ಬ್ರಿಟಾನಿಯಾಕ್ಕೆ ಈ ಪಾಠ "ಬೇಕಾಗಿದೆ"
ಬ್ರಿಟಾನಿಯ ಕಂಪನಿಯು ತರತರದ ತಿಂಡಿ ತಿನಿಸುಗಳನ್ನು ತಯಾರಿಸತ್ತದೆ.
ಇವರು ತಮ್ಮ ಬಿಸ್ಕೇಟುಗಳ ಜಾಹೀರಾತಿಗಾಗಿ ಬೆಂಗಳೂರಲ್ಲಿ ಹಲವೆಡೆ ಹಿಂದಿ ಫಲಕಗಳನ್ನು ಹಾಕಿಸಿದ್ದರ ಬಗ್ಗೆ ಮೂಡಿ ಬಂದಿದ್ದ ಬ್ಲಾಗು ಇಲ್ಲಿದೆ.
ತಮ್ಮ ಹಳೆ ಚಾಳಿಯನ್ನು ಮುಂದುವರೆಸುತ್ತಾ, ಟೈಮ್‍ಪಾಸ್ ಹೆಸರಿನ ತಿಂಡಿಯನ್ನು ಬೆಂಗಳೂರಿನ ಜನರಿಗೆ ಪರಿಚಯಿಸಲು ಹಿಂದಿಯನ್ನೇ ಬಳಸುತ್ತಿದ್ದಾರೆ.
"ಜರೂರಿ ಹೈ" ಎಂಬ ಪಂಚ್‍ಲೈನ್ ಇಟ್ಟುಕೊಂಡಿರೋ ಫಲಕಗಳನ್ನು ಚಿಕ್ಕ ಚಿಕ್ಕ ಅಂಗಡಿಗಳಲ್ಲೂ ನೋಡಬಹುದು.
ಜೆಪಿ ನಗರದ ಬಳಿ ಒಂದು ಅಂಗಡಿಯಲ್ಲಿ ಕಂಡ ಫಲಕದ ಫೋಟೋ ಲಗತ್ತಿಸಲಾಗಿದೆ - ನೋಡಿ.
ಕನ್ನಡಿಗ ಗ್ರಾಹಕರಾಗಿ, ಈ ಕೆಲವು ವಿಚಾರಗಳನ್ನು ಬ್ರಿಟಾನಿಯಾದವರಿಗೆ ನಾವು ಹೇಳಬೇಕಾಗಿದೆ.
೧. ಬೆಂಗಳೂರಿನ ಜನತೆಯಲ್ಲಿ ನಿಮ್ಮ ತಿಂಡಿ ತಿನಿಸುಗಳ ಬಗ್ಗೆ ಅರಿವು ಮೂಡಿಸಬೇಕಾದರೆ, ಕನ್ನಡವೇ ಸೂಕ್ತ ಭಾಷೆ.
೨. ಹಿಂದಿಯಲ್ಲಿ ಜಾಹೀರಾತು ನೀಡಲು ನೀವು ಬಳಸಿರೋ ಹಣ ಮತ್ತು ವ್ಯಯಿಸಿರೋ ಶ್ರಮ ದಂಡವಲ್ಲದೇ ಬೇರೇನಲ್ಲ.
ಬೆಂಗಳೂರಲ್ಲಿ ಸಾರ್ವಜನಿಕ ಭಾಷೆಯ ಸ್ಥಾನ ಸಹಜವಾಗಿ ಕನ್ನಡಕ್ಕೇ ಸಿಗಬೇಕು.
ಕೆಲವು ಕಂಪನಿಗಳು ಮಾರುಕಟ್ಟೆಯನ್ನು ತಪ್ಪಾಗಿ ಅರಿತುಕೊಂಡು ಸಾರ್ವಜನಿಕ ಭಾಷೆಯ ಸ್ಥಾನದಿಂದ ಕನ್ನಡವನ್ನು ಇಳಿಸದಂತೆ ತಡೆಯುವ ಶಕ್ತಿ ಕನ್ನಡಿಗ ಗ್ರಾಹಕರ ಒತ್ತಾಯಕ್ಕಿದೆ.
http://www.britannia.co.in/talktous.htm ಇಲ್ಲಿ ನಾವೆಲ್ಲರೂ ಅನಿಸಿಕೆ ಬರೆದು, ಬ್ರಿಟಾನಿಯ ಜಾಹೀರಾತುಗಳಲ್ಲಿ ಕನ್ನಡವು ಮತ್ತೆ ಹೊಳೆಯುವಂತೆ ಮಾಡೋಣ.