ಬೇಡಬೇಕು ಮತ್ತು ಮುಕ್ತ.

ಬೇಡಬೇಕು ಮತ್ತು ಮುಕ್ತ.

ಬೇಡಬೇಕು.

ಬೇಕು, ಎಡಕೆ.
ಬೇಡ, ಬಲಕೆ.
ಬೇಕು, ಬೇಡ,
ಎರಡು ಬೇಡ.
ಎರಡರಿಂದ
ಎಡವಬೇಡ.
ಇವೆರಡರ
ಗೊಡವೆ ಬೇಡ.
ಬೇಕು, ಬೇಡ,
ಬೇಡಬೇಕು.
ನಡೆಯಬೇಕು
ಒಡೆಯನೆಡೆಗೆ,
ಪಡೆಯಬೇಕು
ಗರುಡಪದವ.

ಮುಕ್ತ.

ನಿದ್ದೆಯಲ್ಲಿ
ಮಲಗದಾತ
ಎಚ್ಚರದಲ್ಲಿ
ಏಳಲಾರ.
ನಿದ್ರಾವಸ್ತೆ
ಮರೆವಿನ
ದ್ಯಾನ,
ಎಚ್ಚರ
ಅರಿವಿನ
ದ್ಯಾನ,
ಅರಿವು
ಆನಂದದ
ಸೋಪಾನ.
ನಿದ್ರೆ
ಶಿವನ
ತಮೋಗುಣ,
ಎಚ್ಚರ
ಬ್ರಹ್ಮನ
ಸತ್ವಗುಣ,
ಇವೆರಡರ
ನಡುವಿನ
ಕನಸೆ
ರಜಸ್ಸು.
ಮೂರರಲ್ಲಿ
ಒಂದು
ಪಡೆದರೆ
ಎರಡು
ಸಿಗುವುದಿಲ್ಲ,
ಮೂರರ
ಗೋಜಿಗೆ
ಹೋಗದೆ
ಮೊಜಿಸುವ
ಅನಾಸಕ್ತ
ಮುಕ್ತ.

ಅಹೋರಾತ್ರ.

Rating
No votes yet