ಬೆಳಕಾಗಿ ಬಾ
ಬೆಳಕಾಗಿ ಬಾ
ನೀನು ನಿನಗಾಗಿ ನನಗಾಗಿ ನಕ್ಕು ನಲಿದೆ
ಹೊಸದಾದ ಹುಮ್ಮಸ್ಸು ಹೊರಚೆಲ್ಲಿ ಹೊರಟೆ
ನಿನ್ನೀ ನಿನ್ನತನದ ನಸುಕಿನಲಿ ನೆಂದು ನಾ ನಲಿದೆ
ಹರೆಯದ ಹೊಸತನವ ಹನಿಹನಿಯಾಗಿ ಹರಡಿಕೊಂಡೆ || ೧ ||
ಕಿವಿಯೊಳಗೆ ಕುಹುಗುಟ್ಟುವ ಕೋಗಿಲೆಯೆ
ಮನದೊಳಗೆ ಮುದ ಮೂಡಿಸುವೆಯೇಕೆ?
ಕರಹಿಡಿದು ಕಾಣದ ಕನಸುಗಳ ಕಾಣಿಸುವೆ
ಮನವೆಂಬ ಮರ್ಕಟದೊಳಗೆ ಮಾಡಿರುವೆ ಮನೆಯೇಕೆ? || ೨ ||
ಸರಿಗಮದ ಸುಧೆಯ ಸವಿಸಿ ಸದ್ದಿಲ್ಲದೆ ಸರಿದಿರುವೆ
ತಳಮಳದ ತಮಸಿನಲಿ ತಿರಸ್ಕರಿಸಿ ತಳುಹಿರುವೆ
ಸೆರೆಮನೆಯಲಿ ಸೆರೆಯಿಟ್ಟರೂ ಸೊಕ್ಕಿನಲಿ ಸಂತಸದಲಿರುವಂತೆ
ತಾನ್ಯಾರು ತನಗೊಪ್ಪುವುದೇನೆಂದು ತನಗರಿಯದೆ ತನ್ನನ್ನೆ ತೊರೆದಿರುವೆ || ೩ ||
ನಿನ್ನದೆ ನೆನಪಿನಲಿ ನರಳುತಿರುವೆ, ನನಗಾಗಿ ನೀನಿಲ್ಲದ ನೋವ ನನ್ನದಾಗಿರಿಸಿರುವೆ
ಬೆಳಕಿಲ್ಲದ ಬಾಳಾಗಿಹುದೆನ್ನದು, ಬೆಳಕಿನ ಬಯಕೆಯಿನ್ನು ಬಾರದು, ಬಯಸಿರುವೆ, ಬರುವುದಾದರೆ ಬಾಯೆನ್ನ್ ಬದುಕಿನ ಬೆಳಕಾಗಿ
>>ಧಾಮ
Rating