ಬ್ರೇಕ್ ಔಟ್ ಏರಿಯ..... ಭಾಗ ೨

ಬ್ರೇಕ್ ಔಟ್ ಏರಿಯ..... ಭಾಗ ೨

 ಅಕ್ಟೋಬರ್ ನಲ್ಲಿ  ಕೆಲವು ದಿನ ಮೋಡ ಕವಿದ ವಾತಾವರಣ ಜೊತೆಯಲಿ ಮಳೆ, ಒಂಥರಾ  ಚೆನ್ನಾಗಿತ್ತು (ಸಂಜೆ ಮಳೆಯಿಂದ ಆದ ಟ್ರಾಫಿಕ್ ಹೊರತು).  ಅಂದು ಬೆಳ್ಳಿಗೆ ಯಥಾಪ್ರಕಾರ ಕಛೇರಿಗೆ ಬಂದು, ಬ್ರೇಕ್ ಔಟ್ ಏರಿಯ ಹತ್ರ ಬಂದಾಗ, ಕೆರೆಯಿಂದ ಮಿನುಗುವ ಸಣ್ಣ ಸಣ್ಣ ಅಲೆಗಳು. ಸೂರ್ಯನ ಕಿರಣ ರಾಶಿಗಳಿಂದ ಕೆರೆಯ ನೀರು ಪ್ರಕಾಶಿಸುತಿತ್ತು. ಸಣ್ಣ ಸಣ್ಣ ದೀಪಗಳಂತೆ ಪ್ರಜ್ವಲಿಸುತಿತ್ತು, ಏನಿದು ಬೆಳ್ಳಿಗೆ ಬೆಳ್ಳಿಗೆ ದೀಪಗಳಾವಳಿ ಆಗೊಮ್ಮೆ ನನಗೆ ಅರಿವಾಯ್ತು "ಅರೆ ಇಂದು ದೀಪಾವಳಿ ಅಲ್ಲವೇ, ಇದು ಬೆಳಕಿನ ಹಬ್ಬ ರಾತ್ರಿಂದು ಆವರಿಸುವ ದೀಪಗಳ ಕಾಂತಿ, ಇಲ್ಲಿ ಬೆಳ್ಳಿಗೆಯೋ ಸಹ ಆವರಿಸಿದೆ. ಇದು ವಿಭಿನ್ನ ದೀಪಾವಳಿ". ಇದು ನನಗೆ ಅನಿಸಿದ್ದು.

 
ಇನ್ನು ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ಶುರವಾದ ಚಳಿ, ಮುಂಜಾನೆ ಬೇಗ ಎದ್ದೇಳಕ್ಕೆ ಮನಸಾಗದೆ ಇದ್ದರು ಕ್ಯಾಬನಲ್ಲಿ ಮಲಿಗದರೆ ಆಯ್ತು ಅಂತ ಎದ್ದು ಆಫೀಸಿಗೆ ಹೋದಮೇಲೆ, ದಿನದ ೧೦ ಘಂಟೆಯ  scrum ಮೀಟಿಂಗ್ ಮೊದಲು ಸ್ನೇಹಿತರಲ್ಲ ಕಾಫಿ ಚಹಾ ಬಿಸ್ಕೆಟ್ ನೊಂದಿಗೆ ನಮ್ಮ ಬ್ರೇಕ್ ಔಟ್ ಏರಿಯದಲ್ಲಿ ಭೇಟಿ. ಕೆಲಸದ ಬಗ್ಗೆ, ದಿನದ ವಿಶೇಷತೆ ಬಗ್ಗೆ, ಆಫೀಸ್ ನ ಗೊಸ್ಸಿಪ್ ಬಗ್ಗೆ ಮಾತಾಡ್ತಾ ಕೆರೆಯ ಅವಲೋಕನ ಮಾಡಿದರೆ, ನನ್ನ ಸ್ನೇಹಿತರಿಬ್ಬರು ಹೊಳೆಯುವ ಕರೆಯ ನೋಡಿ - ಮಾಯಾಮೃಗ   ಧಾರವಾಯಿಯ ಶೀರ್ಷಿಕೆ ಹಾಡಿನ ಸಾಲನ್ನು ಸುಮಧುರವಾಗಿ ಹಾಡುತಾರೆ - " ಬಲು ದೂರದಿ  ಹೊಳೆಯುತ್ತಿದೆ  ಬಾನೀಲಿಯ  ಕೆಳಗೆ  ಹೊಳೆಯುತ್ತಿವೆ  ಕಣ್ಣ೦ದು ಬಿಳಿ ವಜ್ರದಾಗೆ". ಹೀಗೆ ಅವರಿಗೆ ಅ ಕೆರೆ ಸೂರ್ಯನ ಕಿರಣಗಳಿಗೆ ಹೊಳೆಯುವ ಬಿಳಿ ವಜ್ರಗ ರಾಶಿಯಾಗೆ ಕಾಣುತ್ತವೆ. 
 
ಹೀಗೆ ಆ ಕೆರೆಯ ಮೇಲೆ ಬಾನಾಡಿಗಳು ಬಂದರೆ ನಮ್ಮ ಹರ್ಷ ಹೆಚ್ಚಾಗುತ್ತದೆ, ಹಕ್ಕಿಗಳು ಬಂದು ಕಿರುದೆರೆದರೆ ಎಂಥ ಸೊಗಸು. ಹೀಗೆ ಕೆಲಸ ಹಾಗು ಜೀವನದ ನೂರಾರು ಜಂಜಾಟದಲಿ ನಾವುಗಳು ಈ ನೀರಿನ ಅಲೆಗೊಳಂದಿಗೆ ನಲಿಯುತ್ತೇವೆ. ಈ ನಿಸರ್ಗದಲ್ಲಿ ನೀರು ಹಸಿರು ಮೋಡ ಬೆಳಕು ಕಣ್ಣಾಮುಚ್ಚಾಲೆ ಆಡುವಾಗ ನೋಡೋಕೆ ಎಷ್ಟು ಚಂದ :)
 
Rating
No votes yet