ಬೆಂಗಳೂರು ರಿಯಲ್ ಎಸ್ಟೇಟ್ - ಸುದ್ದಿ-ಗುದ್ದು
ಬೆಂಗಳೂರು ರಿಯಲ್ ಎಸ್ಟೇಟ್ - ಸುದ್ದಿ-ಗುದ್ದು
ಸುದ್ದಿ ೧ : ಬೆಂಗಳೂರು ಪ್ರಾಪರ್ಟಿ ವ್ಯಾಲ್ಯು(property value )
ಹೆಚ್ಚಳ. ಸರ್ಕಾರಕ್ಕೆ ೮೦೦೦ ಕೋಟಿ ಆದಾಯ ನಿರೀಕ್ಷಿತ.
ಸುದ್ದಿ ೨ : ಮನೆ ಸಾಲಗಳ ಬಡ್ಡಿದರ ೧೨% ಗೆ ಹೆಚ್ಚಳ.
ಈ ಸುದ್ದಿಗಳು ಕೇವಲ ಸುದ್ದಿಗಳಾದರೆ , ಇಲ್ಲ ಇದು ವಾಸ್ತವ. ಇದು ಸಾಮಾನ್ಯನಿಗೆ ಬಹಳ ತೊಂದರೆಗೆ ಸಿಗಿಸುತ್ತದೆ.
ಉದಾಹರಣೆ : ಬಿ.ಟಿ.ಎಂ ಲೇಔಟ್ ನಲ್ಲಿ ಈಗ ಒಂದು ಸೈಟ್ ಗೆ ಮನೆಗೆ ೭೦ ಲಕ್ಷ ಕೊಡಬೇಕು. ಈ ರೀತಿ ನೋಡಿದರೆ ತಿಂಗಳಿಗೆ ೭೦ ಸಾವಿರ ಈ.ಎಮ್.ಐ ಕೊಡಬೇಕು. ಈಗೆ ಕೊಟ್ಟರೆ ತಿನ್ನೋದು ಏನು ? ಕುಡಿಯೋದು ಏನು ?
ಸುದ್ದಿ ೧ ದರ ಪ್ರಕಾರ ನಿಮ್ಮ ರಿಜಿಸ್ಟ್ರಶನ್ ಹಣ + ಟ್ಯಾಕ್ಸ್ ಕೂಡ ಹೆಚ್ಚಿನದ್ದು.
ದುಡ್ಡು ಎಲ್ಲಿಗೆ ಹೋಯ್ತು ?
ನಿಮ್ಮ ದುಡ್ಡು ಸರ್ಕಾರ + ಬ್ಯಾಂಕ್ ಗಳಲ್ಲಿ ಮಾತ್ರ ಅಲ್ಲ, ಬ್ರೊಕರ್(broker)
ಬಳಿ ಕೂಡ ಹೋಗಿರುತ್ತೆ. ೦೫ % - ೨% ವರೆಗು ಬ್ರೊಕರೆಜ್(brokerage) ಕೊಡಬೇಕು.
ಸಾಲ ಕೊಡೋಕೆ ದುಡ್ಡು !!
ನೀವು ಸಾಲ ತಗೋಳಕ್ಕೆ ಕೂಡ ದುಡ್ಡು ಕೊಡಬೇಕು. ಇದನ್ನು ಸುಂದರವಾಗಿ (processing fee) ಅಂತ ತಗೋತಾರೆ + ( ೦.೫% of Registration Cost) ಅಂತಾರೆ.
ನಿಮಗೆ ಮನೆ ಸಿಕ್ತು ಆದರೆ ಜೀವಮಾನ ಪೂರ್ತಿ ಸಾಲ ತೀರಿಸಬೇಕು.
ಹಾಗಂತ ಸೂರು ಇಲ್ಲದೆ ಇರಲು ಸಾದ್ಯವೆ ? ನಿಮ್ಮ ಅಭಿಪ್ರಾಯ ಏನು !?!