ಬ್ರಮ್ಹಗಿರಿಯ ಚಾರಣ - 3

ಬ್ರಮ್ಹಗಿರಿಯ ಚಾರಣ - 3

ಇಲ್ಲಿಂದ......

http://sampada.net/blog/chikku123/25/02/2010/24170

 

http://sampada.net/blog/chikku123/23/02/2010/24142

 

೫ ನಿಮಿಷ ಎಲ್ಲ ಯೋಚನೆ ಮಾಡಿ ಹತ್ತಿದರೆ ಆಯ್ತು ಅಂತ ನಿರ್ಧಾರ ಮಾಡಿ ಹತ್ತೋದಕ್ಕೆ ಶುರು ಮಾಡಿದ್ವಿ, ಆಗ ೩.೩೦ ಆಗಿತ್ತು.

ನಾನು,ಪಕ್ಯ ಮುಂದಿದ್ವಿ, ವೆಂಕ ಸ್ವಲ್ಪ ಹಿಂದಿದ್ದ.

'ಪಕ್ಯ, ಎಷ್ಟು ಆಗತ್ತೋ ಅಷ್ಟು ಓಡೋಣ' ಅಂದೆ. ಈ ತರ ತಲೆಹಿಡಕ ಐಡಿಯಾಗಳು ನಮ್ಮಲ್ಲಿ ಸಾಮಾನ್ಯವಾಗಿದ್ದರಿಂದ ಪಕ್ಯ 'ಹೂಂ' ಅಂದ. ಸ್ವಲ್ಪ ಜಾರಿದ್ರೆ ಬಿದ್ದು ಮತ್ತೆ ಬೆಟ್ಟದ ತಳ ತಲುಪೋ  ಹಾಗಿದ್ದ ಜಾಗದಲ್ಲಿ ಓಡೋದಕ್ಕೆ ಶುರುಮಾಡಿದ್ವಿ. ೨ ನಿಮಿಷ ಓಡಿ ಭಯಂಕರ ಸುಸ್ತಾಗಿ ೫ ನಿಮಿಷ ರೆಸ್ಟ್ ತಗೊಂಡ್ವಿ. ವೆಂಕ ಇನ್ನೂ ಕೆಳಗೆ ಇದ್ದ.

ಕೆಲವರು ಕೋಲು ಹಿಡ್ಕೊಂಡು ಹತ್ತುತ್ತಿದ್ರು ಇನ್ನ ಕೆಲವರು ತೆವಳಿಕೊಂಡು ಹೋಗ್ತಿದ್ರು :).

ನಾವು ಯಾವುದರ ಸಹಾಯವಿಲ್ಲದೆ ಹತ್ತುತ್ತಿದ್ದೆವು, ನಡೆಯುವಾಗ ಹಿಂದಿರುಗಿ ನೋಡ್ತಿರ್ಲಿಲ್ಲ,ಆಯಾ ತಪ್ಪಿ ಬೀಳೋ ಸಂಭವ ಜಾಸ್ತಿಯಿದ್ದುದ್ದರಿಂದ. ನಿಂತು ತಿರುಗಿ ನೋಡಿ ಮತ್ತೆ ಮುಂದುವರೆಯುತ್ತಿದ್ದೆವು. ಅಂತೂ ಅರ್ಧ ಗಂಟೆಯಾಗುವಷ್ಟರಲ್ಲಿ ಸುಸ್ತಾಗಿ ಹೋಗಿದ್ದೆವು, ತುದಿ ಸ್ವಲ್ಪಾನೆ ಕಾಣಿಸ್ತಿತ್ತು. ೧೦ ನಿಮಿಷ ಬಂತು ಪಕ್ಯ ನಡಿ ಅಂತ ಹೊರಟ್ವಿ.

ಕೊನೆಗೂ ಬಂತು, ಯಾವದನ್ನ ನೋಡ್ಬೇಕು ಅಂತ ೨ ಸಲ ಟ್ರೆಕ್ ಮಾಡ್ಕೊಂಡು ಬಂದ್ವೋ ಅದು.

ಶರ್ಟ್ ಬಿಚ್ಚೆಸೆದು ಹಾಗೇ ಹುಲ್ಲಿನ ಮೇಲೆ ಇಬ್ರೂ ಬಿದ್ಕೊಂಡ್ವಿ. ಒಂದು ಟೀಮ್ ಆಗ್ಲೇ ಹೋಗಿತ್ತು, ಇನ್ನೊಂದು ಟೀಮಿನ ಸ್ವಲ್ಪ ಜನ ಬೆಟ್ಟದಲ್ಲಿ ಕೂತಿದ್ರು. ೫ ನಿಮಿಷ ಆದ್ಮೇಲೆ ವೆಂಕ ಬಂದ. ಸುಸ್ತಾಗಿದ್ದ ನಾವು ಕೇಕ್ ತಿಂದು ಜ್ಯೂಸ್ ಕುಡಿದು ಸ್ವಲ್ಪ ಡುಮ್ಮಂಗೆ ಇಟ್ವಿ.

ಒಂದು ವಿಷಯ ೨ ಟೀಮ್ನಲ್ಲಿ ಕಾಮನ್ ಇದ್ದಿದ್ದು ಅಂದ್ರೆ ಡುಮ್ಮಂದಿರೆ!!! ಅವ್ರಿಬ್ರೂ ಕಾಲು ಗಂಟೆ ಆದ್ರೂ ಬರ್ಲಿಲ್ಲ. ಮೇಲಿಂದ ಹೋಗಿ ನೋಡಿದ್ವಿ, ಇಬ್ರೂ ಕಾಣಲಿಲ್ಲ....ಮೇಲಿಂದ ಕಿರುಚಿದ್ವಿ. ಉಹುಂ, ಶಬ್ಧನೆ ಇಲ್ಲ.
ಸ್ವಲ್ಪ ಹೊತ್ತು ನೋಡಿ ಆಮೇಲೆ ಸ್ವಲ್ಪ ಕೆಳಗೆ ಹೋಗಿ ನೋಡುವ ಅಂದೆ.

೧೦ ನಿಮಿಷ ಬಿಟ್ಟು ಆ ಟೀಮಿನ ಡುಮ್ಮ ಬಂದ. ನಮ್ಮ ಡುಮ್ಮ?? :(
ಅವರನ್ನ ಕೇಳಿದಾಗ 'ಬರ್ತಾ ಇದ್ದಾರೆ, ಕೆಳಗೆ ಇದ್ದಾರೆ'.

ಪಕ್ಯ ನಾನು ಹೋದ್ವಿ, ಸ್ವಲ್ಪ ಹೊತ್ತು ಕೂಗಿದ ಮೇಲೆ ಅವನು ಹೋ ಅಂದ ಸದ್ದು ಕೇಳುಸ್ತು, ಮುಂದೆ ಹೋಗಿ ನೋಡಿದ್ವಿ. ಒಬ್ನೇ ಬರೋ ಹಾಗೆ ಇರ್ಲಿಲ್ಲ. ಪಕ್ಯ ಇದ್ದವನು ನಾನು ಹೋಗಿ ಕರ್ಕೊಂಡುಬರ್ತೀನಿ ಅಂದ. ಒಬ್ರು ಬರೋದೆ ಕಷ್ಟ ಆಗಿರೋ ದಾರಿಯಲ್ಲಿ ಪಕ್ಯ ಅಂತೂ ಡುಮ್ಮನನ್ನ  ಕೈ  ಹಿಡ್ಕೊಂಡು ಕರ್ಕೊಂಡು ಬಂದ.

ಆದ್ರೂ ರಂಜನ್ಗೆ(ಡುಮ್ಮ) ಒಂದು ಹ್ಯಾಟ್ಸಾಫ್ ಹೇಳಲೇಬೇಕು, ಆ ಪೀಕ್ ಹತ್ತೋ ಧೈರ್ಯ ಮಾಡಿದ್ದಕ್ಕೆ.


ನಮ್ಮ ಫೋಟೋ ಅವ್ರ ಹತ್ರ ತೆಗೆಸಿ ಅವ್ರ ಫೋಟೋ ನಾವು ತೆಗೆದು ಮತ್ತೆ  ವಾಪಸ್ ಇಳಿಯೋದಕ್ಕೆ ಶುರು ಮಾಡಿದ್ವಿ. ನಾವು ಬಂದ ದಾರಿನಲ್ಲೇ ಇಳಿದಿದ್ರೆ ನಮ್ಮನ್ನ ಮಣ್ಣು ಮಾಡೋ ಅವಶ್ಯಕತೆನೂ ಇರ್ತಿರ್ಲಿಲ್ಲ. ಅದ್ಕೆ ಬರೀ ಹುಲ್ಲು ಇರೋ ಜಾಗದಲ್ಲೇಇಳಿಯೋದಕ್ಕೆ ಶುರು ಮಾಡಿದ್ವಿ. ಅಲ್ಲೆಲ್ಲ ಬರೀ ಇಲಿಗಳು ತೂತು ಮಾಡಿದ್ವು, ನಮ್ಮ ಪುಣ್ಯಕ್ಕೆ ಎಲ್ಲೂ ಹಾವು ಇರ್ಲಿಲ್ಲ. ಇದ್ದಿದ್ರೆ ಡೈರೆಕ್ಟಾಗಿ ಕೆಳಗೆ ಲ್ಯಾಂಡ್ ಆಗ್ತಿದ್ವೇನೋ.

ನಾನು ವೆಂಕ ೧೦ ನಿಮಿಷಕ್ಕೆ ಕೆಳಗೆ ಬಂದ್ವಿ. ಪಕ್ಯ ಮತ್ತೆ ಡುಮ್ಮ ನಿಧಾನ ಬರ್ತಿದ್ರು.

ಅಲ್ಲಿಂದ ಮತ್ತೆ ೧.೩೦ ಗಂಟೆಗಳ ಕಾಲ ಸಮನಾದ ಜಾಗದಲ್ಲಿ ವೇಗವಾಗಿ ನಮ್ಮ ಕಾಲುಗಳು ಹೆಜ್ಜೆ ಹಾಕಿದವು. ಸಂಜೆ ಆದ ಕಾರಣ, ಸೂರ್ಯ ಚೆನ್ನಾಗಿ ಕಾಣುತ್ತಿದ್ದ ಜೊತೆಗೆ ದೂರದ ಬೆಟ್ಟಗಳು, ಆ ಚೆಲುವನ್ನು ಆಸ್ವಾದಿಸುತ್ತಾ ಹೆಜ್ಜೆಗಳ ವೇಗ ಜಾಸ್ತಿಯಾಗುತ್ತಿತ್ತು ಕತ್ತಲಾಗುತ್ತಿದ್ದರಿಂದ .
ಮಾರ್ಗ ಮಧ್ಯದ ಕಾಡಿನಲ್ಲಿ ಪಕ್ಯ 'ಅಡಿಗೆಗೆ ಸೌದೆ ತಗೊಳ್ರೋ' ಅಂದಿದ್ದ. ಎಲ್ಲರೂ ಸ್ವಲ್ಪ ಸ್ವಲ್ಪ ತಗೊಂಡು ಗೆಸ್ಟ್ ಹೌಸ್ ಕಡೆ ಹೆಜ್ಜೆ ಹಾಕಿದ್ವಿ.

 

ಮುಂದುವರೆಯುವುದು........

Rating
No votes yet