ಬೆಳ್ಳಿ ತಿಂಮ ನೂರೆಂಟು ಹೇಳಿದ-ಬೀchi ಸಂಗ್ರಹ
ಇಂದು ನನಗೆ ಅನಾಯಾಸವಾಗಿ ಬೀಚಿಯವರ ಈ ಮೇಲಿನ ಪುಸ್ತಕ ಸಿಕ್ಕಿತು
ನಕ್ಕೂ ನಕೂ ಸುಸ್ತಾಗಿ ಹೋದೆ
ಬೀಚಿಯವರ ಈ ಎಷ್ಟೊ ಕತೆಗಳು ಬೇರೆ ಬೇರೆ ಹೆಸರಿನಲ್ಲಿ ಈ-ಮೇಲ್ ನಲ್ಲಿ ಬಂದಿವೆ ಇಂಗ್ಲಿಷ್ನಲ್ಲಿ
ಆದರೆ ಕನ್ನಡದಲ್ಲಿ ನನಗೆ ಸಿಕ್ಕಿರಲಿಲ್ಲ
ಅದನ್ನು ಸ್ಚಾನ್ ಮಾಡಿಟ್ಟು ಕೊಳ್ಳೋಣ ಎಂದರೆ ಕ್ಲಾರಿಟಿ ಅಷ್ಟು ಚೆನಾಗಿ ಇರಲಿಲ್ಲ
ಜೋಪನವಾಗಿರುತ್ತದೆ ಎಂದು ದಿನಕ್ಕೊಂದು ಪುಟವನ್ನು ಕೀಲಿಸಿ ಇಟ್ಟುಕೊಳ್ಳಲು ನಿರ್ಧರಿಸಿದೆ.
ಆ ಸವಿಯನ್ನು ನಾನೊಬ್ಬಳೆ ಸವಿಯುವದಕ್ಕಿಂತ ಎಲ್ಲರಿಗೂ ಹಂಚೋಣ ಎನಿಸಿತು
ಹಾಗಾಗಿ ನನ್ನೆಲ್ಲ ಮಿತ್ರರಿಗೂ ಇದನ್ನು ಕಳಿಸುತ್ತಿದ್ದೇನೆ
ಹಾಗೆ ನಮ್ಮ ಸಂಪದದ ಬಳಗಕ್ಕೂ ಈ ಕಿರುಹಾಸ್ಯಗಳು
ಪುಟ ೧
ತಿಂಮನ ಜನನ
ಅಂದೇ ಬಂದು ಶಾಲೆಗೆ ಸೇರಿದ ಕಿರಿಯ ತಿಂಮ
ಮಾಸ್ತ್ರರರು ಅವನನ್ನು ಪರೀಕ್ಶೆ ಮಾಡಲೆಂದು ಕೆಲವು ಪ್ರಶ್ನೆಗಳನ್ನು ಕೇಳುತಿದ್ದರು
"ನಿನಗೆ ಓದಲು ಬರುತ್ತೇಯೆ? " ಎಂದರು
ಕಲಿಯುತ್ತೇನೆ
ಬರೆಯಲಿಕ್ಕೆ?
ಅದನ್ನೂ ಕಲಿಯುತೇನೆ
"ನಿಮ್ಮ ತಂದೆಯವರ ಹೆಸರು?"
ಕೂಡಲೆ ಹೇಳಿದ ತಿಂಮ
ನಗೆಯಾಡುತ್ತಾ ತಲೆಯ ಮೇಲೆ ಕೈಯಾಡಿಸಿ ಮಾಸ್ತ್ರರರು ನುಡಿದರು
" ಶಬಾಸ್ ಎಂತಹ ಗ್ನಾಪಕ ಶಕ್ತಿಯೋ ನಿನ್ದದು . ಯಾವ ಊರಲ್ಲಿ ಹುಟ್ಟಿದ್ದು ನೀನು ಮರಿ?"
"ನಾನು ಹುಟ್ಟಲೇ ಇಲ್ಲ ಸಾರ್ . ನನಗೆ ಮೊದಲಿಂದಲೂ ಮಲತಾಯಿ ಇದ್ದಾರೆ"
-----------------------------------------
ಒಂದೊಂದು ಪುಟಕ್ಕೂ ಕೆಲವು ವಕ್ರ ತುಂಡೊಕ್ತಿಗಳನ್ನು ಬರಿದಿದ್ದಾರೆ
ವಿಡಂಬನ’ ಸಾಹಿತ್ಯ! ಯಾರು ಸ್ವಾಮಿ ವಿಡಂಬ? ಅವನ ಹೆಸರನ್ನೇ ಕೇಳಿಲ್ಲವಲ್ಲ ನಾವು! ಯಾವ ಶತಮಾನದ ಕವಿ ಈ ವಿಡಂಬ ಎಂಬುವವನು?
ಹಾಗೆ ಇದನ್ನು ಕೀಲಿಸಿ ಹಂಚಲು ಯಾರದ್ದಾದರೂ ಪರ್ಮಿಶನ್ನ ಅಗತ್ಯವಿದೆಯೇ? ದಯವಿಟ್ತು ಹರಿಪ್ರಸಾದ್ ನಾಡಿಗ್ ರವರು ತಿಳಿಸಬೇಕು
Comments
ಉ: ಬೆಳ್ಳಿ ತಿಂಮ ನೂರೆಂಟು ಹೇಳಿದ-ಬೀchi ಸಂಗ್ರಹ