ಭಾಗ್ಯದಾ ಲಕ್ಷ್ಮೀ ಬಾರಮ್ಮ ....!!

ಭಾಗ್ಯದಾ ಲಕ್ಷ್ಮೀ ಬಾರಮ್ಮ ....!!

 

ಭಾಗ್ಯದಾ   ಲಕ್ಷ್ಮೀ  ಬಾರಮ್ಮ 

ನಮ್ಮಮ್ಮ ನೀ ಸೌಭಾಗ್ಯದ  ಲಕ್ಷ್ಮೀ ಬಾರಮ್ಮ...

ಆರ್ಯ ವೈಶ್ಯರ ಮನೆಯನು ಬಿಟ್ಟು 
ಶೂಧ್ರ ಪಾಮರರ ಹೊಸಿಲನು ಮೆಟ್ಟು 
ರೆಡ್ಡಿ- ಯಡ್ಡಿ -ಗೌಡರ  ಕೈನಿಂದ ಜಾರು 
ಬಡವರ ಮೇಲೆ ನಿನ್  ಕೃಪಾ ಧೃಸ್ಟಿ ಯ ಬೀರು 
ಬಡವರ ಬಂಧು ನಾ  ಎಂದು ಸಾರು 
 
ಮನೆಯೊಳಗೆಜ್ಜೆಯ  ಇಡುವ ಮೊದಲು 
ನೆಲದಲಿ ಎಣ್ಣೆ  ಚೆಲ್ಲಿದ್ದಾರ  ಎಂದು ನೋಡು 
ನೋಡದೆ  ಹೆಜ್ಜೆ ಇಟ್ಟರೆ ನಿಂದು   ಪಜೀತಿ ಪಾಡು 
 
ಕಾಸನು ಕೊಡುವ  ಮೊದಲು
ಕೆಲಸ ಮಾಡ್ವ ಜನ್ರ ಎಂದು ನೋಡು  
ಅಂಥವ್ರ್ಗೆ  ಆಶೀರ್ವಾದವ  ನೀಡು 
ಬಾರಮ್ಮ ,ಬಾರಮ್ಮ  ನಮ್ಮಮ್ಮ 
ಭಾಗ್ಯದ ಲಕ್ಷ್ಮಿ  ಬಾರಮ್ಮ.. ಬಾರಮ್ಮ...


======================================================
 
>>> ಶ್ರೀಯುತ ಶ್ರೀಧರ್ ಜೀ ಅವರು  ಬರೆದ  ಬರಹ  
 
ಮತ್ತು  ಅದಕ್ಕೆ  ಬಂದ ಹಲವು ಪ್ರತಿಕ್ರಿಯೆಗಳೇ  ಈ ಬರಹಕ್ಕೆ ಪ್ರೇರಣೆ...!!







 
Rating
No votes yet

Comments

Submitted by venkatb83 Fri, 09/21/2012 - 17:07

In reply to by Shreekar

ಮೆಚ್ಚಿ ಪ್ರತಿಕ್ರಿಯಿಸಿದ ಸರ್ವ ಸಂಪದಿಗರಿಗೆ ನನ್ನ ನನ್ನಿ ...
ನನ್ನೀ ಬರಹಕ್ಕೆ ಪ್ರೇರಣೆ ಶ್ರೀಧರ್ ಜೀ ಅವರ ಬರಹ.. ನಾ ಅವರಿಗೆ ಧನ್ಯವಾದ ಹೇಳುವೆ..(ನನ್ನೊಳಗಿನ ಸೋಮಾರಿ ಬರಹಗಾರನನ್ನು ಎಬ್ಬಿಸಿ ಕೆಲ ಸಾಲು ಗೀಚಲು ಅವರೇ ಅಲ್ಲವೇ ಪ್ರೇರೇಪಿಸಿದ್ದು !!)

ಸಂಪದ ಈ ಮಧ್ಯೆ ನಿರ್ವಹಣೆಯಲ್ಲಿ ಇದ್ದುದರಿಂದ ನಾ ಈ ಬರಹಕ್ಕೆ ಬಂದ ಹಲವು ಪ್ರತಿಕ್ರಿಯೆಗಳನ್ನು ನೋಡಿಯೂ ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ.. ಈಗ ನಿಮಗೆಲ್ಲ ಗೊತ್ತಿರುವ ಹಾಗೆ ಸಂಪದ ಹೊಸ ರೂಪ ವಿನ್ಯಾಸದೊಂದಿಗೆ ಮಿರಿ ಮಿರಿ ಮಿಂಚುತ್ತಿದೆ....

ಕೆಲವು ವಿನ್ಯಾಸಗಳು ಗಲಿಬಿಲಿಗೊಳಿಸುತಿವೆ..!
ಆದರೂ ವಿನ್ಯಾಸ ನನಗೆ ಹಿಡಿಸಿದೆ....

ಶುಭವಾಗಲಿ..

ಶುಭ ಸಂಜೆ

ನನ್ನಿ

\|

>>>ನನ್ನೊಳಗಿನ ಸೋಮಾರಿ ಬರಹಗಾರನನ್ನು ಎಬ್ಬಿಸಿ..
ಇನ್ನು ಮೇಲೆ ದಿನಾ ಬೆಳಗ್ಗೆ ಶ್ರೀಧರ್ ಜಿ "ವೆಂಕಟೇಶ ಸುಪ್ರಭಾತ" ಹೇಳಬೇಕು...:)
ಸಪ್ತಗಿರಿವಾಸಿ,
ಕವನ ಸೂಪರ್ ಆಗಿದೆ. ನೆಲದ ಮೇಲೆ ಎಣ್ಣೆ ಚೆಲ್ಲಿ..:) ಎಲ್ಲಾ ದೇವರುಗಳೂ ಜಾಗ್ರತೆ ವಹಿಸಬೇಕು. ಅದರಲ್ಲೂ ಗ..:)
ಲಕ್ಷ್ಮೀ ಬಾರಮ್ಮಾ ಎಂದು ನಾನೂ ಹಿಂದೊಮ್ಮೆ ಬೇಡಿದ್ದೆ.. http://www.sampada.net/blog/%E0%B2%97%E0%B2%A3%E0%B3%87%E0%B2%B6/15/08/2008/10895

Submitted by ಗಣೇಶ Tue, 09/25/2012 - 00:24

In reply to by Shreekar

ಶ್ರೀಕರ್,
ಒಳ್ಳೆಯ ವಿಷಯ ಎತ್ತಿದ್ದೀರಿ.
>>>ನವಕೋಟಿ ಸಂಪತ್ತನ್ನು ದಾನಧರ್ಮಗಳಲ್ಲಿ ಖಾಲಿ ಮಾಡಿದವರು ಪುನಹ ಭಾಗ್ಯದ ಲಕ್ಷ್ಮಿ ಬಾರಮ್ಮಾ ಎಂದು ಹಾಡಬೇಕಾಗಿ ಬಂದ ಕಾರಣವೇನಾದರೂ ಗೊತ್ತೇ?
-ಇದಕ್ಕೆ ದಾಸರ ಪದ/ಪುರಂದರ ದಾಸರ ಬಗ್ಗೆ ಜಾಸ್ತಿ ತಿಳಕೊಂಡಿರುವ ಹಂಸಾನಂದಿಯವರು ಉತ್ತರಿಸಿಯಾರು.
ಇದರ ಬಗ್ಗೆ ಹುಡುಕಾಡಿದಾಗ ವಿವರ ಸಿಕ್ಕದಿದ್ದರೂ, ಹಾಡಿನ ಬಗ್ಗೆ ಒಂದು ಕೊಂಡಿ ನನ್ನ ಮನಸೆಳೆಯಿತು- http://www.kannadaprabha.com/NewsItems.asp?ID=KP420080823050440&Title=Sapthahika+Prabha&lTitle=%D1%DB%AE%DB%A1%D5O%DA%AE%DA%C3%BA%DA&Topic=0&ndate=8/24/2008&Dist=0 (ಕೊಂಡಿ ಕನೆಕ್ಟ್ ಆಗುವುದೋ ಇಲ್ಲವೋ ಗೊತ್ತಿಲ್ಲ)
-ಗಣೇಶ.

Submitted by venkatb83 Tue, 09/25/2012 - 18:17

ಗಣೇಶ್ ಅಣ್ಣ ಅವರ ಕಣ್ಣು ತಪ್ಪಿಸಿ ಮರೆಯಾಗುವ ಬರಹ ಯಾವ್ದಾರ ಇರಲು ಸಾಧ್ಯವೇ?? ಯಾವ್ತ್ತರ ಕಣ್ಣಿಗೆ ಬೀಳದೆ ಇರದು... ನನಗೊಂದು ಕೊರಗಿತ್ತು ಗಣೇಶ್ ಅಣ್ಣ ನಂ ಬರಹ ನೋಡದೆ ಓದದೆ ಹೋದಾರು ಅಂತ.. ಆದ್ರೆ ಹೊಗೊಗ್ ಗಣೇಶ್ ಅಣ್ಣ ಅವ್ರ ಬಗ್ಗೆ ಈ ಸಂದೇಹವೇ? ಅವರು ಸಾಮಾನ್ಯರಲ್ಲ್ಲ...

ಲಕ್ಷ್ಮಿ ಬಂದಳು -ಹೋದಳು.ಮತ್ಯಾವಾಗ ಬರುವಳೋ ಗೊತ್ತಿಲ್ಲ..!!
ಗಣೇಶ್ ಅಣ್ಣ ಪ್ರತಿಕ್ರಿಯೆಗೆ ನನ್ನಿ..

ಶುಭವಾಗಲಿ..

\|

Submitted by Chikku123 Wed, 09/26/2012 - 12:14

ಚೆನ್ನಾಗಿದೆ ಸಗಿಯವ್ರೆ
ಎಲ್ಲರಿಗೂ ಇದೇ ಆಸೆ ಆದ್ರೆ ಲಕ್ಷ್ಮಿ ಯಾಕೋ ಅಂಥವರನ್ನೇ ಹುಡ್ಕೊಂಡು ಹೋಗ್ತಾಳೆ....ದುಡ್ಡು ದುಡ್ಡು ಅಂಥಾ ನೆಮ್ಮದಿ ಇಲ್ಲದೆ ಸಾಯಲಿ ಅಂತಿರ್ಬೇಕು

Submitted by venkatb83 Fri, 10/12/2012 - 18:13

In reply to by Chikku123

ಈಗ ನನ್ನ ಬರಹಗಳನ್ನು ಮತ್ತೊಮೆ ನೋಡುವಾಗ ಹೊಸ ಸಂಪದ ಕಾರಣವಾಗಿ
ನಿಮ್ಮ ಈ ಹೊಸ ಪ್ರತಿಕ್ರಿಯೆ ಕಣ್ಣಿಗೆ ಬಿತ್ತು..

ಚಿಕ್ಕು ತಡ ಮರು ಪ್ರತಿಕ್ರಿಯೆಗೆ ಕ್ಷಮೆ ಇರಲಿ...!!

"ಲಕ್ಷ್ಮಿ ಯಾಕೋ ಅಂಥವರನ್ನೇ ಹುಡ್ಕೊಂಡು ಹೋಗ್ತಾಳೆ....ದುಡ್ಡು ದುಡ್ಡು ಅಂಥಾ ನೆಮ್ಮದಿ ಇಲ್ಲದೆ ಸಾಯಲಿ ಅಂತಿರ್ಬೇಕು"

ಇರ್ಬೇಕು...ಕೇಳೋಣ ಅಂದ್ರೆ ನಮ್ ಕಡೆ ಬರಲಿಕ್ಕೆ ಇಲ್ಲ...!!
ನಿಮ್ ಕಡೆ ಬರುವವಳಿದ್ದಾಳೆ...!
ಶುಭವಾಗಲಿ..

ನನ್ನಿ

\|/