ಭಗವದ್ಗೀತೆ , ಕರ್ಮ ,ಧರ್ಮ ಇತ್ಯಾದಿ. - ಮತ್ತಷ್ಟು

ಭಗವದ್ಗೀತೆ , ಕರ್ಮ ,ಧರ್ಮ ಇತ್ಯಾದಿ. - ಮತ್ತಷ್ಟು

ಏಳು ತಿಂಗಳ ಹಿಂದೆ " ಭಗವದ್ಗೀತೆ , ಕರ್ಮ ,ಧರ್ಮ ಇತ್ಯಾದಿ." ಎಂದು ಸಂಪದದಲ್ಲಿಯೇ ಒಂದು ಕಿರು ಬರಹ ಬರೆದಿದ್ದೆ ( ಅದು ಇಲ್ಲಿದೆ https://sampada.net/blog/ಭಗವದ್ಗೀತೆ-ಕರ್ಮ-ಧರ್ಮ-ಇತ್ಯಾದಿ/15-1-2017/47418 )
ಸರಿ, ಫಲಾಪೇಕ್ಷೆ ಇಲ್ಲದೆ, ಮತ್ತಿತರ ಗುಣಗಳೊಂದಿಗೆ ಕೂಡಿ ಜಗತ್ತಿಗೆ ಅನುಕೂಲವಾಗುವಂಥ ಕೆಲಸವನ್ನು ಮಾಡಬೇಕು. ಆದರೆ ಯಾವುದೇ ಕರ್ಮ / ಕೆಲಸಕ್ಕೂ ಏನಾದರೂ ಪರಿಣಾಮ ಅಥವಾ ಫಲ ಇದ್ದೇ ಇರುತ್ತದಲ್ಲ,. ಅದು ಯಾರಿಗೆ ?

ಇದಕ್ಕೆ ಉತ್ತರ ನಾನಾ ಕಡೆಗಳಲ್ಲಿ ದೊರಕಿತು. ಸ್ವಾಮಿ ವಿವೇಕಾನಂದರು ವಿದೇಶದಲ್ಲಿ ನಾಸ್ತಿಕ ಬುದ್ಧನ ಕುರಿತು ಮಾಡಿದ ಪರಿಚಯಾತ್ಮಕ ಭಾಷಣದಲ್ಲಿ , ಪರಮ ವಿಷ್ಣು ಭಕ್ತರಾದ ಪು. ತಿ. ನರಸಿಂಹಾಚಾರ್ಯರ ಹರಿಚರಿತೆ ಕುರಿತಾದ ಪುಸ್ತಕದಲ್ಲಿ , ಮತ್ತೂ ಇನ್ನೆಲ್ಲೋ .

ನಾನು ಕಂಡುಕೊಂಡ ಉತ್ತರವನ್ನು ಒಂದಿಬ್ಬರು ಮಿತ್ರರೊಂದಿಗೆ ಚರ್ಚಿಸಹೋದಾಗ ನಾನು ಹೇಳುವ ಮೊದಲೇ ಅವರು ಅದೇ ಉತ್ತರವನ್ನು ಕೊಟ್ಟರು! ನಿಮಗೆ ಇದೇ ಅಥವಾ ಬೇರೆ ಉತ್ತರ ಈಗಾಗಲೇ ಗೊತ್ತಿದ್ದರೆ ಖಂಡಿತ ತಿಳಿಸಿ , ಗೊತ್ತಿಲ್ಲದೆ ಇದ್ದರೂ ತಿಳಿಸಿ.

ಸರಿ . ನಾನು ಕಂಡುಕೊಂಡ ಉತ್ತರ ಇದು. ಈ ಕರ್ಮದ ಫಲವು ಮತ್ತು ಅದರ ಸೂಕ್ತವಾದ ವಿತರಣೆಯು ಸಮಾಜಕ್ಕೆ, ಜಗತ್ತಿಗೆ; ಅಥವಾ ಈ ಸಮಾಜ / ಜಗತ್ತು ಯಾರ ಅಧೀನದಲ್ಲಿದೆಯೋ ಅವರಿಗೆ ಸೇರಿದ್ದು!

Rating
No votes yet

Comments