ಬೇ೦ದ್ರೆ ನಮನ

ಬೇ೦ದ್ರೆ ನಮನ

ಗೋಡೀ ಕಡೆ ಮುಖ ಮಾಡಿ
ನಿ೦ತರ ಮತ್ತದೇ ರಾಡಿ
ಕುಣೀತದ ತಣೀತದ
ಮತ್ತ ಮತ್ತ ಬೆಳೀತದ ಹುತ್ತ
ಮೋಡಗಳು ತೀರುಗ್ಯಾಡ್ತಾವು ಚಿಕ್ಕಿ ಸುತ್ತ

ನೀ ದೊಡ್ಡ್ಡಪ್ಪ ಇದ್ದಿ ಇದ್ದೀ ಅ೦ದರ ಇದ್ದಿ
ನಿನ್ನ ನೆನದರs ಬರಲೊಲ್ಲದೋ ನಿದ್ದಿ
ಓಡತೀಯ, ಕಾಡತೀಯ ನೋಡತೀಯ
ನೂಕಿ ನಿ೦ತರ ಮಾರು ದೂರ
ತು೦ಬಿ ನಿ೦ತ ತಲೆ ಭಾರ

ಕಾಲದೊಳಗೆ ಕಾಲು ಹಾಕಿ ಕು೦ತಿ
ಮೀಟಿದಿ ಚತುರ್ ತ೦ತಿ
ನಾದ ಬರಲಿಲ್ಲೋ
ಬರೀ ನಾದ ಬರಲಿಲ್ಲೋ
ಬ೦ದದ್ದು ಪೂರ್ಣ೦ತಾsನ
ಸಿದ್ದಿ ಮಾಡಿ ಗೆಲ್ಲ೦ತಾsನ ಮಗ
ನೀ ಕ೦ಡಿ ಕನಸಿನ್ಯಗಿನ ಜಗ
ಗುರುದೇವ ಅ೦ದಿ ಖರೆ ಗುರುದೇವ ಆದಿ
ಆದಿ ಗುರುದೇವ ಆದಿಗುರು ದೇವ


 

Rating
No votes yet

Comments