ಬೆಂಕಿಯ ಹುಳು

ಬೆಂಕಿಯ ಹುಳು

From BENKIYA HULU
From BENKIYA HULU

ಸಿರಸಿತಾಲೂಕು ಮಂಜಗುಣಿ ಕ್ಷೇತ್ರಕ್ಕೆ ಹೋದಾಗ ನನ್ನ ಕ್ಯಾಮರಾಕ್ಕೆ ಸಿಕ್ಕ ಜೀವಿ ಇದು. ಮಿಣುಕು ಹುಳಗಳು ರಾತ್ರೆ ಕಾಣುತ್ತವೆ. ಮಿಣುಕು ಹುಳಗಳು ಬೆಳ್ಳಗೆ ಹೊಳೆಯುತ್ತವೆ. ಇದು ಮಿಣುಕುತ್ತಿರಲಿಲ್ಲ ಹಾಗೂ ಹಗಲು ಅನ್ನೆರಡು ಗಂಟೆಗೆ ಕೆಂಪಗೆ ಬೆಳಗುತ್ತಿತ್ತು.
ಇದು ಎಷ್ಟು ಪ್ರಖರವಾಗಿತ್ತೆಂದರೆ- ಮೋರ್ಟಿನ್ ಲಿಕ್ವಿಡ್ ಸೊಳ್ಳೆಯಂತ್ರವನ್ನು ರಾತ್ರೆ ಹಚ್ಚಿದಾಗ ಬೆಳಗುವ ಎಲ್ ಇ ಡಿ ಬಲ್ಬಿನಷ್ಟು ಪ್ರಖರವಾಗಿತ್ತು. ಜೊತೆಗೆ ವಿದ್ಯುತ್ ಬಲ್ಬಿನ ರೀತಿ ಒಂದು ಪಾರದರ್ಷಕ ಹೊರಕವಚವೂ ಇತ್ತು.
ಕೆಂಪಿನ ಸುತ್ತ ಪ್ರಭಾವಳಿಯಂತೆ ಕಾಣುವ ಭಾಗವೇ ಅದರ ಹೊರಕವಚ. ಅದೊಂದು ಹಾರಾಡುವ ಕೀಟ ಎಂಬುದಷ್ಟೇ ನನಗೆ ಅರ್ಥವಾದದ್ದು.

Rating
No votes yet

Comments