ಬ್ಲಾಗ್ .... ಬ್ಲಾಗ್ ......ಎಲ್ನೋಡಿ ಬ್ಲಾಗ್.

ಬ್ಲಾಗ್ .... ಬ್ಲಾಗ್ ......ಎಲ್ನೋಡಿ ಬ್ಲಾಗ್.

ಬ್ಲಾಗ್ ಎಂಬ ಬ್ಲಾಗಿಗೆ ಕನ್ನಡ ಪದ ಯಾವುದು ಅಂತ ಯೋಚ್ನೆ ಮಾಡೋಕೆ ಶುರು ಮಾಡಿದೆ.
ಏನು ಇರಬಹುದು.... ಕನ್ನಡ ಕಸ್ತೂರಿ ಡಾಟ್ ಕಾಮ್ ನಲ್ಲಿ ಕೂಡ ಸಿಗಲಿಲ್ಲ,ಬರಹ ಡಾಟ್ ಕಾಮ್ / ಕನ್ನಡ / ನಿಘಂಟು ಇಲ್ಲಿ ಕೂಡ ಸಿಗಲಿಲ್ಲ.ಎನು ಮಾಡೋದು ಅಂತ ಹಾಗೆ ಯೋಚ್ನೆ ಮಾಡ್ತಾ ಕುಳಿತಿರುವಾಗ ಹೊಳೆದ ಕೆಲವೇ ಅರ್ಥ ಗಳನ್ನ ನಿಮ್ಮ ಮುಂದೆ ಇಡ್ತಾ ಇದೀನಿ.
ಬ್ಲಾಗ್ ಅಂದರೆ ಜೋಳಿಗೆ , ಸರಿನಾ ಅಂತ ಯೋಚಿಸಿದೆ. ಆದ್ರೆ ನಾವು ಜೋಳಿಗೆಯನ್ನ ಇನ್ನೊಬ್ಬರ ಹತ್ತಿರ ಬೇಡೋದಕ್ಕೆ ಉಪಯೋಗಿಸುತ್ತೇವೆ , ಇದು ಹೇಗೆ ಬ್ಲಾಗಿಗೆ ಪರ್ಯಾಯ ಪದ ಆಗೋಕೆ ಸಾಧ್ಯ ಅಂತ ಕೈ ಬಿಟ್ಟೆ. ಸಾಕಷ್ಟು ತಲೆ ಕೆಡಿಸಿಕೊಂಡ ನಂತರ ನನಗೆ ಅನಿಸಿದ್ದು ಬ್ಲಾಗಿಗೆ ಸರಿಯಾದ ಕನ್ನಡ ಪದ "ಅಕ್ಷರ ಪಾತ್ರೆ" ಮೊಗೆದಷ್ಟು ಮುಗಿಯದ "ಅಕ್ಷಯ ಪಾತ್ರೆ" . ಇತ್ತೀಚೆಗೆ ಬ್ಲಾಗ್ ಬ್ಲಾಗ್ ಎಲ್ನೋಡಿ ಬ್ಲಾಗ್. ಗಣಕ ಕ್ರಾಂತಿ ಯೊಂದಿಗೆ ಅಕ್ಷರ ಕ್ರಾಂತಿ.

-ಶ್ರೀಧರ.

Rating
No votes yet

Comments