ಭಗ್ನ ಪ್ರೇಮಿ

ಭಗ್ನ ಪ್ರೇಮಿ

ನಿನ್ನ ನಗು ಕಂಡು ಮರುಳಾದೆ
ಮುಗ್ದ ಹೃದಯಕೆ ಶರಣಾದೆ

ನಿನ್ನ ಚೆಲುವ ಬಣ್ಣಿಸಲು ಕವಿಯಾದೆ
ಬಾನಂಗಳದ ರವಿಯಾದೆ

ಸೆರೆಹಿಡಿಯಲು ನಿನ್ನ ಹೆಗ್ಗುರುತ ನಾನಿಂದು ಇಳೆಯಾದೆ
ತಣಿಸಲು ನಿನ್ನ ದಾಹ ನಾ ಮುಂಗಾರಿನ ಮಳೆಯಾದೆ

ಗರಿ ಬಿಚ್ಚಿ ನವಿಲಾದೆ
ಕಾಲ್ಗೆಜ್ಜೆ ದನಿಯಾದೆ

ನಿನ್ನ ಮೊಗ ಕಂಡು ಬೆರಗಾಗಿ ಕಲೆಗಾರ ನಾನಾದೆ
ನಿನ್ನ ಸ್ವರದಲ್ಲಿ ಸೆರೆಯಾಗಿ ಇಂಪಾದ ಹಾಡಾದೆ

ಗಿಡವಾಗಿ ಮರವಾದೆ
ಹೂ ಬಿಟ್ಟು ಹಣ್ಣಾದೆ

ನಿನ್ನಂತೆ ನಾನಾದೆ
ನಿನ್ನ ನೆರಳಾಗಿ ನಾ ಕಾದೆ

ಪ್ರೇಮದಲಿ ಸೆರೆಹಿಡಿದು ನೀ ಎಲ್ಲಿ ಮರೆಯಾದೆ ?
ಭಗ್ನ ಪ್ರೇಮಿಗಳ ಸಾಲಿಗೆ ನಾ ಹೊಸದೊಂದು ಹೆಸರಾದೆ !

Rating
No votes yet

Comments