ಬೆಂಗಳೂರು ಹಬ್ಬ - "ಮುತ್ಸಂಜೆಯ ಕಥಾಪ್ರಸಂಗ" ನಾಟಕ

ಬೆಂಗಳೂರು ಹಬ್ಬ - "ಮುತ್ಸಂಜೆಯ ಕಥಾಪ್ರಸಂಗ" ನಾಟಕ

ಬೆಂಗಳೂರು ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ಕಾರ್ಯಕ್ರಮಗಳಲ್ಲಿ ಇಂದು "ಟೌನ್ ಹಾಲ್" ನಲ್ಲಿ "ಮುತ್ಸಂಜೆಯ ಕಥಾಪ್ರಸಂಗ" ಅಂತ ನಾಟಕ ಇತ್ತು. ನೊಡ್ಕೊಂಡ್ ಬಂದೆ. ಪಿ.ಲಂಕೇಶ್ ಅವರ ಕಾದಂಬರಿ ಯನ್ನ ನಾಟಕ ರೂಪಾಂತರ ಮಾಡಿ ಪ್ರದರ್ಶಿದಿದವರು "ರೂಪಾಂತರ" ನಾಟಕ ತಂಡ.

ಸುಮಾರು ಎರಡೂ ಕಾಲ್ ಘಂಟೆ ನೆಡೀತು ನಾಟಕ. ಎಷ್ಟು ಚೆನ್ನಗಿತ್ತು ಅಂದ್ರೆ, ಟೈಮ್ ಹೋಗಿದ್ದೇ ಗೊತ್ತಾಗ್ಲಿಲ್ಲ.. ರೂಪಾಂತರ ತಂಡ ಹೀಗೆ ಹಲವಾರು ಜನಪ್ರಿಯ ಕನ್ನಡ ಕಾದಂಬರಿಗಳನ್ನ ನಾಟಕ ರೂಪಾಂತರ ಮಾಡಿ ಪ್ರದರ್ಶಿಸಿದಾರೆ. Chance ಸಿಕ್ಕಿದ್ರೆ ದಯವಿಟ್ಟು ಇವರ ನಾಟಕಗಳನ್ನ Miss ಮಾಡ್ಬೇಡಿ. ಇವರ ಮುಂದಿನ ಪ್ರದರ್ಶನ ಒಂದು ಹೊಸಾ ನಾಟಕ "ರವೀಂದ್ರ ಕಲಾಕ್ಷೇತ್ರ"ದಲ್ಲಿ Dec 21'st ಸಂಜೆ ಸುಮಾರು ೬ ಘಂಟೆಗೆ. ದಯವಿಟ್ಟು ಎಲ್ಲರೂ ಬಂದು ಇಂತಹ ಪ್ರತಿಬೆಗಳಿಗೆ ಪ್ರೋತ್ಸಾಹ ನೀಡಿ. ನಮ್ಮ ಡಬ್ಬ ಚಲನಚಿತ್ರಗಳಿಗಿಂತ ಚೆನ್ನಾಗೇ ಮನೋರಂಜನೆ ಸಿಗುತ್ತೆ.

ಮುತ್ಸಂಜೆಯ ಕಥಾಪ್ರಸಂಗದ ಕಥೆ ತುಂಬ strong ಆಗಿತ್ತು. ಸ್ವಲ್ಪ ಸ್ವಲ್ಪ "God of small things" ಕಾದಂಬರಿ ತರ. ಒಂದು ಹಳ್ಳಿ, ಅಲ್ಲಿನ ರಾಜಕೀಯ, ಇದರ ಮಧ್ಯೆ ಒಂದು ಪ್ರೇಮ ಕಥೆ. ಒಬ್ಬ ತಾಯಿ ಮಗಳು ಒಂದು ಊರಲ್ಲಿ ಒಂಟಿಯಾಗಿ ಸ್ವತಂತ್ರವಾಗಿ ಸಂಸಾರ ಮಾಡ್ಥಿರ್ಬೇಕಾದ್ರೆ ಅಲ್ಲಿನ ಜನಕ್ಕೆ ಅಂದ್ರೆ ಸಮಾಜಕ್ಕೆ ಸಹಿಸ್ಕೊಳ್ಳೋಕ್ಕೇ ಆಗೋಲ್ಲ.. ನಾನಾ ರೀತಿ ತರಲೆ ಮಾಡಿ, ಏನೇನೋ ಕಥೆ ಕಟ್ಟಿ ಅವರ ಬಾಳು ಹಾಳ್ ಮಾಡೊಕ್ಕೆ ಪ್ರಯತ್ನ ಪಡ್ತಾರೆ.

ಹಳ್ಳಿ ಅಂತೀವಿ, ಬೆಂಗಳೂರು ಅಂತ ಸಿಟಿಅಲ್ಲೂ ಕೂಡ, ಒಂಟಿ ಹೆಂಗಸನ್ನ ಕಂಡ್ರೆ, ಅದ್ರಲ್ಲೂ ಅವಳೇನಾದ್ರು ಸ್ವಲ್ಪ ಜೋರ್ ಇದ್ಲೂ ಅಂದ್ರೆ, ಕಥೆ ಕಟ್ಟೊದು ಹೊಸ ಕಥೆ ಏನಲ್ಲ.. ಸ್ವಲ್ಪ ಹೆಚ್ಚು ಕಡಿಮೆ ಇರುತ್ತೆ ಅಷ್ಟೆ.. Changes ಆಗ್ಬೇಕಾಗಿರೋದು ತುಂಬಾನೆ ಇದೆ..

Rating
No votes yet

Comments