುಲೆಟ್ ಟ್ರೈನ್ ಹಾಗು ಭಾರತ

ಬುಲೆಟ್ ಟ್ರೈನ್ ಹಾಗು ಭಾರತ

ಚಿತ್ರ

ಬುಲೆಟ್ ಟ್ರೈನ್ ಹಾಗು ಭಾರತ
 
 
 
ಸಧ್ಯದಲ್ಲಿ ಮೋದಿಯವರು ಜಪಾನ್ ದೇಶದ ಜೊತೆ ಬುಲೆಟ್ ಟ್ರೈನ್ ಭಾರತದಲ್ಲಿ ಓಡಿಸುವ ಬಗ್ಗೆ ಒಪ್ಪಂದಕ್ಕೆ ಬಂದರು ಎಂದು ಮಾಧ್ಯಮಗಳು ಪ್ರಕಟಿಸಿದವು. ಮುಂಬೈ ಮತ್ತು ಅಹಮದಾಬಾದ್ ನಡುವಿನ 505 ಕಿ.ಮೀ ದೂರ ಮೊದಲ ಬುಲೆಟ್ ಟ್ರೈನ್ ಓಡಲಿದೆ ಎಂದು ಪ್ರಕಟಿಸಿದವು. ತಗಲುವು ವೆಚ್ಚ ಮಾತ್ರ ೧೦೦,೦೦೦ ಕೋಟಿ !
ಒಂದು ಲಕ್ಷಕೋಟಿ ! 
 
ಅಬ್ಬ ಅಷ್ಟೊಂದು ವೆಚ್ಚವೆ! 
 
ಅಷ್ಟಕ್ಕೂ ಅದು ಒಂದು ಕಂತಿನಲ್ಲಿ ಆಗುವ ಖರ್ಚು ಅಲ್ಲ,  ಒಮ್ಮೆಲೆ ತೀರಿಸುವದಲ್ಲ. ಜಪಾನ್ ತನ್ನ ಬಂಡವಾಳ ಹೂಡುತ್ತದೆ ಸುಮಾರು ಮೂವತೈದು ವರ್ಷಗಳ ಕಂತಿನಲ್ಲಿ ಸಾಲ ತೀರುತ್ತದೆ ಅನ್ನುತ್ತದೆ ವರದಿ. 
 
ನಿರೀಕ್ಷೆ ಮಾಡಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ  ಅಪಸ್ವರ ಹೊರಟಿತು. ಭಾರತದಂತ ಬಡದೇಶಕ್ಕೆ ಅಂತವ ವೈಭವದ ರೈಲು ಬೇಕೆ ಎನ್ನುವ ಸಾಮಾಜಿಕ ಕಳಕಳಿಯ ಪ್ರಶ್ನೆಗಳು. 
 
..
ಹಾಗೆ ನೋಡಿದರೆ ಇಂತಹುಗಳು ಮೊದಲೇನಲ್ಲ 
 
1985 ರ ನಂತರ ಹಾಗು 90 ರ ದಶಕದ ಪ್ರಾರಂಭದ ದಿನಗಳಲ್ಲಿ. ಆಗಿನ್ನೂ ಟೀವಿ ಅಂದರೆ ಹದಿನೆಂಟು , ಇಪ್ಪತ್ತೆಂಟು ಆಂಟಿನಗಳ ಕಾಲ. ಎಲ್ಲೋ ದೂರದ ಮದ್ರಾಸಿನಲ್ಲಿದ್ದ ಟೀವಿಯಿಂದ  ವಾರದ ದಿನಗಳಲ್ಲಿ ಪ್ರಸಾರವಾಗುತ್ತಿದ್ದ ಒಂದೆರಡು ಗಂಟೆಯ ಕನ್ನಡ ಕಾರ್ಯಕ್ರಮಕ್ಕೆ ಕಾತರಿಸುತ್ತಿದ್ದ ಕಾಲ. ರಾಜೀವಗಾಂದಿ ಪ್ರತಿ ರಾಜ್ಯಕ್ಕೂ ಟೀವಿ ಚಾನಲ್ ಪ್ರಾರಂಭಿಸುವಂತೆ ನೋಡಿಕೊಂಡರು.
ಅಮೇರಿಕದಂತಹ ದೇಶಗಳಲ್ಲಿ ಟೀವಿ ಬಂದು ಮೂವತ್ತು ವರ್ಷಗಳ ನಂತರ ನಾವು ಟೀವಿ ನೋಡಿದೆವು. ಆಗೆಲ್ಲ ನನಗೆ ಈ ಕೇಬಲ್ ಟೀವಿ ಫಾರಿನ್ ನಲ್ಲಿ ಇರುತ್ತೇ ಅಂತ ಕೇಳಿ ಅಚ್ಚರಿಯೆ ಆಗಿತ್ತು. ಅಲ್ಲ ಟೀವಿ ಸ್ಟೇಷನ್ನಿನಿಂದ ಪ್ರತಿ ಮನೆಗೂ ಕೇಬಲ್ ಎಳೆಯಲು ಸಾದ್ಯವೆ ಅನ್ನುವ ಅನುಮಾನ !
 
ಅಷ್ಟೆ ಅಲ್ಲ ಅವರ ಸಹವರ್ತಿಯಾಗಿದ್ದ ಸ್ಯಾಮ್ ಪೆಟ್ರೋಡ ಎನ್ನುವರು ಜೊತೆ ಸೇರಿ ಭಾರತದಲ್ಲಿ ಟೆಲಿಕಮ್ಯೂನಿಕೇಷನ್ ಎನ್ನುವದನ್ನು ಉತ್ತಂಗಕ್ಕೆ ಓಯ್ದರು
 
ಆಗಲೂ ಅಷ್ಟೆ ನನಗೆ ನೆನಪಿದೆ. ಪತ್ರಿಕೆಗಳಲ್ಲಿ ಅಲ್ಲಲ್ಲಿ ಪ್ರತಿಕ್ರಿಯೆ ಕೇಳಿಸಿತು. ಭಾರತದಂತ ದೇಶಕ್ಕೆ ಟೀವಿಯ ವೈಭವ ಏಕೆ. ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲದ ದೇಶದಲ್ಲಿ ಮೊಬೈಲ್ ಅನ್ನುವ ಶ್ರೀಮಂತಿಕೆ ಬೇಕೆ ಎಂದೆಲ್ಲ ಪ್ರಶ್ನೆಗಳು ಕೇಳಲ್ಪಟ್ಟವು 
 
ಅದೆಲ್ಲ ಹಳೆಯ ಕತೆ. 
 
ಈಗ ಅದೇ ಟೀವಿ, ಮೊಬೈಲ್ ಗಳು ಸಮಾಜದ ಅತಿ ಅವಶ್ಯಕ ಸಾಮಾಗ್ರಿಗಳಾಗಿವೆ. 
 
ಅಂದು ರಾಜೀವಗಾಂಧಿ ಟೆಲಿಕ್ರಾಂತಿಯನ್ನು ಭಾರತದಲ್ಲಿ ತರದಿದ್ದಲ್ಲಿ, ಇಂದು ನಾವು ಕೈಲಿರುವ ಮೊಬೈಲ್ ಮೂಲಕವೇ ಮೋದಿ ತರುತ್ತಿರುವ ಬುಲೆಟ್ ಟ್ರೈನ್ ಬಗ್ಗೆ ಟೀಕೆ ದಾಖಲು ಮಾಡಲು ಆಗುತ್ತಿರಲಿಲ್ಲ. 
 
ಚಂದ್ರಲೋಕಕ್ಕೆ ರಾಕೆಟ್ ಹಾರುತ್ತಿದೆ ಅನ್ನುವಾಗಲು ಪ್ರಶ್ನೆ ಅದು ನಮಗೆ ಅವಶ್ಯಕತೆ ಇದೆಯೆ ?
 
ಕಾಲ ಕಾಲಕ್ಕೆ ಎಲ್ಲವೂ ನಡೆಯುತ್ತಲೇ ಇರುತ್ತದೆ 
 
ಹಿಂದೊಮ್ಮೆ ಶಿವರಾಮಕಾರಂತರು  ವಿಶ್ವಕನ್ನಡ ಸಮ್ಮೇಳನ ನಡೆಸುವ ಬಗ್ಗೆ ಚರ್ಚೆಯಾದಾಗ ಗರ್ಜಿಸಿದ್ದರು
’ಬರ ಎಂದು ಎಲ್ಲರೂ ಹೋಟೆಲಿನಲ್ಲಿ ಮಸಾಲೆದೋಸೆ ತಿನ್ನುವುದು ಬಿಟ್ಟಿದ್ದಾರೇನು ?" ಎಂದು
 
...
 
ಹಾಗೆ ನೋಡಿದರೆ ಬೆಂಗಳೂರಿನಂತ ನಗರಕ್ಕೆ ಈಗ ಬರುತ್ತಿರುವ ಮೆಟ್ರೋ ಎನ್ನುವ ರೈಲು ಸಹ ದುಂದುವೆಚ್ಚವೇ ಅನ್ನಿಸದೆ? 
 
ಅದು ಸಾರ್ವಜನಿಕರಿಗೆ ಇಂದಿನ ದೃಷ್ಟಿಯಲ್ಲಿ ಅನುಕೂಲಕರ ಎಂದು ಸಹ ಅನ್ನಿಸುತ್ತಿಲ್ಲ 
 
ಮೆಟ್ರೋಗೆ ಖರ್ಚಾಗುತ್ತಿರುವ ಕಾಲುಬಾಗ ಹಣದಲ್ಲಿ ಬೆಂಗಳೂರಿನ ಎಲ್ಲ ರಸ್ತೆಗಳನ್ನು ಸಿಗ್ನಲ್ ಮುಕ್ತ ರಸ್ತೆಯನ್ನಾಗಿ ಮಾಡಬಹುದಿತ್ತು . ಒಳ್ಳೆಯ ಪುಟ್ ಪಾತ್ ನಿರ್ಮಿಸಬಹುದಿತ್ತು. ಅನ್ನಿಸುತ್ತೆ, ಆದರೆ ದೊಡ್ಡವರಿಗೆ ದೊಡ್ಡ ದೊಡ್ದ ಯೋಜನೆಗಳೆ ಬೇಕಿರುತ್ತೆ.
 
ಇಂದಿನ ಮೆಟ್ರೋ ನಮ್ಮ ನಾಳಿನ ಅವಶ್ಯಕತೆ ಆಗಬಹುದು. 
 
ಹಾಗೆ ಇಂದು ತರಲು ಹೊರಟಿರುವ  ಬುಲೆಟ್ ಟ್ರೈನ್ ನಾಳೆ ನಮ್ಮ ಹೆಮ್ಮೆ ಆಗಬಹುದು. ಆಗದೆಯೂ ಇರಬಹುದು. 
 
ಹಾಗೆಂದು ಎಲ್ಲಾ ಯೋಜನೆಗಳನ್ನು ಸೀಮಿತ ಅಲೋಚನೆಗಳೊಂದಿಗೆ ವಿರೋದಿಸಲಾಗುವದಿಲ್ಲ.  ಸಾಮಾಜಿಕ ಮಾಧ್ಯಮಗಳನ್ನು ನೋಡುವಾಗ ಬುಲೆಟ್ ಟ್ರೈನ್ ಮೋದಿಯವರ ಯೋಜನೆ ಅನ್ನುವ  ಕಾರಣಕ್ಕಾಗಿಯೆ ಅದನ್ನು ವಿರೋಧಿಸುವಂತೆ ತೋರುತ್ತದೆ. 
 
ಹಿಂದೊಮ್ಮೆ ಇಂಗ್ಲೇಂಡ್ ಅಮೇರಿಕಾ ದೇಶಗಳಲ್ಲಿ ಭಾರತವನ್ನು ಹಾವು ಆಡಿಸುವರ ದೇಶ, ಹುಲಿ ಆನೆಗಳು ಸಂಚರಿಸುವ ದೇಶ , ಬಿಕ್ಷುಕರ ದೇಶವೆಂದೆ ಪರಿಗಣಿಸಲಾಗಿತ್ತು. ಇಂದು ಪರಿಸ್ಥಿತಿ ಸಾಕಷ್ಟು ಬದಲಾಗಿದೆ. 
 
ಇಂದು ಕೇವಲ ಸೋಲಾರ್ ಎನರ್ಜಿ ಎನ್ನುವ ತಾಂತ್ರಿಕತೆಯನ್ನು ತರುತ್ತಿರುವ ಭಾರತವನ್ನು ಆಸ್ಟ್ರೇಲಿಯದಂತ ದೇಶಗಳು ಅವಹೇಳನ ಮಾಡಿ ನಗುತ್ತವೆಂದಾದರೆ ನಾವೇನು ನಾಚಿಕೊಳ್ಳಬೇಕಿಲ್ಲ. ಮುಂದೆ ಹತ್ತಿಪ್ಪತ್ತು ವರ್ಷಗಳ ನಂತರ ಅದೇ ತಾಂತ್ರಿಕತೆಯನ್ನು ಬೇರೆ ದೇಶಗಳು ಆಶ್ಚರ್ಯದಿಂದ ನೋಡುವ ಕಾಲ ಬರಬಹುದು. 
 
ಕ್ರಿಕೇಟ್ ನಲ್ಲಿ ಸ್ಲೆಡ್ಜಿಂಗ್ ತಂತ್ರದೊಂದಿಗೆ ಗೆಲ್ಲಲ್ಲು ಪ್ರಯತ್ನಿಸುವ   ಅಸ್ಟ್ರೇಲಿಯ ದೇಶವನ್ನು ಎದುರಿಸುವ ಸ್ಪಿನ್ ಬೋಲಿಂಗ್ ನಮ್ಮ ಲ್ಲಿ ಸದಾ ಇದೇ ಬಿಡಿ 
 

Rating
No votes yet

Comments