ಬೆಳಕಾರುವಾ ಮುನ್ನ ಕತ್ತಲಾವರಿಸದಿರಲಿ
ಚಿತ್ರ
ಬೆಳಕಿನಾ ಹಬ್ಬ ಬಂದಿದೆ ಮತ್ತೊಮ್ಮೆ.....
ಅಮ್ಮನಿಗೆ ಕೋಡುಬಳೆ, ಕರ್ಜಿಕಾಯಿ ಮಾಡುವ ಸಂಭ್ರಮ.
ಅಪ್ಪನಿಗೆ ಮಾವಿನ ಸೊಪ್ಪು, ಬಾಳೆದಿಂಡು, ದಿನಸಿ ಸಾಮಾನು, ಮಕ್ಕಳಿಗೆ ಬಟ್ಟೆ, ಪಟಾಕಿ ತರುವ ಕೆಲಸ.
ಅಜ್ಜಿಗೆ ದೇವರ ಕೋಣೆಯನ್ನ ಸ್ವಚ್ಛಗೊಳಿಸುವ ಕಾಯಕ.
ಅಜ್ಜನಿಗೆ ಬಾಲ್ಯಕಾಲದ ಹಬ್ಬದ ಸಂಭ್ರಮವನ್ನ ಮೊಮ್ಮಕ್ಕಳಿಗೆ ಹೇಳುವಾಸೆ.
ಅಕ್ಕ ತಂಗಿಯರಿಗೆ ರಂಗೋಲಿ ಹಾಕುವ, ಹೊಸ ಬಟ್ಟೆಯನ್ನ ಎಲ್ಲರಿಗೂ ತೋರಿಸುವ ಉತ್ಸಾಹ.
ಅಣ್ಣ-ತಮ್ಮಂದಿರಿಗೆ ಲಕ್ಷ್ಮಿ ಪಟಾಕಿ, ಮೆಣಸಿನಕಾಯಿ ಪಟಾಕಿ, ಆಟಂ ಬಾಂಬ್ ಸಿಡಿಸುವ ಆತುರ.
.
.
.
ಹಚ್ಚುವಾ ಮೊದಲು ಒಂದು ಕ್ಷಣ ತಡೆ , ಪಟಾಕಿಗೆ ಬೆಂಕಿ ಕೊಡುವ ಮುನ್ನ ಆ ಶಬ್ಧವನ್ನ ಅರಗಿಸಿಕೊಳ್ಳಲಾಗದ ನಿಮ್ಮ ಅಜ್ಜ ಅಜ್ಜಿಯನ್ನ ಒಮ್ಮೆ ನೋಡು , ಅವರಾದರೂ ನೀನು ಹಚ್ಚುತ್ತಿರುವುದನ್ನ ನೋಡಿ ಕಿವಿ ಮುಚ್ಚಿಕೊಂಡಾರು ಆದರೆ ನಿನ್ನ ಮನೆಯಲ್ಲೇ ಬೆಳೆದ ನೀನೇ ಮುದ್ದಿನಿಂದ ಸಾಕಿದ ನಾಯಿ ಬೆಕ್ಕುಗಳಿಗಾಗಲಿ, ದನ ಕರುಗಳಿಗಾಗಲಿ ಮುಂದಿನ ಕ್ಷಣದಲ್ಲಿ ಭಯಕರವಾದ ಶಬ್ಧವೊಂದು ಅವುಗಳ ಕಿವಿಯನ್ನು ಅಪ್ಪಳಿಸುತ್ತದೆಂದು ಆ ಮೂಕಪ್ರಾಣಿಗಳಿಗೆ ಹೇಗಾದರೂ ಅರ್ಥವಾದೀತು.
ಗೆಳೆಯಾ ಹಚ್ಚುವಾ ಮುನ್ನ ಕೇವಲ ನಿನ್ನ ಸಂತೋಷವನ್ನೇ ಮಾತ್ರ ನೋಡಬೇಡಾ, ಇನ್ನೊಬ್ಬರ ದುಃಖವನ್ನೂ ಅರಿಯುವ ಮನಸ್ಸು ನಿನ್ನದಾಗಲಿ ಅಷ್ಟಕ್ಕೂ ನೀನೊಬ್ಬನೇ ಇಲ್ಲಿ ಬದುಕುತ್ತಿರುವುದಿಲ್ಲ, ನೀನಿರುವುದು ನಿನ್ನದೇ ಸಮಾಜದವರೊಂದಿಗೆ ಯಾವುದೋ ಮರುಭೂಮಿಯಲ್ಲೋ ಅಥವಾ ಇನ್ಯಾವುದೋ ಕಾಡಿನಲ್ಲೋ ಏಕಾಂಗಿಯಾಗಲ್ಲ.
ಭೂಮಿಚಕ್ರ, ತುಳಸೀಕಟ್ಟೆ, ಸುರ್ಸುರ್ ಬತ್ತಿಯನ್ನ ಹಚ್ಚು, ಅದು ನಿನಗೆ ಮತ್ತು ನಿನ್ನವರಿಗೆ ಕೊಡುವ ಸಂತೋಷ ಆ ಕಿವಿ ತಮಟೆ ಒಡೆದುಹೋಗುವ ಶಬ್ಧದಲ್ಲಿ ಸಿಗುವುದಿಲ್ಲ.
ಬೆಳಕಿನಾ ಹಬ್ಬ ಬಂದಿದೆ ಮತ್ತೊಮ್ಮೆ
ಸಾಲು ಸಾಲು ದೀಪಗಳಾ ಹಚ್ಚೊಮ್ಮೆ
ಹಚ್ಚದಿರು ಶಬ್ದ ಬರುವ ಪಟಾಕಿ ಮತ್ತೊಮ್ಮೆ
ಕೇಳಲಾಗದು ಯಾವ ಶಬ್ಧವೂ ಮುಂದೊಮ್ಮೆ
ಹೋದ ದೃಷ್ಟಿ ಬಾರದು ಮಗದೊಮ್ಮೆ
.........
ಸರ್ವರಿಗೂ ದೀಪಾವಳಿ ಸಂತಸ ತರಲಿ

Rating
Comments
"ಎಚ್ಚರಿಕೆ" ನೀಡುವ ಕವನ
"ಎಚ್ಚರಿಕೆ" ನೀಡುವ ಕವನ ಚನ್ನಾಗಿದೆ ಚೇತನ್ ರವರೇ ......ಸತೀಶ್
In reply to "ಎಚ್ಚರಿಕೆ" ನೀಡುವ ಕವನ by sathishnasa
ಆತ್ಮೀಯ ಚಿಕ್ಕು,
ಆತ್ಮೀಯ ಚಿಕ್ಕು,
ಕತ್ತಲಿಂದ ಬೆಳಕಿಗೆ ಬರಬೇಕು, ಬೆಳಕಿನಿಂದ ಕತ್ತಲೆಗೆ ಹೋಗಬಾರದು. ದೀಪದ ಸಂತತಿ ಸಾವಿರವಾಗಲಿ , ಎಂದು ಎಂದೆಂದೂ ಆಶಿಸುವ ..............
ದೀಪಾವಳಿ *** ಚಿಕ್ಕು123
ಲೇಖನ / ಕವನ ಚೆನ್ನಾಗಿದೆ ಚಿಕ್ಕು . ನೀವು ಕಳೆದ ದೀಪಾವಳಿಯಲ್ಲಿ ಒ0ದು ಬರಹ ಬರೆದಿದ್ದ ನೆನಪಿದೆ
ಬೆಳಕಾರುವಾ ಮುನ್ನ...........
ಪ್ರಿಯ ಚಿಕ್ಕುರವರೇ, ಹಬ್ಬದ ಸಂದರ್ಭದಲ್ಲಿ ಉತ್ತಮ ಸಮಯೋಚಿತ ಲೇಖನ. ಪರಿಸರ ಕಾಳಜಿಯೊಂದಿಗೆ ಸಮಾಜಮುಖಿ ಚಿಂತನೆ ಅಭಿನಂದನೀಯ.