ಬೊಜ್ಜಿನ ಕಡೆ ಗಮನವಿರಲಿ
ಒಂದ್ ‘ಜಮಾನಾ’ ದಲ್ಲಿ ಡಾಕ್ಟ್ರು ಅಂದ್ರೆ ಬಿಳೀ ಕೋಟು, ಸ್ಟೆತಾ ಸ್ಕೋಪು ಮಡಗಿ ಕೊಂಡಿರೋ ವ್ಯಕ್ತಿ. ಈಗ ಈ ಅಲಂಕಾರಕ್ಕೆ ಮತ್ತೊಂದು ಭೂಷಣ ಸೇರ್ಕೊಂತು. ಅದೇ ನಮ್ ಪಾಂಡು ಟೈಲರ್ ನೇತು ಹಾಕ್ಕೊಳ್ಳೋ ಬೆವರು, ಧೂಳು, ಕೊಳಕು ತುಂಬಿದ ಟೇಪು. measurement tape. ಅದ್ಯಾಕೆ ಅಂತೀರಾ? ಕೆಳಗ್ ನೋಡ್ಕಳಿ ಉತ್ತರಕ್ಕೆ.
ಹೃದ್ರೋಗ ಬರೀ ಸ್ಥೂಲಕಾಯರಿಗೆ ಮಾತ್ರ ಅಲ್ಲ ಖಾತರಿ, ಹೊಟ್ಟೆ ಸುತ್ತಾ ಡನ್ಲಪ್ ಟೈರ್ ನಂತೆ ಸುತ್ತಿಕೊಂಡ ಬೊಜ್ಜಿನ ಒಡೆಯರಿಗೆ ಹೆಚ್ಚು ಖಾತರಿಯಂತೆ ವೈದ್ಯಕೀಯ ಸಂಶೋಧನೆ ಪ್ರಕಾರ.
ನನ್ನ ತೂಕ accepted ಮತ್ತು desired limit ನಲ್ಲಿದೆ ಎಂದು ನಿರಾಳವಾಗಿ ಆಗೊಂದು ಈಗೊಂದು ಎಂದು ಬೆಣ್ಣೆ ಖಾಲಿಯನ್ನೋ, ಗುಲಾಬ್ ಜಾಮೂನನ್ನೋ ಗುಳುಂ ಮಾಡಬೇಡಿ. ತೂಕ ಕಡಿಮೆಯಿದ್ದರೆ ಮಾತ್ರ ಸಾಲದು, ಬೇಡದ ಕಡೆ ಕೊಬ್ಬು ಸೇರಿ ಕೊಂಡಿದಿಯೇ ಎನ್ನುವ ಕಡೆಯೂ ಗಮನವಿರಲಿ ಎನ್ನುವುದು ವೈದ್ಯರ ಅಭಿಪ್ರಾಯ. “fat accumulated in the abdomen can be far more dangerous to your health”. ವಿಖ್ಯಾತ New England Journal of Medicineನ ವರದಿ ಪ್ರಕಾರ ಹೊಟ್ಟೆ ಸುತ್ತಾ ಸಲೀಸಾಗಿ ಬೆಳೆಯುವ ಕೊಬ್ಬು ಕ್ಯಾನ್ಸರ್, ಪಾರ್ಶ್ವವಾಯು ಮತ್ತು ಹೃದ್ರೋಗಗಳಿಗೆ ದಾರಿ ಮಾಡಿಕೊಡುತ್ತದೆ. ಈ ಕಾರಣಕ್ಕಾಗಿ ಸ್ಟೆತಾ ಸ್ಕೋಪ್ ಜೊತೆಯಲ್ಲೇ ನಿಮ್ಮ ಸೊಂಟದ ಯಾ ಹೊಟ್ಟೆಯ ಅಳತೆ ನೋಡಲು ನಿಮ್ಮ ವೈದ್ಯರು ಅಳತೆ ಟೇಪ್ ಅನ್ನು ಉಪಯೋಗಿಸಬಹುದು.
ಕೆಲವರು ಬೆವರು ಸುರಿಸಿ ಜಾಗಿಂಗ್ ಮಾಡಿದ ನಂತರ ತಮ್ಮ ಕಾಲಿನ ಪಯಣವನ್ನು ಮಸಾಲೆ ದೋಸೆ, ಉದ್ದಿನವಡೆ, ವಾಂಗಿ ಭಾತ್ ಮಾರುವ ಅಡ್ಡಾ ಕಡೆ ಬೆಳೆಸುತ್ತಾರೆ ಎಂದು ಕೇಳಿದ್ದೇನೆ. ಈಗಲಾದರೂ “ಬೀ ಕ್ಯಾರ್ಫುಲ್”. ಏಕೆಂದರೆ prevention is always better than cure.
Rating