ಬೆಂಗಳೂರು IISc ಯ ಡಿಜಿಟಲ್ ಲೈಬ್ರರಿ ತಾಣದಲ್ಲಿರುವ ಪುಸ್ತಕಗಳು ಯಾವುವು ? ಎ೦ಥವು ?

ಬೆಂಗಳೂರು IISc ಯ ಡಿಜಿಟಲ್ ಲೈಬ್ರರಿ ತಾಣದಲ್ಲಿರುವ ಪುಸ್ತಕಗಳು ಯಾವುವು ? ಎ೦ಥವು ?

http://www.new.dli.ernet.in/testpage.html ಇದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ದವರು ಏರ್ಪಡಿಸಿದ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದ ತಾಣ . ಇಲ್ಲಿ ಉಳಿದ ಭಾಷೆಯ ಪುಸ್ತಕಗಳ ಜತೆ ಕನ್ನಡದ ಏಳುನೂರಕ್ಕೂ ಹೆಚ್ಚು ಪುಸ್ತಕಗಳಿವೆ .
ಬಹುತೇಕ ಪುಸ್ತಕಗಳು ಧಾರ್ಮಿಕ ಗ್ರಂಥಗಳು . ತಿರುಪತಿ ತಿರುಮಲೆ ದೇವಸ್ಥಾನದ ಪತ್ರಿಕೆಯ ಸಂಚಿಕೆಗಳು ರಾಶಿ ರಾಶಿ. ಕುಮಾರವ್ಯಾಸನ ಭಾರತದ ಏಳೆಂಟು ನೂರು ಪುಟಗಳ ಏಳೆಂಟು ಸಂಪುಟ ಇವೆ . ವಾಲ್ಮೀಕಿ ರಾಮಾಯಣದ ಸಂಪುಟಗಳಿವೆ .
ನಿಮಗೆ ಗೊತ್ತಿರಬಹುದು .. ಕನ್ನಡದಲ್ಲಿ ಹಿಂದೊಮ್ಮೆ ದಪ್ಪ ದಪ್ಪ ಜ್ನಾನಕೋಶಗಳು ಬಂದಿದ್ದುವು ... ಶಿವರಾಮಕಾರಂತರ ಮುಂದಾಳುತನದಲ್ಲಿ .. ಅವುಗಳಲ್ಲಿ ಒಂದು ಇಲ್ಲಿದೆ ... ಅದರಲ್ಲಿನ ಜ್ನಾನ ಔಟ್ ಡೇಟೆಡ್ ಆಗಿದೆಯೋ ಏನೋ....
ಮತ್ತೆ
ನ್ಯಾಶನಲ್ ಬುಕ್ ಟ್ರಸ್ಟ್ ನ ಇಪ್ಪತ್ತಕ್ಕೂ ಹೆಚ್ಚು ಪುಸ್ತಕಗಳಿವೆ ... ಅದರಲ್ಲಿ ಕೆಲವು ಮಕ್ಕಳಿಗಾಗಿ ... ಇನ್ನು ಕೆಲವು ಬೇರೆ ಭಾಷೆಗಳಿಂದ ಅನುವಾದ ಕತೆ , ಕಾದಂಬರಿ , ನಾಟಕಗಳು ... ಮಕ್ಕಳ ಶಿಕ್ಷಣ ಕುರಿತಾದ ಜಗತ್ ಪ್ರಸಿದ್ಧ ಮಹತ್ವದ ಪುಸ್ತಕ ತೊತ್ತೋಚ್ಚಾನ್ ಎಂಬ ಸುಪ್ರಸಿದ್ದ ಪುಸ್ತಕವೂ ಇಲ್ಲಿದೆ . ಮತ್ತೆ ಮಾಲ್ಗುಡಿ ಖ್ಯಾತಿಯ ಆರ್ ಕೆ ನಾರಾಯಣರ 'ಸ್ವಾಮಿ ಮತ್ತು ಅವನ ಗೆಳೆಯರು' ಇಲ್ಲಿದೆ .
ಪಾ.ವೆಂ. ಅವರ ಪದಾರ್ಥಚಿಂತಾಮಣಿಯ ಎರಡನೇ ಭಾಗ ಇಲ್ಲಿದೆ . ಸಂಸ್ಕ್ುತ ಕಲಿಯಬಯಸುವ ಸಂಸ್ಕ್ುತದಲ್ಲೇ ಮಾತುಕತೆ ಆಡಬಯಸುವವರ ಸಲುವಾಗಿ ಕನ್ನಡ-ಸಂಸ್ಕ್ುತ ಶಬ್ದಕೋಶವೊಂದು ಇಲ್ಲಿದೆ. ..
ಮುಂದೊಮ್ಮೆ ಹೈದ್ರಾಬಾದ್ ತಾಣದ ಬಗ್ಗೆಯೂ ಇದೇ ರೀತಿ ಬರೆಯುವೆ ನಿರೀಕ್ಷಿಸಿ .. ಅಲ್ಲಿ ಮೂರೂವರೆ ಸಾವಿರ ಪುಸ್ತಕಗಳಿವೆ ....

Rating
No votes yet

Comments