ಭಯೋತ್ಪಾದಕ ವರದಿಗಳು

ಭಯೋತ್ಪಾದಕ ವರದಿಗಳು

ನಾವು-ನೀವು ಓದುವ ಪತ್ರಿಕೆಗಳ ವರದಿಗಳೇ.
೧.ಹೈದರಾಬಾದ್ ಮಸೀದಿ ಸ್ಫೋಟದ ‘ಪ್ರಮುಖ ರೂವಾರಿ’-
ಅಣೆಕಟ್ಟು,ಸೇತುವೆ ಕಟ್ಟಿದಲ್ಲ.ಎಲ್ಲೋ ಅಡಗಿ ಕುಳಿತು ಯಾರದೋ ಕೈಯಲ್ಲಿ ಬಾಂಬ್ ಉಢಾಯಿಸಿದ ಪಾಪಿ-ಪ್ರಮುಖ ರೂವಾರಿ.
೨.ಪೋಲೀಸ್ ತನಿಖೆಯದಾರಿ ತಪ್ಪಿಸುತ್ತಿರುವ ‘ಉಗ್ರ’..-
ಉಗ್ರ ನರಸಿಂಹ ಎಂದಿಲ್ಲ ಪುಣ್ಯ.
೩. ವಿಧ್ವಂಸಕ ಕೃತ್ಯ
೪. ಶಂಕಿತ ಉಗ್ರರ ಸೂತ್ರದಾರ-
ಅಹಹಾ,ಕೃಷ್ಣ ಪರಮಾತ್ಮಾ..
೫. ಭಯೋತ್ಪಾದಕ=ಹೆದರಿಕೆಯ ತಯಾರಕ?
ಇದು ರಾಷ್ಟ್ರೀಯ ಮಟ್ಟದ ಸುದ್ದಿಯಾದುದರಿಂದ ಸ್ವಲ್ಪ ಭಯಂಕರ ಶಬ್ದಗಳನ್ನು ಉಪಯೋಗಿಸಿದರು. ಹೋಗಲಿ ಬಿಡಿ.
ಇಲ್ಲಿನ ಸುದ್ದಿಗಳು ಹೀಗಿವೆ-
೧.ಬೆಂಗಳೂರನ್ನು ನಡುಗಿಸಿದ-
ಆ ಕೆಟ್ಟ ಕೆಲಸ ಮಾಡಿದವನಿಗೆ ಹೆಮ್ಮೆ ಆಗದೇ? ಮತ್ತೊಬ್ಬ ಮರಿಗೆ ತಾನೂ ಹಾಗೆ ಬೆಂಗಳೂರನ್ನು ನಡುಗಿಸಬೇಕು ಅನಿಸದೇ?
೨.ಸರಣಿ ಹಂತಕಿ-
೩.ದುಷ್ಕರ್ಮಿಗಳ ಗುಂಪು ಮಾರಕಾಯುಧದಿಂದ ಬೆದರಿಸಿ-
ಚಿಳ್ಳೆಪಿಳ್ಳೆಗಳು ಕಂತ್ರಿನಾಯಿಗಿಂತ ತೆಳ್ಳಗಿರುತ್ತಾರೆ.
ಮಾರಕಾಯುಧ- ಏ.ಕೆ.೪೭ ಏನಲ್ಲಾ, ಚಾಕು ಚೂರಿಗಳು.
ಭಯವಾಯಿತಾ?
ವೀರಪ್ಪನ್‌ನ್ನು ಮುದ್ದಾಗಿ ‘ದಂತ ಚೋರ’ ಎಂದುಕರೆಯುತ್ತಿರಲಿಲ್ಲವೇ ಎಂದಿರಾ?.

Rating
No votes yet