ಬೆಂಗಳೂರು - ೨೦೩೦ - .....ಒಂದು ಕಲ್ಪನೆ ?

ಬೆಂಗಳೂರು - ೨೦೩೦ - .....ಒಂದು ಕಲ್ಪನೆ ?

೦೧ - ಕಾರ್ ಪಾರ್ಕಿಂಗ್

ಕಾಲಿಂಗ್ ಎಟಿಸಿ ಕಂಟ್ರೋಲ್ ರೂಂ, ಕಾಲಿಂಗ್ ಎಟಿಸಿ ಕಂಟ್ರೋಲ್ ರೂಂ,

ದಿಸ್ ಸೈಡ್ ಎಟಿಸಿ ಗಾಂಧಿ ಬಜಾರ್, ಎಟಿಸಿ ಗಾಂಧಿ ಬಜಾರ್ ಎಫ಼್ ಸಿ-೦೫೧-ಎಮೆಮ್ ೧೨೩೫೬೧ ಮಾತಾಡಿ,

ಏನ್ಸಾರ್ ಅರ್ದ ಗಂಟೆಯಿಂದ ಕಾಯ್ತಾಇದ್ದೀನಿ, ಲ್ಯಾಂಡಿಂಗ್ ಪರ್ಮಿಷನ್ ಇಲ್ಲ ಅಂದ್ರೆ ಹೇಗೆ?

ಸಾರಿ ಸಾರ್, ವಿ ಆರ್ ಹೆಲ್ಪ್ಲೆಸ್, ತುಂಬಾ ಬ್ಯುಸಿ ಇದೆ, ಇನ್ನು ೧೫ ನಿಮ್ಷ ಕಾಯ್ಬೇಕು, ಐ ವಿಲ್ ಕಾಲ್ ಯು ಬ್ಯಾಕ್, ಪ್ಲೀಸ್ ಕೀಪ್ ಫ಼್ಲೈಯಿಂಗ್, ಒವರ್ ಅಂಡ್ ಟೈಮ್ ಔಟ್.

ಒಳಗೆ ಡ್ರೈವಿಂಗ್ ಸೀಟ್ನಲ್ಲಿ ಕುಳಿತ್ತಿದ್ದ ಮೋಹನನಿಗೆ ಬಿ ಪಿ ೧೫೦/೧೧೦ ಕ್ಕೆ ಶೂಟ್ ಆಯ್ತು. ಆದ್ರೂ ಏನೂ ಮಾಡೋಹಾಗಿಲ್ಲ.
ಪಕ್ಕದ ಸೀಟಿನಲ್ಲಿ ಮತ್ತೆ ಹಿಂದೆ ಕುಳಿತಿರುವ ಇಬ್ಬರಲ್ಲಿ ಒಬ್ಬ, ಗೊರಕೆ ಹೊಡೆಯುತ್ತಿದ್ದಾರೆ, ಮತ್ತೊಬ್ಬ ಕಿಟಕಿಯಿಂದ ಕೆಳಗೆ ನೋಡುತ್ತಾ,

-‘ನೋಡಿ ಸಾರ್ ಕೆಳ್ಗಡೆ ಒಂದು ಇರುವೆನ ತೂರ್ಸೋಕ್ಕೂ ಜಾಗ ಇಲ್ವಲ್ಲ ಸಾರ್, ಇವ್ರ ಮುಂಡಾ ಮೋಚಿದ್ರು, ಟ್ರಾಫ಼ಿಕ್ ಕಂಟ್ರೋಲ್ ನೋರು ಏನ್ಮಾಡ್ತಿದ್ದಾರೆ ಸಾರ್‘-

ಅಷ್ಟರಲ್ಲಿ ಎದುರಿನಿಂದ ಮತ್ತೊಂದು ಕಾರು ಅಡ್ಡ ಬರುತ್ತಿರುವುದನ್ನು ಗಮನಿಸಿದ ಮೋಹನ ತನ್ನ ಕಾರಿನ ನಿರ್ವಹಣ ಎತ್ತರವನ್ನು ಸ್ವಲ್ಪ ತಗ್ಗಿಸಿ ಆಗುತ್ತಿದ್ದ ಅನಾಹುತವನ್ನು ತಗ್ಗಿಸಿದ, ಕಾರ್ನ ಆಲ್ಟಿಟುಡ್ ಇಳ್ಳಿದಿದ್ದೆ ತಡ ಎಟಿಸಿ ಯಿಂದ ಕರೆ ಬಂತು

-‘ ಅಲರ್ಟ್ ಎಫ಼್ ಸಿ-೦೫೧-ಎಮೆಮ್ ೧೨೩೫೬೧ ನೀವು ಹಾರುವ ಎತ್ತರ ತಗ್ಗಿಸಿ ಎಟಿಸಿ ರೂಲ್ಸ್ ಮುರ್ದಿದ್ದೀರ, ರೂ ೫೦೦೦ ದಂಡ ಹಾಕಿದ್ದೀವಿ‘-

-‘ ಏನಿದು ಅನ್ಯಾಯ?, ಎದುರಿಂದ ಕಾರು ಸಡನ್ನಾಗಿ ಬಂದ್ರೆ ನಾನೇಮಾಡ್ಲಿ, ಜೊತೆಗೆ ಅವ್ರದ್ದು ಅಷ್ಟು ಕೆಟ್ಟದಾಗಿತ್ತು ಫ಼್ಲೈಯಿಂಗ್ ಡ್ರೈವಿಂಗ್‘-

-‘ಇಲ್ಲ ಸಾರ್ ಅದು ಎಂ ಎಲ್ ಎ ಮಗಂದು ಅವ್ರು ಹಾಗೆಲ್ಲ ಮಾಡೋಲ್ಲ, ಜೊತೆಗೆ ಅವ್ರು ಏನೆ ಮಾಡಿದ್ರು ನೀವು ಅಡ್ಜೇಸ್ಟ್ ಮಾಡ್ಕೋಬೇಕು, ಅಡ್ಜೇಸ್ಟ್ ಮಾಡುವಾಗ ನೀವು ತಪ್ಪು ಮಾಡಬಾರ್ದು ಅಷ್ಟೆ, ವಾದ ಎಲ್ಲ ಬೇಡ ಫ಼ೈನ್ ಬುಕ್ ಆಗಿದೆ ಅಷ್ಟೆ, ಒವರ್ ಅಂಡ್ ಔಟ್.‘-

-‘ಒಳ್ಳೆ ರಾಕ್ಷಸ ರಾಜ್ಯ ಆಗೋಯ್ತಲ್ಲ ಸಾರ್, ನಾಲ್ಕು ಜನಕ್ಕಿಂತ ಕಡ್ಮೆ ಇದ್ರೆ ಕಾರಿಗೆ ಪಾರ್ಕಿಂಗ್ ಇಲ್ಲ ಅಂತಾರೆ, ಪಾರ್ಕಿಂಗ್ ಜಾಗಕ್ಕೆ ಗಂಟೆಗಟ್ಲೆ ಕಾಯ್ಬೇಕು, ಒಳ್ಳೆ ನಾಯಿ ಪಾಡು ಸಾರ್ ಬೆಂಗ್ಳೂರು ಜೀವನ‘ ಅಂದ ಮೋಹನ, ಅಷ್ಟರಲ್ಲಿ ಎ ಟಿ ಸಿ ಯಿಂದ ಕಾಲ್

-‘ಅಲರ್ಟ್ ಎಫ಼್ ಸಿ-೦೫೧-ಎಮೆಮ್ ೧೨೩೫೬೧ ಲ್ಯಾಂಡಿಂಗ್ ಪರ್ಮಿಟೆಡ್ ಅಟ್ ಗವಿ ಗಂಗಾದರೇಶ್ವರ ಟೆಂಪಲ್ ಗ್ರೌಂಡ್ಸ್, ಸ್ಲಾಟ್ ನಂಬರ್ ೮೭೧, ಪ್ಲೀಸ್ ರೀಚ್ ಇನ್ ೧೦ ಮಿನಿಟ್ಸ್ ಒವರ್ ಅಂಡ್ ಔಟ್‘

ಸದ್ಯ ಇಳ್ಯಕ್ಕೆ ಜಾಗ ಸಿಗ್ತಲ್ಲ ಅಂನ್ಕೊಂಡು ಅವ್ರು ಹೇಳಿದ ಜಾಗಕ್ಕೆ, ತನ್ನ ಫ಼್ಲೈಯಿಂಗ್ ಕಾರನ್ನು (ಎಫ಼್ ಸಿ) ಹಾರಿಸಿ ತಂದು ಲ್ಯಾಂಡ್ ಮಾಡಿದ.

-‘ನಿಮ್ಮ ಕೆಲ್ಸ ಎಲ್ಲ ಮುಗಿಸಿ ಬೇಗ ಬಂದ್ಬಿಡಿ ಸಾರ್, ೩ ಹವರ್ಸ್ಗಿಂತ ಜಾಸ್ತಿ ಟೈಂ ಆದ್ರೆ ಎಕ್ಸ್ಟ್ರಾ ಚಾರ್ಜ್ ಮಾಡ್ತಾರೆ‘ ಮೋಹನ ಹೇಳಿದ ಮಾತು ಕೇಳಿ ಅವರೆಲ್ಲ ಆಯ್ತು ಬೇಗ ಬಂದ್ಬಿಡ್ತೀವಿ ಅಂತ ಹೇಳಿ ಜಾಗ ಕಾಲಿ ಮಾಡಿದ್ರು.

ಸೂಚನೆ ಎ ಟಿ ಸಿ ಅಂದ್ರೆ - ಏರ್ ಟ್ರಾಫ಼ಿಕ್ ಕಂಟ್ರೊಲರ್,  ಎಫ಼್ ಸಿ ಅಂದ್ರೆ - ಫ಼್ಲೈಯಿಂಗ್ ಕಾರ್

೦೨ - ರಸ್ತೆ ಟೋಲ್.

ಮನೆಯ ಮುಂದೆ ನಿಂತಿದ್ದ ಸುರೇಶ ಅತ್ತ ಇತ್ತ ನೋಡಿ ಯಾರು ರಸ್ತೆಯಲ್ಲಿ ಇಲ್ಲದ್ದನ್ನು ಗಮನಿಸಿ ಏನಾಗಿದೆ ಈ ಜನಗಳಿಗೆ ಎಲ್ಲ ಮನೆ ಒಳ್ಗೆ ಸೇರ್ಕೋಂಡಿದ್ದಾರೆ, ಯಾಕೆ ಹೀಗೆ ಇಲ್ಲಿ ಜನ, ಅಂದುಕೊಂಡವನೆ ಗೇಟಿನ ಚಿಲಕ ತೆಗೆದು ಹೊರ ಬಂದು, ಮುಂದಿನ ಮನೆಗೆ ಹೋಗಿ ಪ್ರಸಾದ್ ಅವರನ್ನು ಮಾತಾಡಿಸಿ ಬರೋಣ ಅಂತ ಹೊರಟ.

ಕಿಟಕಿಯಿಂದ ಗಮನಿಸುತ್ತಿದ್ದ ಮೋಹನ, -‘ಏ... ಸುರೇಶ ನಿಲ್ಲು ಹೊರಗೆ ಹೋಗ ಬೇಡ, ನಿಲ್ಲು, ನಿಲ್ಲೂ...‘ - ಎಂದು ಕೂಗುತ್ತಾ ಮನೆಯಿಂದ ಹೊರ ಬಂದು ಗೇಟ್ ತಲುಪುವುದರಲ್ಲಿ, ಸುರೇಶ ಆಗಲೆ ರಸ್ತೆಯ ಮದ್ಯೆ ನಿಂತಿದ್ದ, ಜೊತೆಗೆ ಅವನ ಮುಖದಲ್ಲಿ ಗಾಬರಿ ಇತ್ತು, ಸುರೇಶ ಯೋಚಿಸುತ್ತಿದ್ದಾನೆ, (ಸ್ವಗತ) ಏಕೆ ಈ ಮೋಹನ ಹೊರಗೆ ಹೋಗಬೇಡ ಅಂತ ಅಷ್ಟು ಗಾಬರಿಯಿಂದ ಕೂಗಿಕೊಂಡು ಬಂದ, ಎದುರು ಮನೆಗೆ ಹೋಗೋದೂ ತಪ್ಪಾ? ಇಲ್ಲ ಬೆಂಗ್ಳೂರ್ನಲ್ಲಿ ರಸ್ತೇಲಿ ಓಡಾಡಿದ್ರೆ ತಲೆಮೇಲೆ ಮಿಸೈಲ್ ಬೀಳುತ್ತಾ ?, ಅಂದುಕೊಳ್ಳುವಷ್ಟರಲ್ಲಿ ಬೀದಿಯ ಕೊನೆಯಿಂದ ಮೋಟಾರ್ ಸೈಕಲ್ನಲ್ಲಿ ಬಂದ ಇಬ್ಬರು, ಗಾಡಿ ನಿಲ್ಲಿಸಿ ರಸೀದಿ ಪುಸ್ತಕ ಹಿಡಿದು ಬಳಿ ಬಂದರು, ಅಲ್ಲಿಗೆ ಬಂದ ಮೋಹನ ಅವರನ್ನು ನೋಡಿ

- ‘ಅವರು ನಮ್ಮ ಮನೆ ಅಥಿತಿಗಳು ಸಾರ್, ಪ್ಲೀಸ್ ಸ್ವಲ್ಪ ನೋಡಿ, ಅವರೇನೂ ಎದುರು ಮನೆ ರೀಚ್ ಆಗಿಲ್ವಲ್ಲ ಬಿಟ್ಬಿಡಿ‘ -

-‘ಇಲ್ಲ ಸಾರ್ ಹಾಗೆಲ್ಲ ಆಗೋಲ್ಲ, ಅವ್ರಿಗೆ ನೀವು ತಿಳಿಸಿ ಹೇಳ್ಬೇಕು, ಹೋಗ್ಲಿ ಸ್ವಲ್ಪ ಕನ್ಸೇಷನ್ ಕೊಡ್ತೀನಿ, ೫೦೦ ರೂ ಕೊಡಿ ಹೇಗೂ ಅರ್ದ ರಸ್ತೆ ಮಾತ್ರ ಬಂದಿದ್ದಾರಲ್ವ

-‘ಸರಿ ಅಂತ ಮೋಹನ ೫೦೦ ರೂ ಕೊಟ್ಟು ರಸೀದಿ ಪಡೆದು ಸುರೇಶನನ್ನು ಒಳ ಕರೆ ತಂದ. ಆಶ್ಚರ್ಯದಿಂದ ಮೋಹನನ್ನು ನೋಡಿದ ಸುರೇಶ ಇದು ಏನು ಎಂಬಂತೆ, ನಗುತ್ತಾ ಹೇಳಿದ ಮೋಹನ
-‘ಆಶ್ಚರ್ಯ ಆಗ್ತಿದ್ಯಾ ಸುರೇಶ?, ಇದೆ ನೋಡು ಬೆಂಗಳೂರು ಬದುಕು, ನೆನ್ನೆ ರಾತ್ರಿ ತಾನೆ ಬಂದ್ಯಲ್ಲ ನಿಧಾನಕ್ಕೆ ಹೇಳೋಣ ಅನ್ಕೊಂಡಿದ್ದೆ, ಅಷ್ಟರಲ್ಲಿ ನೀನು ಎದುರು ಮನೆಗೆ ಹೊರ್ಟ್ಬಿಟ್ಟೆ, ಹೋಗ್ಲಿ ಬಿಡು‘-

-‘ಏಕೆ ಅವರ ಮನೆಗೆ ಹೊಗ್ಬಾರ್ದಾ? ಹೋದ್ರೆ ಏನು ತಪ್ಪು‘-

-‘ತಪ್ಪಲಪ್ಪ ಅವರ ಮನೆಗೆ ಹೋಗೋಕ್ಕೆ ನೀನು ರಸ್ತೆ ಬಳ್ಸಿದ್ಯಲ್ಲ ಅದಕ್ಕೆ ಟೋಲ್ ಫ಼ೀ ಕಟ್ಟಬೇಕು ಅಷ್ಟೆ. ಏಕೇಂದ್ರೆ ಇಲ್ಲಿ ಎಲ್ಲ ರಸ್ತೆಗಳನ್ನೂ ಶೋಖಪ್ಪ ಏಣಿ ಮೈನ್ಟೈನ್ ಮಾಡ್ತಿದ್ದಾರೆ, ಯಾರು ಮನೆ ಬಿಟ್ಟು ಹೊರಗೆ ಹೋದ್ರು ರಸ್ತೆ ಉಪಯೋಗಿಸಿದ್ದಕ್ಕೆ ಟೂಲ್ ಕೊಡಬೇಕು. ಆದ್ರಿಂದ ಅನಾವಶ್ಯಕವಾಗಿ ಯಾರೂ ಯಾರ ಮನೆಗೂ ಹೋಗೋಲ್ಲ.‘-

-‘ಮತ್ತೆ ಯಾರಹತ್ರನಾದ್ರು ಮಾತಾಡ್ಬೇಕಾದ್ರೆ?‘-

-‘ಇದ್ಯಲಪ್ಪ ಮೊಬೈಲ್ ಫ಼ೋನ್ ರಸ್ತೆ ಟೋಲ್ಗಿಂತ ಟಾಕ್ ಟ್ಯಾರಿಫ಼್ ಕಡಿಮೆ‘-

-‘ಅವ್ರಿಗೆ ಹೇಗೆ ಗೊತ್ತಾಗುತ್ತೆ ನಾವು ರಸ್ತೆಗೆ ಹೋದ್ರೆ?‘-

-‘ಎಲ್ಲ ಕಡೆ ಸಿಸಿ ಟಿವಿ ಕ್ಯಾಮೆರ ಇಟ್ಟಿದ್ದಾರಪ್ಪ ಹ್ಮ್..‘-

-‘ನೋಡು ಮೋಹ್ನ ಬೆಂಗ್ಳೂರಲ್ಲಿ ಒಂದು ನಾಕು ದಿನ ಇದ್ದು ಹೋಗೋಣ ಅನ್ಕೊಂಡಿದ್ದೆ, ಯಾವ್ದು ಬೇಡ ನಾಳೆ ಬೆಳ್ಳಿಗ್ಗೇನೆ ನಮ್ಮೂರ ಬಸ್ಸು ಹತ್ತಿಸಿ ಬಿಡು ಮಾರಾಯ‘-

ಒಂದು ರೀತಿಯಲ್ಲಿ ಮೋಹನನಿಗೆ ಖುಶಿ ಸದ್ಯ ಆಸಾಮಿ ಊರಿಗೆ ಹೊರ್ಟನಲ್ಲ ಅಂತ, ಇನ್ನೊಂದು ಕಡೆ, ಛೆ ಏನಿದು ನಮ್ಮ ಬೆಂಗಳೂರು ಬದುಕು ಎಲ್ಲಕ್ಕೂ ದುಡ್ಡು ದುಡ್ಡು. ಮನೆಗೆ ಬಂದ ನೆಂಟರನ್ನು ಸ್ವಲ್ಪ ದಿನ ಇರಿಸಿಕೊಳ್ಳುವಷ್ಟು ಇಲ್ಲವಾಯಿತಲ್ಲ ಹಾಳು ಬೆಂಗಳೂರು ಬದುಕು.


೦೩- ಮೊಬೈಲ್ ಸಿಂ

ಆಸ್ಪತ್ರೆಯ ಕಾರಿಡಾರ್ನಲ್ಲಿ ಕುಳಿತು ಕಾಯುತ್ತಿರುವ ಎಲ್ಲರಿಗೂ ಕಾತರ. ಮದುವೆಯಾಗಿ ೨ ವರ್ಷದ ನಂತರ ಮನೆಗೆ ಹೊಸ ಸದಸ್ಯ ಬರುತ್ತಿದ್ದಾನೆ ಎಂಬ ಸಡಗರ ಎಲ್ಲರಿಗೂ. ಲೆಬರ್ ಓ ಟಿ ಎಂಬ ಫಲಕವನ್ನು ನೋಡಿದ ರಾಜೇಂದ್ರನಿಗೆ, ಒಳಗಿರುವ ತನ್ನ ಪತ್ನಿ ಯಶೋಧ ಅದೆಷ್ಟು ನೋವು ಅನುಭವಿಸುತ್ತಿದ್ದಳೊ ಎಂಬ ವೇದನೆ ಮನದೊಳಗೆ, ಜೊತೆಗೆ ನನ್ನ ಅವಳ ನಡುವೆ ಮತ್ತೊಂದು ಹೊಸ ಜೀವ ಸೇರುತ್ತಿದೆ ಎಂಬ ಸಂತೋಷ ಮನಸ್ಸಿನ ಮತ್ತೊಂದು ಮೂಲೆಯಲ್ಲಿ.

ತನ್ನ ತಾಯಿಯ ಮುಖ ನೋಡಿ ಮುಗುಳ್ನಕ್ಕ ರಾಜೇಂದ್ರ, ಹತ್ತಿರ ಹೋಗಿ ತಾಯಿಯ ಪಕ್ಕ ಇದ್ದ ಜಾಗದಲ್ಲಿ ಕುಳಿತ, ಮಗನನ್ನು ನೋಡಿ, ಏನೂ ಗಾಬರಿ ಬೇಡ ಎಂದು ಕಣ್ಣಿನಲ್ಲೆ ಹೇಳಿದರು ರಾಜೇಂದ್ರನ ತಾಯಿ.

ಅಷ್ಟರಲ್ಲಿ ಲೇಬರ್ ಓ ಟಿ ಯಿಂದ ಹೊರ ಬಂದ ಡಾಕ್ಟರ್ ಹತ್ತಿರ ಬರುವಂತೆ ಬಾಗಿಲ ಬಳಿ ನಿಂತು ಕರೆದರು.

-‘ಕಂಗ್ರಾಜುಲೇಷನ್ಸ್ ಮಿಸ್ಟರ್ ರಾಜೇಂದ್ರ, ನೀವು ಗಂಡು ಮಗುವಿನ ತಂದೆ ಆಗಿದ್ದೀರ, ವೆರಿಗಿಡ್ ಬರ್ತ್ ವೈಟ್ ಬೇಬಿದು ಓ ಕೆ.‘-

-‘ಓ... ಥ್ಯಾಂಕ್ ಯು ಡಾಕ್ಟರ್, ಮತ್ತೆ ತಾಯಿ ಮಗು ಹೇಗಿದ್ದಾರೆ‘-

-‘ಏನೂ ತೊಂದ್ರೆ ಇಲ್ಲ ಬೋತ್ ಆರ್ ಡೂಯಿಂಗ್ ವೆಲ್‘-

-‘ಥ್ಯಾಂಕ್ ಯು ಒನ್ಸ್ ಅಗೈನ್ ಡಾಕ್ಟರ್‘-

-‘ದಟ್ಸ್ ಓ ಕೆ ರಾಜೇಂದ್ರ, ಈಗ ನಾನು ನಿಮ್ಮನ್ನ ಕರೆದಿದ್ದು, ನೋಡಿ ಈಗ ಲೇಟೆಸ್ಟ್ ಟೆಕ್ನಾಲಜಿ ಎಲ್ಲ ಬಂದಿದೆ, ನಮ್ಮ ಆಸ್ಪತ್ರೆಲೂ ನಾವು ಲಾಂಚ್ ಮಾಡಿದ್ದೇವೆ ಅಂಡ್ ಇಟ್ಸ್ ಯೆ ವೆರಿ ಗುಡ್ ಸುಕ್ಸೆಸ್ ಆಲ್ಸೊ ಯು ನೋ,  ನಿಮ್ಮ ಬೇಬಿಗೆ ಮೊಬೈಲ್ ಸಿಂ ಇನ್ಸರ್ಟ್ ಮಾಡ್ಬಿಡ್ತಿವಿ ಅಂಡ್ ಹಿ ವಿಲ್ ಬಿ ಗಿವನ್ ಅ ಐಡಿ ನಂಬರ್, ಮತ್ತೆ ಮೊಬೈಲ್ ತಗೊಬೇಕಾದ್ದೆ ಇಲ್ಲ, ಎಲ್ಲಿದ್ರೂ ಕಾಂಟ್ಯಾಕ್ಟ್ ಮಾಡ್ಬಹ್ದು, ಏನಂತೀರ?‘-

-‘ಓಹ್ ಸುಪರ್ಬ್ ಪ್ಲೀಸ್ ಗೊ ಅಹೆಡ್ ಡಾಕ್ಟರ್, ಮತ್ತೆ ಚಾರ್ಜಸ್ ಹೇಗೆ?‘-

-‘ಇಲ್ಲೆ ವೈಟ್ ಮಾಡಿ, ನಮ್ಮ ಟೆಕ್ನಿಕಲ್ ಮಾರ್ಕೇಟಿಂಗ್ ಟೀಂ ನಿಮಗೆ ಈ ಬಗ್ಗೆ ಹೆಚ್ಚಿನ ವಿವರ ಕೊಡ್ತಾರೆ, ಅವರನ್ನು ಕಳಿಸ್ತೀನಿ ಓಕೆ‘-

-‘ನೋ ಪ್ರಾಬ್ಲಂ ಡಾಕ್ಟರ್, ಥ್ಯಾಂಕ್ ಯು‘-

ತನ್ನ ತಾಯಿ ತಂದೆಯ ಬಳಿ ಬಂದ ರಾಜೇಂದ್ರ, ಡಾಕ್ಟರ್ ಹೇಳಿದ ತನ್ನ ಹೆಂಡತಿ, ಮಗುವಿನ ಬಗ್ಗೆ ಮತ್ತು ಮೊಬೈಲ್ ಸಿಂ ಬಗ್ಗೆ ಅವರಿಗೂ ವಿವರಿಸಿದ.

ಪಾಪ ಹೊಸದಾಗಿ ಪ್ರಪಂಚಕ್ಕೆ ಬಂದ ಆ ಮಗುವಿನ, ತಾತ ಅಜ್ಜಿ ಒಬ್ಬರಿಗೊಬ್ಬರು ಮುಖ ನೋಡಿಕೊಂಡರು.

 

Rating
No votes yet

Comments