(ಬೇ ‍)ಸತ್ತ ಬದುಕು

(ಬೇ ‍)ಸತ್ತ ಬದುಕು

ಬದುಕು ಬೇಡೆನಿಸಿಹುದು,
ಬಾರದದು ಸಾವು.
ಬದುಕಲೆಂದೆಣಿಸಿದರೆ,
ಹಿಂಡುತಿದೆ ನೋವು.

ಕಳೆದಿಹವು ದಿನದ ಕ್ಷಣ,
ಯುಗ ಯುಗಗಳಂತೆ.
ಪ್ರತಿ ಕ್ಷಣವು ಸುಡತಲಿದೆ,
ಬಗೆ ಬಗೆಯ ಚಿಂತೆ.

ದಿನದ ಬೆಳಕನು ನುಂಗಿ,
ಕಾಣುತಿದೆ ಕತ್ತಲು.
ಎತ್ತಲೆಂದೆತ್ತ ಹೋದರು,
ಕಳಚಿ ಬೀಳುತಿದೆ ಸುತ್ತಲೂ.

ಕನಸೋ ನನಸೋ ತಿಳಿಯೆ,
ಜೊತೆ ಇರುವ ತನುವು.
ಇದೆಯೊ ಇಲ್ಲವೊ ಅರಿಯೆ,
ಅರಿಯೆ ಗೂಡೊಳಗೆ ಮನವು.

-ರಾಮಮೋಹನ-

Rating
No votes yet

Comments