ಬೆಣ್ಣೆ ಕದ್ದ ನಮ್ಮ ಕೃಷ್ಣ! ಬೆಣ್ಣೆ ಕದ್ದನಮ್ಮ!

ಬೆಣ್ಣೆ ಕದ್ದ ನಮ್ಮ ಕೃಷ್ಣ! ಬೆಣ್ಣೆ ಕದ್ದನಮ್ಮ!

ಚಿತ್ರ

ಒಂದು ಪಾದವ ನೆಲದಲಿರಿಸುತ ಬಾಗಿಸುತ ಮತ್ತೊಂದನು
ನಂದ ಭವನದಿ ಮೊಸರ ಕಡೆದಿಹ ತಾಳದುಲಿತಕೆ ಕುಣಿಯುತ
ಅಂದದಲಿ ಬಳುಕಾಡಿಸುತ ತಾ ತೊಟ್ಟ ಚಂದದೊಡವೆಗಳ
ಬಂದು ನಿಲ್ಲಲಿ ಕಣ್ಣ ಮುಂದೆಯೆ ಬೆಣ್ಣೆ ಬೇಡುವ ಚೆಲುವನು

ಸಂಸ್ಕೃತ ಮೂಲ  (ವೇದಾಂತ ದೇಶಿಕನ ಗೋಪಾಲ ವಿಂಶತಿ - ೪) :

ಅವಿರ್ಭವತ್ವನಿಭೃತಾಭರಣಮ್ ಪುರಸ್ತಾತ್
ಅಕುಂಚಿತೈಕ ಚರಣಂ ನಿಭೃತಾನ್ಯ ಪಾದಂ
ದಧ್ನಾ ನಿಮಂಥ ಮುಖರೇಣ ನಿಬದ್ಧ ತಾಳಂ
ನಾಥಸ್ಯ ನಂದ ಭವನೇ ನವನೀತ ನಾಟ್ಯಂ |

-ಹಂಸಾನಂದಿ

ಕೊ: ಮೂಲದಲ್ಲಿ ನಾಟ್ಯದ ಮೇಲೆ ಒತ್ತು ಹೆಚ್ಚಾಗಿದ್ದರೆ, ಅನುವಾದದಲ್ಲಿ ಅದು ನಾಟ್ಯವಾಡುವವನ ಮೇಲೆ ಹೆಚ್ಚಾದಂತೆ ಕಾಣುತ್ತಿದ್ದರೆ ಅದು ನನ್ನ ಕೊರತೆಯಷ್ಟೇ.

ಕೊ.ಕೊ: ಅನುವಾದವು ಮಲ್ಲಿಕಾಮಾಲೆಯ ಚೌಪದಿಯಲ್ಲಿದೆ ( ಮತ್ತ ಕೋಕಿಲವೆಂದೂ ಕರೆಯುತ್ತಾರೆ).

ಕೊ.ಕೊ.ಕೊ: ಬೆಣ್ಣೆ ಕದ್ದ ನಮ್ಮ ಕೃಷ್ಣ ಬೆಣ್ಣೆ ಕದ್ದನಮ್ಮ ಎಂಬುದು ನಿಸಾರ್ ಅಹಮದ್ ಅವರ ಪ್ರಸಿದ್ಧ ಕವಿತೆ.

ಚಿತ್ರ ಕೃಪೆ: ಕಲಾವಿದ ಕೇಶವ್ ವೆಂಕಟರಾಘವನ್ 

Rating
No votes yet

Comments