ಬೆಂಮನಸಾಸಂ ಬಸ್ಸಿನೊಳಗೊಂದು ಕನ್ನಡ ಸಂವಾದ!!!

ಬೆಂಮನಸಾಸಂ ಬಸ್ಸಿನೊಳಗೊಂದು ಕನ್ನಡ ಸಂವಾದ!!!

"ನಮಸ್ಕಾರ"


"ಯೆಸ್, ನಮಸ್ಕಾರ...ಟೆಲ್ ಮಿ"


"ನೀವು ಕನ್ನಡದವರೇ?"


"ಆಫ್ಕೋರ್ಸ್ ಹೌದು ನಾನ್ ಕನ್ನಡಿಗ"


"ನೀವು ಏನ್ ಕೆಲ್ಸ ಮಾಡ್ಕೊಂಡು ಇದ್ದೀರಿ?"


"ಐ ಆಮ್ ವರ್ಕಿಂಗ್ ಇನ್ ಆನ್ ಎಮ್ ಎನ್ ಸಿ"


"ಅಂದ್ರೆ ?...ಅರ್ಥ ಆಗ್ಲಿಲ್ಲ"


"ನಾನು ಒಂದು ಎಮ್ ಎನ್ ಸೀನಲ್ಲಿ ವರ್ಕ್ ಮಾಡ್ತಿದೀನಿ"


"ಓಹೋ ಸರಿ ಬಿಡೀ...ನನಗ್ಯಾಕೆ...ಸರಿ"


"ನಿಮ್ಮ ಹವ್ಯಾಸಗಳೇನು?..."


"ಹವ್ಯಾಸ ಯು ಮೀನ್ ಹಾಬಿಟ್ಸಾ , ಹಾಬಿಟ್ಸ್ ಅಂದ್ರೆ...ಸಾಂಗ್ಸ್ ಕೇಳೋದು, ಕನ್ನಡ ಸಾಂಗ್ಸ್ ಟೂ, ವಾಚಿಂಗ್ ಮೂವೀಸ್, ನಾನ್ ವಾಚ್ ಈವನ್ ಕನ್ನಡ ಮೂವೀಸ್, ವೀಕೆಂಡ್ನಲ್ಲಿ ಫ್ರಂಡ್ಸ್ ಜೊತೆಗೆ ಟ್ರಿಪ್ ಹೋಗೋದು...."


"ನೀವು ಶಾಲೆಯಲ್ಲಿ ಕನ್ನಡ ಭಾಷೆಯನ್ನು ಕಲಿತಿಲ್ವೇ?"


"ಆಫ್ ಕೋರ್ಸ್ ಕಲ್ತಿದ್ದೇನೆ... ನಾನ್...ಕನ್ನಡ ಮೀಡಿಯಂನಲ್ಲೇ ಓದಿದ್ದೆ..ನಮ್ಮ ಮನೇನಲ್ಲಿ ಎವೆರಿಬಡಿ  ಕನ್ನಡನಾಲ್ಲೇ ಮಾತಾಡ್ತಾರೆ...ನೀವು"


"ಹೂಂ...ನಾನು ಕನ್ನಡದಲ್ಲೇ ಓದಿದ್ದು...ಕನ್ನಡದಲ್ಲೇ ಮಾತಾಡ್ತೀವಿ ಮನೆಯಲ್ಲಿ..."


"ಗುಡ್ ಗುಡ್...ಐ ಲೈಕ್ ಇಟ್...ನಾವೆಲ್ಲಾ ಕನ್ನಡದಲ್ಲೇ ಮಾತಾಡ್ಬೇಕು..."


"ಹೂಂ ಅದೂ ಸರೀನೇ...ಸರಿ ನಾನಿಳಿಯುವ ಸ್ಥಳ ಬಂತು...ಬರ್ತೀನಿ ನಮಸ್ಕಾರ"


"ಓಕೆ..ಓಕೆ...ನೈಸ್ ಟಾಕಿಂಗ್ ...ಸೀ ಯು..."


"ನನಗೂ ಸಂತೋಷ...ನಾನಿನ್ನು ಬರ್ತೀನಿ"


 


(ಇದು ಕಳೆದವಾರ ನನ್ನ ಕಿವಿಗಳು ಕೇಳಿಸಿಕೊಂಡ ಸಂವಾದ)

Rating
No votes yet

Comments