ಬೆಂಗಳೂರಿನ ನಯನ ರಂಗಮಂದಿರ'ದಲ್ಲಿ ಕುಮಾರಿ. ಡಿ. ಎ. ನಾಗಶ್ರೀ ಯವರಿಂದ ಭಕ್ತಿಗೀತೆಗಳು !

ಬೆಂಗಳೂರಿನ ನಯನ ರಂಗಮಂದಿರ'ದಲ್ಲಿ ಕುಮಾರಿ. ಡಿ. ಎ. ನಾಗಶ್ರೀ ಯವರಿಂದ ಭಕ್ತಿಗೀತೆಗಳು !

ಚಿತ್ರ

'ಶ್ರೀ ಪುರಂದರ ಸ್ಕೂಲ್ ಆಫ್ ಮ್ಯೂಸಿಕ್' ನ ವಿದ್ಯಾರ್ಥಿನಿ,  ಡಿ. ಎ. ನಾಗಶ್ರೀ,  ದಿ. ೧೫,  ಬುಧವಾರ, ಫೆಬ್ರವರಿ,  ೨೦೧೨ ರಂದು, ಸಂಜೆ, ೬-೩೦ ಕ್ಕೆ,  ಬೆಂಗಳೂರಿನ ಜೆ.ಸಿ.ರಸ್ತೆಯರುವ 'ಕನ್ನಡ ಭವನ'ದ 'ನಯನ ರಂಗಮಂದಿರ'ದಲ್ಲಿ, 'ಭಕ್ತಿಗೀತೆಗಳ ಕಾರ್ಯಕ್ರಮ' ನ್ನು ಪ್ರಸ್ತುತಪಡಿಸುತ್ತಿದ್ದಾಳೆ.  

ಕು. ನಾಗಶ್ರೀ, ಒಬ್ಬ ಕುಶಲ  ಸಾಫ್ಟ್ ವೇರ್ ಇಂಜಿನಿಯರ್, ಬೆಂಗಳೂರಿನ   'ಬ್ರೋಕೇಡ್ ಸಂಸ್ಥೆಯ  ಗಣಕಯಂತ್ರಗಳ ನಿರ್ವಹಣೆಯ ಮೇಲ್ವಿಚಾರಕಿ'ಯಾಗಿ ಕಾರ್ಯ ನಿರ್ವಹಿಸುತ್ತಿದ್ದಾಳೆ. ಅವಳು,  ಶ್ರೀ  ಅಶ್ವತ್ಥನಾರಾಯಣ ಮತ್ತು ಶ್ರೀಮತಿ, ಉಷಾ ಅಶ್ವತ್ಥ ನಾರಾಯಣ ದಂಪತಿಗಳ ಪ್ರೀತಿಯ ಪುತ್ರಿ. ಈಕೆಯ ಗುರುಗಳು, ವಿದುಷಿ, ಶ್ರೀಮತಿ, ವಿಜಯ ನಾಗಭೂಷಣರವರು. 
 
ತಮಗೆ ಆದರದ ಸ್ವಾಗತ.   ನಿಮ್ಮ ಬಂಧುಮಿತ್ರರು ಮತ್ತು ಆಪ್ತ ಗೆಳೆಯರನ್ನೂ ಕರೆತಂದು ಉದಯೋನ್ಮುಖ ಪ್ರತಿಭೆಯನ್ನು ಆಶೀರ್ವದಿಸಿ. 
 
ಎಲ್ಲರಿಗೂ ಆದರದ ಸ್ವಾಗತ
 
ಕ್ಷಮಿಸಿ :
ಗೆಳೆಯರೇ, ಗೆಳತಿಯರೇ, ನಮ್ಮ ಮಾನ್ಯ ಸಚಿವರಾಗಿದ್ದ ಶ್ರೀ. ಆಚಾರ್ಯರವರ ಅಕಾಲ ನಿಧನದಿಂದಾಗಿ ಮೇಲಿನ ಕಾರ್ಯಕ್ರಮ ನಡೆಸಲಾಗಲಿಲ್ಲ. ಪ್ರೇಕ್ಷಕರಿಗೆ ವಿನಯಪೂರ್ವಕವಾಗಿ ಅರಿಕೆ ಮಾಡುವುದೆನಂದರೆ, ಇದೇ ಕಾರ್ಯಕ್ರಮ ಮುಂದೆ ನಡೆಯಲಿದೆ. ತಾರೀಖಿನ ಬಗ್ಗೆ ಖಚಿತವಾದ ಮಾಹಿತಿಯಿಲ್ಲ. ಅದು ತಿಳಿದ ಬಳಿಕ ತಮಗೆ ತಿಳಿಯಪಡಿಸಲಾಗುವುದು. ಈ ಅಚಾತುರ್ಯಕ್ಕೆ  ಕ್ಷಮೆ ಬೇಡುತ್ತೇವೆ.
 
ಕಾರ್ಯಕ್ರಮ ನಿರ್ವಾಹಕರು 
Rating
No votes yet