ಬೊಂಬೆ ಆಡ್ಸೋನು- ನೀವು ಆ ಹಾಡು ಕೇಳಿದ್ದೀರಾ?

ಬೊಂಬೆ ಆಡ್ಸೋನು- ನೀವು ಆ ಹಾಡು ಕೇಳಿದ್ದೀರಾ?

ಚಿತ್ರ

 

 
೧.ಹೂವೊಂದು -ಬಳಿ ಬಂದು ತಾಕಿತು ನನ್ನೆದೆಯ.....!!
 
೨.ನಗುತ ನಗುತ ಬಾಳು ನೀನು ನೂರು ವರುಷ...
 
೩.ಯಾಕೋ ಏನೋ ಈ ನನ್ನ ಮನವು   ಉಯ್ಯಲೆಯಾಗಿ ತೂಗಿದೆ.......
 
ತರಹದ  ಹಾಡುಗಳು   ಎಲ್ಲಿ?
 
ಈಗ ಯೋಗರಾಜ  ಭಟ್ಟರ  ರಚನೆಗಳತ್ತ  ಒಮ್ಮೆ ಕಣ್ಣು ಹಾಯಿಸಿ...!!
 
ಈ ಹಾಡಿನ ರಚನೆ  ನೋಡಿ ಓದಿ  ಅಹ !! ಏನು ಪದ ಪ್ರಯೋಗಗಳು,ಕನ್ನಡ ಕುಲಗೆಡಿಸಿ  ಬಿಟ್ರು  ಅನ್ನುವ  ಭಾವ ಬರಲೇಬೇಕು..
 
ಅದು ನಿಜ.. ಸಹಜ
 
 
ಆದ್ರೆ ನೀವು ಆ ಹಾಡು ಕೇಳಿದ್ದೀರಾ? 
 
 ಆ ಹಾಡಿನ ಆನ್ಲೈನ್ ಲಿಂಕ್ ಕೊಟ್ಟಿರುವೆ ಕೇಳಿ..
 
ಈ ವರ್ಷದ  ಹಿಟ್ ಹಾಡುಗಳಲ್ಲಿ ಇದು ಮೊದಲ ಸಾಲಲ್ಲಿ ನಿಲ್ಲೋದು ಖಾತ್ರಿ  ಇದರ ಜೊತೆಗೆ ಸ್ಪರ್ಧೆಗೆ ಬಿದ್ದಿರುವ ಮತ್ತೊಂದು ಅಪಭ್ರಂಶದ  ಹಾಡು  'ಪ್ರೇಂ ಅಡ್ಡ ' ಚಿತ್ರದ  ಮೇಲುಕೋಟೆ ಹುಡುಗಿ.....!!
 
ಯೋಗರಾಜ ಭಟ್ಟರು  + ಹರಿ ಕೃಷ್ಣ  ಸಂಗಮದ  ಈ ಹಾಡು  ಕೇಳುವಾಗ ನಮಗೊತ್ತಿಲ್ಲದೆ  ನಮ್ ಕಾಲು ಕುಣಿಸುವುದು..!! 
 
ಸಂಗೀತವನ್ನು ಕಾಪಿ ಮಾಡಿದ ಹಾಗೆ ಅನಿಸುವುದು.ನನಗೆ ಅನ್ನಿಸಿದ್ದು  ಶೋಲೆ ಚಿತ್ರದ ಮಹೇಬೂಬ ಮಹೇಬೂಬ  ತರಹದ್ದು ಅಂತ...!
 
ಈ ಹಾಡು ಅಂಬರೀಶ್ ಅವರ ಮೇಲೆ ಚಿತ್ರಿಸಿದ್ದು   ಚಿತ್ರದ ಟ್ರೇಲರ್ ಬಿಡುಗಡೆ ಆಗಿದ್ದು ಯೂಟೂಬ್ ನಲ್ಲಿ ಸಿಕ್ಕಾಪಟ್ಟೆ ಹಿಟ್ಸ್ ಬಿದ್ದಿದೆ..!!  
 
 
 
ಬೊಂಬೆ  ಆಡ್ಸೋನು -ಯೋಗರಾಜ ಭಟ್ಟರ  ಹೊಸ ರಚನೆ  
 
 ಚಿತ್ರ -ಡ್ರಾಮ (ಇನ್ನು ಬಿಡುಗಡೆ ಆಗಬೇಕಿದೆ)
 
ಹಾಡಿನ  ಆರಂಭಕ್ಕೆ ಮೊದಲು ರೆಬೆಲ್   ಸ್ಟಾರ್   ಅಂಬರೀಶ್  ಅವರು  ಹೇಳುವ   ಮಾತುಗಳು :
 
 
ಅವ್ನು ಹುಟ್ಸ್ತಾನೆ      -ಹುಟ್ಬೇಕು     
ಬೆಳಸ್ತಾನೆ -ಬೆಳೀಬೇಕು  
ಹೊಗೆ   ಹಾಕ್ತಾನೆ  -ಹಾಕಿಸ್ಕಬೇಕು  
ಹ್ಹ   ಹ್ಹ   ಹಹಹಾ  ...!!
 
 
 
ಹಾಡಿನ ಸಾಲುಗಳು 
 
--------------------
 
 
 
ದೇವರ   ಇಚ್ಹೆಯಾ   ಈ   ಬೊಂಬೆ ಹೇಳ್ತದೆ  , ಹಿಡ್ಕೋ   ಹಿಡ್ಕೋ   ಹಿಡ್ಕೋ   ಬೊಂಬೆಯಾ  .....
ಬೊಂಬೆ ಆಡ್ಸೋನು,ಮೇಲೆ ಕುಂತವ್ನೆ 
ನಮ್ಗೆ -ನಿಮಗೆ ಯಾಕೆ ಟೆನ್ಷನ್ನು? ...೧
ಬೊಂಬೆ  ಆಡ್ಸೋನು ,ಮೇಲೆ  ಕುಂತವ್ನೆ 
ನಮ್ಗೆ ನಿಮಗೆ ಯಾಕೆ ಟೆನ್ಷನ್ನು? ..೨ 
ಲಗಾಮು ದೇವ್ರ    ಕೈಲಿ   ನಾವೇನ್ ಮಾಡೋಣ?
ಎಲ್ಲಾರೂ   ಮುಚ್ಕಂಡು   ಡ್ರಾಮ ಆಡೋಣ...
ನಮ್ಗೆ ನಿಮಗೆ ಯಾಕೆ ಟೆನ್ಷನ್ನು?
 
ಇಡ್ಲಿಗೆ   ತುದಿ ಯಾವ್ದು?
ಮುದ್ದೆಗೆ ಬುಡ ಯಾವ್ದು?
ಗುಂಡೀಲಿ ಹೆಣ ಯಾವ್ದು?
ಹುನ್ಡೀಲಿ ಹಣ ಯಾವ್ದು?
ಪ್ರೇಮ ಕೇಸರಿ ಬಾತು
ಕಾಮ ಖಾರಾ ಬಾತು ,ಜೀವನ ಚೌ ಚೌ ಆತು  
ಯಾಕೆ ದೂಸ್ರಾ   ಮಾತು  ??
ಉಪ್ಪನ್ನು   ತಿಂದ   ಮೇಲೆ ಬೀ   ಪಿ   ಬರ್ದೇ   ಇರ್ತದಾ  ?
ಉಪ್ಪಿನಕಾಯಿ   ಅಂತ ಲೈಫು ತಿನ್ದೇ   ಇರಕಾಗ್ತದ?
ನಾಲ್ಗೆನೇ ನಮ್ ಕೈಲಿಲ್ಲ ನಾವೇನ್ ಮಾಡೋಣ?
ಅವ್ನು ಬರ್ಕೋಟ್ಟ  ಡೈಲಾಗ್   ಹೇಳಿ   ಡ್ರಾಮ ಆಡೋಣ
ಬೊಂಬೆ ಆಡ್ಸೋನು, ನಮ್ಗೆ ನಿಮಗೆ  ಯಾಕೆ ಟೆನ್ಷನ್ನು?
ಒಂದೊಂದು   ಮುಸುಡೀಲು ನೂರೆಂಟು ಕಲ್ಲರ್ರು
ಇಲ್ಲೊಬ್ಬ  ಸೂಪರ್ರು  ಅಲ್ಲೊಬ್ಬ  ಲೋಫಾರ್ರು
 
 ಲೋಕದ  ಮೆಟಾಡೋರು  ಓಡ್ಸುತ್ತ   ದೇವ್ರು 
ಸುಸ್ತಾಗಿ  ಮಲ್ಗವ್ನೆ  ಯಾರಪ್ಪ  ಎಬ್ಸೋರು ?
ಯಾವನೋ  ಬಿಟ್  ಹೋದ  ಹಳೆ  ಚಪ್ಲಿ  ಈ  ಬಾಳು 
ಹಾಕೊಂಡು  ಹೋಗ್  ಮಗ್ನೇ  ನಿಲ್ಲಬೇಡ  ನೀನೆಲ್ಲೂ 
ಭಗವಂತ  ರೋಡಲ್ ಸಿಕ್ರೆ ನಾವೇನ್ ಮಾಡಾಣ?
ಅವ್ನೀಗೂ ಬಣ್ಣ ಹಚ್ಚಿ ಡ್ರಾಮ ಆಡೋಣ
ಬೊಂಬೆ ಆಡ್ಸೋನು ಮೇಲೆ ಕುಂತವ್ನೆ
ನಮ್ಗೆ ನಿಮಗೆ ಯಾಕೆ ಟೆನ್ಷನ್ನು?
ಬೊಂಬೆ ಆಡ್ಸೋನು  ಮ್ಯಾಲೆ  ಕುಂತವ್ನೆ  ನಮ್ಗೆ ನಿಮಗೆ ಯಾಕೆ ಟೆನ್ಷನ್ನು?
ದೇಹಾನೇ  ಟೆಂಪ್ರವರಿ   ನಾವೇನ್ ಮಾಡೋಣ?
ಮಣ್ಣಲ್ಲಿ  ಹೊಗೋಗಂಟ   ಡ್ರಾಮ ಆಡೋಣ....
 
 
 
===================================
 
 
 
 
 
ಹಾಡಿನ ಮೂಲ: http://www.youtube.com/watch?v=9QRY-6KM6z4
 
 
Rating
No votes yet

Comments

Submitted by ಗಣೇಶ Sun, 10/07/2012 - 22:37

ಸಪ್ತಗಿರಿವಾಸಿಯ ಡ್ರಾಮಾ ಪ್ರೊಮೊ ಚೆನ್ನಾಗಿದೆ.:) ಕನ್ನಡದ ಹೃತಿಕ್ ಯಶ್+ ರಾಧಿಕಾ+ಅಂಬಿ ಮತ್ತು ಭಟ್+ಹರಿಕೃಷ್ಣ ಸೂಪರ್ ಹಿಟ್ ನಿರೀಕ್ಷೆ ನನಗೂ ಇದೆ. ನೋಡೋಣ..ಈ ಕಾಲದಲ್ಲಿ ಹಾಡಿನ ಅರ್ಥದ ಬಗ್ಗೆ ಯಾರು ಚಿಂತೆ ಮಾಡುತ್ತಾರೆ.. ಅದೂ ಭಟ್ರ ಹಾಡಿಗೆ!

Submitted by venkatb83 Mon, 10/08/2012 - 16:52

ಗಣೇಶ್ ಅಣ್ಣ ಮತ್ತು ಕವಿಗಳೇ ತಮ್ಮಿಬ್ಬರ ಪ್ರತಿಕ್ರಿಯೆಗೆ ನನ್ನಿ...

@ ಗಣೇಶ್ ಅಣ್ಣ

ಕನ್ನಡದ ಹೃತಿಕ್ ಎಂದು ಯಶ್ ಗೆ ಅದಾಗಲೇ ಬಿರುದು ದಯಪಾಲಿಸಿರುವಿರಿ..!!
ಭಟ್ಟರ ಹಾಡಲ್ಲಿ ಗ್ರಾಮರ್ರು ಹುಡುಕಿದರೆ ಸಿಗೋದೆ ಇಲ್ಲ.....!! ಸೊ ಹುಡ್ಕೋದು ಬೇಡ ಬಿಡಿ....

ಬನ್ನಿ ನಾವೂ ಡ್ರಾಮ ನೋಡೋಣ -ಆಡೋಣ ಮಂತ್ರಿ ಮಾಲಲ್ಲಿ....!!

ಶುಭವಾಗಲಿ...

\|/

Submitted by H A Patil Tue, 10/09/2012 - 17:33

ವೆಂಕಟೇಶ ರವರಿಗೆ ವಂದನೆಗಳು
' ಬೊಂಬೆ ಆಡ್ಸೊನು ' ಹಾಡನ್ನು ನಾವು ಕನ್ನಡದ ಚಾನಲ್ ಒಂದರಲ್ಲಿ ನೋಡಿದ್ದೇನೆ, ಆ ಹಾಡನ್ನು ಸಂಪೂರ್ಣವಾಗಿ ಹಾಕಿದ್ದೀರಿ, ಓದಿದೆ ಕೇಳುಗ ಮತ್ತು ಓದುಗನನ್ನು ಚಿಂತನೆಗೆ ಹಚ್ಚುವ ಹಾಡು. ಹಾಡನ್ನು ಪೂರ್ತಿಯಾಗಿ ಸಂಪದದಲ್ಲಿ ಹಾಕಿದ್ದೀರಿ, ಧನ್ಯವಾದಗಳು.

Submitted by venkatb83 Tue, 10/09/2012 - 19:09

ಹಿರಿಯರೇ ತಮ್ಮ ಪ್ರತಿಕ್ರಿಯೆಗೆ ನನ್ನಿ...
ಹಿಂದಿನ ಹಳೆಯ ಹಾಡುಗಳಿಗೆ ಹೋಲಿಸಿದಾಗ ಇದು ತೀರ ಮಾಧುರ್ಯವಿಲ್ಲದ ಅಪ್ಯಾಯಮನ್ಯವಾಗದ ಹಾಡಿನ ಸಾಲುಗಳು, ಆದರೂ ಭಟ್ಟರ ಹಾಡ್ಗಳು ಹಿಟ್ ಆಗೋದು-ನಾವ್ ಒಪ್ಪಿಕೊಳ್ಳೋದು ನಂಗೆ ಅಚ್ಚರಿ..!!
ಜನ (ಯುವ ಜನ?))) ಬದಲಾವಣೆ ಬಯಸುವರು-ನಾ ಅವರ ಪ್ರತಿನಿಧಿ ಎಂಬಂತೆ ಹಾಡು ಬರೆವ -ಹೇಳುವ -ಚಿತ್ರ ನಿರ್ದೇಶಿಸುವ ಇಬ್ಬರು ನಿರ್ದೇಶಕ ದ್ವಯರು
ಭಟ್ಟರು ಮತ್ತು ಅವರ ಸ್ನೇಹಿತ ಸೂರಿ....!!

ಶುಭವಾಗಲಿ...

\|/

ವೆಂಕಟೇಶ ರವರಿಗೆ ವಂದನೆಗಳು
ತಮ್ಮ ಮರು ಪ್ರತಿಕ್ರಿಯೆ ಓದಿದೆ, ಈ ಹಾಡಿಗೆ ಮಾಡಿದ ಸಂಗೀತ ಸಂಯೋಜನೆ ಮಾಧುರ್ಯಪೂರ್ಣವಾಗಿಲ್ಲ ನಿಜ, ಆದರೆ ಅದರ ಚಿತ್ರೀಕರಣದಲ್ಲಿ ಒಂದು ನಾವಿನ್ಯತೆಯಿದೆ, ಅಂಬರೀಶರ ಅಭಿನಯ ಅವರು ಅಭಿನಯಿಸಿದ ನಾಗರಹಾವು, ರಂಗನಾಯಕಿ, ಶುಭಮಂಗಳ ಚಿತ್ರಗಳ ಪಾತ್ರಗಳನ್ನು ನೆನಪಿಸುತ್ತದೆ. ಧನ್ಯವಾದಗಳು.

Submitted by venkatb83 Fri, 10/12/2012 - 18:11

In reply to by H A Patil

ಹಿರಿಯರೇ ಈಗ ನನ್ನ ಬರಹಗಳನ್ನು ಮತ್ತೊಮೆ ನೋಡುವಾಗ ಹೊಸ ಸಂಪದ ಕಾರಣವಾಗಿ
ನಿಮ್ಮ ಈ ಹೊಸ ಪ್ರತಿಕ್ರಿಯೆ ಕಣ್ಣಿಗೆ ಬಿತ್ತು.. ನೀವೇಳಿದ್ದು ನಿಜ ಅಂಬರೀಶ್ ಅವರ ಅಭಿನಯದ
ಈ ಹಾಡು ವರ್ಲ್ಡ್ ಫೇಮಸ್ಸು ಆಗುವ ಎಲ್ಲ ಲಕ್ಷಣಗಳಿವೆ ..
ನಾ ಸಹಾ ನೋಡಿರುವೆ..
ಕೆಲವೊಮ್ಮೆ ಹಾಡು ಸಾಹಿತ್ಯ ಸಂಗೀತ ಗೌಣವಾಗಿ ಅಭಿನಯವೇ ಸೈ ಆಗಬಹ್ದು...!!
ಮರು ಪ್ರತಿಕ್ರಿಯೆಗೆ ನನ್ನಿ

ಶುಭವಾಗಲಿ...

\|

Submitted by swara kamath Fri, 10/12/2012 - 18:42

ಸಪ್ತಗಿರಿಯವರೆ,ನಾನು ಮೊದಲಿಂದಲೂ ಕನ್ನಡ ಹಳೆಯ ಚಿತ್ರಪಟ ಸಂಗೀತಕ್ಕೆ ಮಾರುಹೋದವನು. ಈಗಿಗ ಬರುತ್ತಿರುವ ಚಿತ್ರಗಳ ಸಂಗೀತ ಕೇಳಲು ನನಗೆ ಯಾಕೊ ಬೆಡವೆನುಸುತ್ತದೆ. ಆದರೂ ತಮ್ಮ ಈ ಲೇಖನ ಓದಿದ ಮೇಲೆ ಈ ಹಾಡನ್ನು ಕೇಳಲು ಪ್ರಯತ್ನಿಸುತ್ತೇನೆ.ಈ ಹಿಂದೆ ತಾವು ಸಂಪದದಲ್ಲಿ "ದಿ ಆರ್ಟಿಷ್ಟ" ಚಿತ್ರದ ಕುರಿತು ಬರೆದಾಗ ನಾನು ಚಿತ್ರ ವಿಕ್ಷಿಸಿ ಬಹಳ ಹರ್ಷಪಟ್ಟಿದ್ದೆ....ವಂದನೆಗಳು....ರಮೇಶ ಕಾಮತ್.

Submitted by venkatb83 Fri, 10/12/2012 - 19:05

In reply to by swara kamath

ಹಿರಿಯರೇ-(ಕಾಮತ್ ಸಾರ್ )

ನೀವು ನನ್ನ ವಿಮರ್ಶಾ
(ಈ ಪದ ಪ್ರಯೋಗಕ್ಕೆ ನನ್ನ ಸಮ್ಮತಿ ಇಲ್ಲ-ನಾ ವಿಮರ್ಶಕ ಅಲ್ಲ..!)
ರೀತಿಯ ಬರಹಗಳ ಬಗೆಗೆ ನಿಮ್ಮಂತವರು ಇಟ್ಟಿರುವ ನಂಬಿಕೆ ಅಭಿಮಾನ ಉಳಿಸಿಕೊಂಡು ಹೆಹ್ಚಿಸಿಕೊಳ್ಳುವ ಜಾವಾಬ್ಧಾರಿ ನನ್ ಮೇಲಿದೆ...!

ಹಾಗೆ ನೋಡಿದರೆ ಈ ಹಾಡು(ಬೊಂಬೆ ಹಾಡ್ಸೋನು ) ನಿಮಗೆ ಕೇಳಲು ನೋಡಲೂ ಇಸ್ತವೂ ಆಗಬಹುದು ಆಗದೆಯೂ ಇರಬಹದು...
ಇದೊಂಥರ ವಿಚಿತ್ರ ಹಾಡು. ಅದನ್ನು ಕೇಳಿದ ಮೇಲೆ- ನೋಡಿದ ಮೇಲೆ ನಿಮಗೆ ಅನ್ನಿಸುವುದು-
ಇದ್ಯಾಕೆ ಇಷ್ಟ ಆಗ್ಬೇಕು?
ಯಾಕ್ ಇಷ್ಟ ಆಯ್ತು..!! ಅಂತ...

ಕೆಲವಕೆ ವಿವರಣೆ ಸಾಧ್ಯವಿಲ್ಲ.. ಅನುಭವಕ್ಕೆ ಬರುವಂಥವು ಇದೂ ಹಾಗೇನೆ ಅನ್ಸುತ್ತೆ..

ಪ್ರತಿಕ್ರಿಯೆಗೆ ನನ್ನಿ

ಶುಭವಾಗಲಿ..

\|