ಭಾಗ - ೮ ಮನುವಿನ ಧರ್ಮ: ಪುಕ್ಕಟೆಯಾಗಿ ಸಿಕ್ಕಿರುವುದು ಹಿಂದೂಗಳು ಮಾತ್ರವೇ?
Let your women keep silence in the churches: for it is not permitted unto them to speak; but they are commanded to be under obedience, as also saith the law..... and if they will leave anything let them ask their husbands at home; for it is a shame for women to speak in the church. (1Corinthians, 14/34,35)
ನಿಮ್ಮ ಸ್ತ್ರೀಯರು ಸಭೆಗಳಲ್ಲಿ ಮೌನವಾಗಿರಬೇಕು; ಮಾತನಾಡುವದಕ್ಕೆ ಅವರಿಗೆ ಅಪ್ಪಣೆಯಿಲ್ಲ; ಅವರು ವಿಧೇಯರಾಗಿರಬೇಕೆಂದು ನ್ಯಾಯಪ್ರಮಾಣವು ಸಹ ಹೇಳುತ್ತದಲ್ಲಾ. ಅವರು ಏನಾದರೂ ತಿಳಿದುಕೊಳ್ಳುವದಕ್ಕೆ ಅಪೇಕ್ಷಿಸಿದರೆ ಮನೆಯಲ್ಲಿ ತಮ್ಮ ಗಂಡಂದಿರನ್ನು ಕೇಳಲಿ. ಸ್ತ್ರೀಯರು ಸಭೆಯಲ್ಲಿ ಮಾತನಾಡುವದು ನಾಚಿಗೆಗೆಟ್ಟದ್ದಾಗಿದೆ. (ಕೋರಿಂಥದವರಿಗೆ ಬರೆದ ಮೊದಲ ಪತ್ರ, ೧೪/೩೪,೩೫)
Wives, submit yourselves unto your own husbands, as unto the Lord. For the husband is the head of the wife, even as Christ is the head of the Church.... (Ephesians, 5/22,23)
ಸ್ತ್ರೀಯರೇ, ನೀವು ಕರ್ತನಿಗೆ ಹೇಗೋ ಹಾಗೆಯೇ ನಿಮ್ಮನಿಮ್ಮ ಗಂಡಂದಿರಿಗೆ ಅಧೀನರಾಗಿ ಇರಿ. ಕ್ರಿಸ್ತನು ಸಭೆಗೆ ತಲೆಯಾಗಿರುವ ಪ್ರಕಾರವೇ ಗಂಡನು ಹೆಂಡತಿಗೆ ತಲೆಯಾಗಿದ್ದಾನೆ. ಆತನು (ಕ್ರಿಸ್ತನು) ದೇಹಕ್ಕೆ ರಕ್ಷಕ ನಾಗಿದ್ದಾನೆ....... (ಎಫೆಸದವರಿಗೆ ೫/೨೨,೨೩, ೨೪).
A woman should learn in a quiet manner with full submission. And I do not permit a woman to teach or to have authority over a man. Instead, she is to continue in a quiet manner.(1 Timothy, 2/11,12)
ಸ್ತ್ರೀಯು ಮೌನವಾಗಿದ್ದು ಪೂರ್ಣ ವಿಧೇಯಳಾಗಿ ಕಲಿಯಬೇಕು. ಆದರೆ ಉಪದೇಶ ಮಾಡುವದಕ್ಕಾಗಲೀ ಪುರುಷರ ಮೇಲೆ ಅಧಿಕಾರ ನಡಿಸುವದಕ್ಕಾಗಲೀ ಸ್ತ್ರೀಗೆ ನಾನು ಅಪ್ಪಣೆಕೊಡುವದಿಲ್ಲ; ಆಕೆಯು ಮೌನವಾಗಿಯೇ ಇರಬೇಕು. (೧ ತಿಮೋಥಿಗೆ ಬರೆದ ಮೊದಲ ಪತ್ರ ೨/೧೧,೧೨)
‘If a woman conceives and gives birth to a male child, she shall be [ceremonially] unclean for seven days, unclean as during her monthly period....Then she shall remain [intimately separated] thirty-three days to be purified from the blood; she shall not touch any consecrated thing nor enter the [courtyard of the] sanctuary until the days of her purification are over. But if she gives birth to a female child, then she shall be unclean for two weeks, as during her monthly period, and she shall remain [intimately separated] sixty-six days to be purified from the blood. (Leviticus 12/2,4,5)
ಒಬ್ಬ ಸ್ತ್ರೀಯು ಗರ್ಭಧರಿಸಿ ಗಂಡುಮಗುವನ್ನು ಹೆತ್ತರೆ, ಅವಳು ಏಳು ದಿನಗಳು ಅಶುದ್ಧಳಾಗಿರಬೇಕು; ತನ್ನ ಮುಟ್ಟಿಗಾಗಿ ಪ್ರತ್ಯೇಕಿಸಿದ ದಿನಗಳ ಪ್ರಕಾರ ಅವಳು ಅಶುದ್ಧಳಾಗಿರಬೇಕು.........ಅವಳು ಮೂವತ್ತಮೂರು ದಿನಗಳು ಶುದ್ಧೀ ಕರಣದಲ್ಲಿ ಮುಂದುವರಿಯಬೇಕು, ಅವಳು ಶುದ್ಧೀ ಕರಣದ ದಿನಗಳು ಪೂರೈಸುವ ತನಕ ಪರಿಶುದ್ಧವಾದದ್ದನ್ನು ಮುಟ್ಟಬಾರದು ಪರಿಶುದ್ಧ ಸ್ಥಳಕ್ಕೆ ಬರಬಾರದು. ಅವಳು ಹೆಣ್ಣುಮಗುವನ್ನು ಹೆತ್ತರೆ ಮುಟ್ಟಿನಲ್ಲಿರುವಂತೆ ಎರಡು ವಾರಗಳು ಅಶುದ್ಧಳಾಗಿ ಇರಬೇಕು. ಅವಳು ಅರವತ್ತಾರು ದಿನಗಳು ಶುದ್ಧೀಕರಣದಲ್ಲಿ ಮುಂದುವರಿಸಬೇಕು. (ಲೇವಿಯ ಅಥವಾ ಯಾಜಕಕಾಂಡ ೧೨/೨,೪,೫)
For man was not made from woman, but woman from man. Neither was man created for woman, but woman for man. (1Corinthians, 11/8,9)
ಪುರುಷನು ಸ್ತ್ರೀಯಿಂದ ನಿರ್ಮಿತನಾಗಲಿಲ್ಲ; ಸ್ತ್ರೀಯು ಪುರುಷನಿಂದ ನಿರ್ಮಿತವಾದಳು. ಇದಲ್ಲದೆ ಪುರುಷನು ಸ್ತ್ರೀಯ ನಿಮಿತ್ತವಾಗಿ ನಿರ್ಮಾಣವಾಗಲಿಲ್ಲ; ಆದರೆ ಸ್ತ್ರೀಯು ಪುರುಷನ ನಿಮಿತ್ತವಾಗಿ ನಿರ್ಮಾಣವಾದಳು. (ಕೋರಿಂಥವರಿಗೆ ಬರೆದ ಮೊದಲ ಪತ್ರ, ೧೧/೮,೯)
ಕೇಳಿಸಿಕೊಂಡಿರಲ್ಲವೇ?!
- ಸ್ತ್ರೀಯು ಜನಿಸಿದ್ದು ಗಂಡಸಿನ ಭೋಗಕ್ಕಾಗಿ.
- ಚರ್ಚಿನಂತಹ ಸಮಾವೇಶ ಸ್ಥಳಗಳಲ್ಲಿ ಸ್ತ್ರೀಯರು ತುಟಿಬಿಚ್ಚಬಾರದು
- ಓ ಹೆಂಡತಿಯರೇ! ನಿಮ್ಮ ಗಂಡಂದಿರಿಗೆ ಅಡಿಯಾಳಾಗಿ ಇರಿ. ಚರ್ಚಿಗೆ ಏಸು ಪ್ರಭು ಒಡೆಯನಿದ್ದಂತೆ ನಿನ್ನ ಗಂಡ ನಿನಗೆ ಪ್ರಭು.
- ಸ್ತ್ರೀಯರು ಬಾಯಿಮುಚ್ಚಿಕೊಂಡು ಬಿದ್ದಿರಬೇಕು. ಗಂಡಸರಿಗೆ ಎದುರು ಮಾತನಾಡಬಾರದು. ಗಂಡಸರ ಮೇಲೆ ಅಧಿಕಾರ ಚಲಾಯಿಸಲು ಅವರಿಗೆ ದೇವರ ಅನುಮತಿ ಇಲ್ಲ!
- ಮದುವೆಗೆ ಮುಂಚೆ ಗಂಡನಾದವನು ಒಬ್ಬನಿಗೆ ಗುಲಾಮನಾಗಿದ್ದರೆ.... ಮದುವೆಯಾದ ನಂತರ ಗಂಡನಾದವನು ಒಡೆಯನನ್ನು ಬಿಟ್ಟು ಹೊರಟುಹೋದರೂ ಸಹ.... ಅವನ ಹೆಂಡತಿ, ಮಕ್ಕಳು ಯಜಮಾನನ ಸೊತ್ತೆಂದೇ ಪರಿಗಣಿಸತಕ್ಕದ್ದು. ಗಂಡನಿಗೆ ದಾಸ್ಯದಿಂದ ಮುಕ್ತಿ ದೊರೆತರೂ ಸಹ ಹೆಂಡತಿಯಾದವಳಿಗೆ ದಾಸ್ಯದಿಂದ ಮುಕ್ತಿ ದೊರಕದು.
- ಮದುವೆಯಾದ ನಂತರ "ಬಟ್ಟೆ ಪರೀಕ್ಷೆ"ಯಲ್ಲಿ ನವ ವಧುವಿನ ಕನ್ಯತ್ವವು ಋಜುವಾಗದೇ ಇದ್ದಲ್ಲಿ ಆಕೆಗೆ ಜನ್ಮ ಕೊಟ್ಟ ತಂದೆ-ತಾಯಿಯರ ಮನೆಯ ಹತ್ತಿರ ಆಕೆಯನ್ನು ಕಲ್ಲು ಹೊಡೆದು ಸಾಯಿಸಬೇಕು.
- ಗಂಡನಾದವನಿಗೆ ಕೋಪ ಬಂದು ತನ್ನ ಹೆಂಡತಿಯು ಬೇರೆಯೊಬ್ಬನೊಡನೆ ವ್ಯಭಿಚಾರ ಮಾಡಿದ್ದಾಳೆಂದು ಆರೋಪಿಸಿದರೆ, ಯಾಜ್ಞಿಕನು ಆಕೆಗೆ ಹೊಟ್ಟೆಯುಬ್ಬಿ ಸೊಂಟ ಬಿದ್ದು ಹೋಗುವಂತಹ ಕೆಟ್ಟ ನೀರನ್ನು ಕುಡಿಸಬೇಕು.
- ಗಂಡಸಾದವನು ಸ್ತ್ರೀಯ ಮೇಲೆ ಅತ್ಯಾಚಾರವೆಸಗಿ ಆಡೊಂದನ್ನು ಬಲಿಕೊಟ್ಟರೆ ಅವನಿಗೆ ಶಿಕ್ಷೆಯಿಲ್ಲ.
- ಗಂಡು ಶಿಶುವಿಗೆ ಜನ್ಮವಿತ್ತರೆ ಬಾಣಂತಿಯರಿಗೆ ಒಂದು ವಾರದವರೆಗೆ ಮುಟ್ಟು, ೩೩ ದಿನಗಳ ಕಾಲ ಮೈಲಿಗೆ. ಆದರೆ ಹೆಣ್ಣು ಶಿಶುವಿಗೆ ಜನ್ಮವಿತ್ತರೆ ಎರಡು ವಾರಗಳ ಕಾಲ ಮುಟ್ಟು ಮತ್ತು ೬೬ ದಿನಗಳ ಕಾಲ ಮೈಲಿಗೆ.
(೫ರಿಂದ ೯ರವರೆಗಿನ ಅಂಶಗಳು ಹಿಂದಿನ ಲೇಖನದಲ್ಲಿ - "ಯಾವುದು ಅಶುದ್ಧ? ಯಾವುದು ಪರಿಶುದ್ಧ?" ಉಲ್ಲೇಖಿಸಲ್ಪಟ್ಟಿವೆ).
ಹುಟ್ಟುವ ಮಗು ಗಂಡಾದರೇನು, ಹೆಣ್ಣಾದರೇನು ಜನನದ ಪ್ರಕ್ರಿಯೆ ಒಂದೇ ತೆರನಾಗಿರುತ್ತದೆ ಮತ್ತು ಬಾಣಂತಿಯ ಶರೀರ ಧರ್ಮವು ಒಂದೇ ವಿಧವಾಗಿರುತ್ತದೆ. ಆದರೂ ಗಂಡು ಶಿಶುವನ್ನು ಹಡೆದಾಗ ಮತ್ತು ಹೆಣ್ಣು ಶಿಶುವನ್ನು ಹಡೆದಾಗ ಪಾಲಿಸಬೇಕಾದ ಮೈಲಿಗೆಯು ಒಂದು ತಿಂಗಳ ಕಾಲ ಹೆಚ್ಚು ಮತ್ತು ಶೌಚದ (ಮುಟ್ಟಿನ) ಕಾಲವು ಎರಡು ಪಟ್ಟು ಅಧಿಕ!
ಇವು ಪರಿಶುದ್ಧ ಗ್ರಂಥದಲ್ಲಿ ಹೇಳಲ್ಪಟ್ಟಿರುವ ಸ್ತ್ರೀ ಧರ್ಮ!
ಈಗ ನಾವು ದೊಡ್ಡದಾಗಿ ಬಾಯಿಬಡಿದುಕೊಳ್ಳುವ ಬುದ್ಧಿಜೀವಿಗಳನ್ನು, ಸ್ತ್ರೀವಾದಿಗಳು ಎಂದು ಘೋಷಿಸಿಕೊಂಡವರನ್ನು ಮತ್ತು ಮಹಾನ್ ಮಾನವತಾವಾದಿಗಳೆಂದು ಬಡಾಯಿ ಕೊಚ್ಚಿಕೊಳ್ಳುವವರನ್ನು ಕೆಲವೊಂದು ಪ್ರಶ್ನೆಗಳನ್ನು ಕೇಳೋಣ.
ಮನುಸ್ಮೃತಿಯಲ್ಲಿ ಸ್ತ್ರೀಯು ತಂದೆ, ಭರ್ತ ಮತ್ತು ಪುತ್ರರ ರಕ್ಷಣೆಯಲ್ಲಿ ಇರತಕ್ಕದ್ದು ಎಂದು ಹೇಳಿದ ಮಾತ್ರಕ್ಕೇ ಮನುವು ಸ್ತ್ರೀಯರ ಸ್ವಾತಂತ್ರ್ಯ ಹರಣ ಮಾಡಿದ್ದಾನೆಂದು ನೀವೆಲ್ಲಾ ಆವೇಶಪೂರಿತರಾಗಿ ಮಾತನಾಡುತ್ತಿದ್ದೀರಲ್ಲಾ? ಗಂಡನ ಕಾಲಬಳಿ ಹೆಂಡತಿಯಾದವಳು ಬಾಯಿಮುಚ್ಚಿಕೊಂಡು ಬಿದ್ದಿರಬೇಕೆಂದು "ಪರಿಶುದ್ಧ ಗ್ರಂಥ"ಲ್ಲಿ ಹೇಳಿರುವುದು ಸ್ತ್ರೀಯರಿಗೆ ಬಲುದೊಡ್ಡ ಸ್ವಾತಂತ್ರ್ಯವನ್ನು ಪ್ರಸಾದಿಸಿದಂತಾಗುತ್ತದೆಯೇ?
ಸ್ತ್ರೀಯರನ್ನು ಆದಿಶಕ್ತಿಯಾಗಿ, ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣಕರ್ತರಾದ ತ್ರಿಮೂರ್ತಿಗಳಿಗೆ ಜನ್ಮವಿತ್ತ ಮೂಲ ಸ್ವರೂಪಣಿಯಾಗಿ ಕೀರ್ತಿಸುವ ಹಿಂದೂ ಧರ್ಮವು, ಸ್ತ್ರೀಯರನ್ನು ಗೌರವಿಸಿ, ಪೂಜ್ಯಭಾವನೆಯಿಂದ ನೋಡಿದಲ್ಲಿ ದೇವತೆಗಳು ಸಂತೋಷಿಸುವರೆಂದು ಹೇಳಿದ ಮನುವು ನಿಮ್ಮ ಕಣ್ಣಿಗೆ ಸ್ತ್ರೀಯರ ಪಾಲಿಗೆ ಆಜನ್ಮ ಶತ್ರುವಾಗಿ....... ಪುರುಷಾಹಂಕಾರದ ಪಿತ್ಥ ನೆತ್ತಿಗೇರಿ ಸ್ತ್ರೀಸಂಕುಲವನ್ನು ಕಾಲಕೆಳಗೆ ಕ್ರೂರಾತಿ ಕ್ರೂರವಾಗಿ ಹೊಸಕಿ ಹಾಕಿದ ಕಡುಪಾಪಿಯಾಗಿ ಕಂಡುಬರುತ್ತಾನಲ್ಲವೇ? ಗಂಡಸಾದವನು ಹೆಂಗಸಿಗಾಗಿ ಸೃಷ್ಟಿಸಲ್ಪಟ್ಟಿಲ್ಲ, ಹೆಂಗಸು ಗಂಡಸಿನ ಭೋಗಕ್ಕಾಗಿ ಹುಟ್ಟಿರುವಳೆಂದು ಸಾರುವ ಬೈಬಲ್ ಮಾತ್ರ ನಿಮ್ಮ ದೃಷ್ಟಿಯಲ್ಲಿ ಸ್ತ್ರೀಸಂಕುಲವನ್ನು ಔನ್ನತ್ಯಕ್ಕೆ ಕೊಂಡೊಯ್ದಂತೆ ಕಾಣಿಸುತ್ತಿದೆಯಲ್ಲವೇ? ಗಂಡು ಶಿಶುವಿಗಿಂತ ಹೆಣ್ಣು ಶಿಶುವನ್ನು ಹೆತ್ತಲ್ಲಿ, ಶೌಚವನ್ನು ಪಾಲಿಸುವ ವಿಷಯದಲ್ಲಿ ದುಪ್ಪಟ್ಟು ಬಾರಿ ಅಶೌಚವನ್ನು ಪಾಲಿಸಬೇಕೆಂದು ಆದೇಶಿಸಿರುವುದು ಸ್ತ್ರೀಯರ ವಿರುದ್ಧ ತೋರಿಸುವ ಲಿಂಗಭೇದ (ಲಿಂಗ ವಿವಕ್ಷತೆ) ಧೋರಣೆಯಲ್ಲ ಅಲ್ಲವೇ?
ಹಾಗಾದರೆ ಮನುಸ್ಮೃತಿಯಲ್ಲಿ ಇದೆ ಎಂದು ನೀವು ಭಾವಿಸಿರುವುದಕ್ಕಿಂತ ನೂರು ಪಟ್ಟು ಅಧಿಕ ವಿನಾಶಕಾರಕವಾಗಿರುವ ಬೈಬಲ್ ಕುರಿತು ನೀವು ಮಾತನಾಡುವುದಿಲ್ಲವೇಕೆ? ನಿಮ್ಮ ಬಾಯಿ ತೀಟೆಯನ್ನು ಯಾವಾಗಲೂ ಹಿಂದೂ ಧರ್ಮದ ಮೇಲೆ, ಮನುಧರ್ಮದ ಮೇಲೆಯೇ ತೀರಿಸಿಕೊಳ್ಳುತ್ತೀರೇಕೆ? ಹಿಂದೂ ಸಮಾಜವು ಯಾವುದೋ ಕಾಲಕ್ಕೆ ಮೂಲೆಗೆ ಬಿಸಾಡಿದ್ದ ಮನುಸ್ಮೃತಿ ಎನ್ನುವ ಒಂದು ಗ್ರಂಥದಲ್ಲಿ ಎಲ್ಲಯೋ ಏನೋ ಇದೆ ಎಂದು ಯಾರೋ ನಿಮಗೆ ಹೇಳಿದ್ದನ್ನೇ ಏನೋ ಮಹಾಪ್ರಮಾದವಾಗುತ್ತಿದೆ ಎಂದು ನೀವು ಊರು ಕೇರಿ ಒಂದಾಗುವ ಹಾಗೆ ಬಾಯಿಬಡಿದುಕೊಳ್ಳುತ್ತಿರುತ್ತೀರಲ್ಲವೇ? ಪ್ರಪಂಚದಲ್ಲೇ ಅತಿದೊಡ್ಡ ಮತಗಳಲ್ಲಿ ಒಂದಾದ ಕ್ರೈಸ್ತಮತಾನುಯಾಯಿಗಳಿಗೆ ಸಂಬಂಧಿಸಿದ ನೂರು ಕೋಟಿಗಳಿಗೂ ಅಧಿಕ ಜನರು ಇಂದಿಗೂ ಪವಿತ್ರ ಗ್ರಂಥವೆಂದು ಪೂಜಿಸುವ ಬೈಬಲ್‌ನಲ್ಲಿ ಮನುಸ್ಮೃತಿಯಲ್ಲಿ ಇದೆಯೆಂದು ಹೇಳಲಾಗಿರುವುದಕ್ಕಿಂತ ನೂರು ಪಟ್ಟು ಅಧಿಕವಾದ ಪುರುಷಹಂಕಾರ, ಸ್ತ್ರೀ ದ್ವೇಷ ಇರುವ ವಿಷಯ ನಿಮ್ಮ ಕಣ್ಣು, ಕಿವಿಗಳಿಗೆ ಗೋಚರಿಸುವುದಿಲ್ಲವೇ? ಇದರಲ್ಲಿರುವ ಮರ್ಮವಾದರೂ ಏನು? ಹಿಂದೂ ಧರ್ಮದ ಮೇಲೆ ನೀವು ಕಾರುತ್ತಿರುವ ವಿಷವನ್ನು ಯಾವ ವಿಧವಾಗಿ ಅರ್ಥ ಮಾಡಿಕೊಳ್ಳಬೇಕು?
ಇನ್ನು ಕಡೆಯದಾಗಿ.......
ಇಂದ್ರಿಯಗಳು ಎಂತಹವರನ್ನಾದರೂ ಅಧಃಪತನಗೊಳ್ಳುವಂತೆ ಮಾಡಬಲ್ಲವಾದ್ದರಿಂದ ಹಡೆದ ತಾಯಿ, ಹೆತ್ತ ಮಗಳು, ಒಡಹುಟ್ಟಿದ ಸೋದರಿಯರೊಂದಿಗೆ ಪುರುಷನಾದವನು ಒಂಟಿಯಾಗಿ ಒಂದೇ ಆಸನದ ಮೇಲೆ ಇರಬಾರದೆಂದು ಮನುಸ್ಮೃತಿಯು ಹಿತನುಡಿಗಳನ್ನಾಡಿದರೆ...... "ನೋಡಿದಿರಾ! ಹೆತ್ತ ತಾಯಿಯೊಂದಿಗೆ, ಹಡೆದ ಮಗಳೊಂದಿಗೆ, ಒಡಹುಟ್ಟಿದವರೊಂದಿಗೆ ಸಹ ವಿವೇಚನೆಯಿಲ್ಲದ ಕಾಮುಕತ್ವವನ್ನು ಮನು ಆರೋಪಿಸಿದ್ದಾನೆ ಎಂದು ನಿಮ್ಮಲ್ಲಿನ ಕೆಲವು ಬುದ್ಧಿವಂತರು ಗಂಡ ಸತ್ತ ವಿಧವೆಯಂತೆ ಬಾಯಿ ಬಾಯಿ ಬಡಿದುಕೊಳ್ಳುತ್ತೀರಲ್ಲ? ಹಾಗಾದರೆ ಬೈಬಲ್ಲಿನ ಹಳೆ ಒಡಂಬಡಿಕೆಯಲ್ಲಿನ ಆದಿಕಾಂಡದ ೧೯ನೇ ಅಧ್ಯಾಯದಲ್ಲಿನ ಲೋಟ ಉಪಾಖ್ಯಾನವನ್ನು ಕುರಿತು ನೀವು ಏನು ಹೇಳುತ್ತೀರಿ? ಬೇಕಾದರೆ ಆ ಪರಿಶುದ್ಧ ಗ್ರಂಥದಲ್ಲಿರುವ ಅಣಿಮುತ್ತಿನಂತಹ ವಾಕ್ಯಗಳು ಇಲ್ಲಿವೆ ನೋಡಿ: ಲೋಟ, ಅವನ ಇಬ್ಬರು ಕುವರಿಯರು ಬೆಟ್ಟದ ಒಂದು ಗುಹೆಯಲ್ಲಿ ವಾಸವಿದ್ದರು. ಹಾಗಿರುವಾಗ ತನ್ನ ತಂಗಿಯೊಂದಿಗೆ ಅಕ್ಕಳಾದವಳು, "ನಮ್ಮ ತಂದೆಯು ಮುದಿಯನಾಗಿದ್ದಾನೆ. ಲೋಕಮರ್ಯಾದೆಗಾಗಿ ನಮ್ಮೊಂದಿಗೆ ಹೋಗಲು ಲೋಕದಲ್ಲಿ ಯಾವುದೇ ಪುರುಷನು ಇಲ್ಲ. ನಮ್ಮ ತಂದೆಗೆ ದ್ರಾಕ್ಷಾರಸವನ್ನು ಕುಡಿಸಿ ಅವನೊಂದಿಗೆ ಶಯನಿಸಿ ನಮ್ಮ ತಂದೆಯ ಮೂಲಕ ಸಂತಾನವನ್ನು ಪಡೆಯುವವರಾಗೋಣ ಬಾ ಎಂದು ಹೇಳಿದಳು. ಆ ರಾತ್ರಿ ಅವರು ತಮ್ಮ ತಂದೆಗೆ ದ್ರಾಕ್ಷಾರಸವನ್ನು ಕುಡಿಸಿದ ನಂತರ ಅವನ ಹಿರಿಯ ಕುಮಾರಿಯು ಒಳಗೆ ಹೋಗಿ ಅವನೊಂದಿಗೆ ಶಯನಿಸಿದಳು. ಅವಳು ಮಲಗಿಕೊಳ್ಳುವಾಗಲೂ ಏಳುವಾಗಲೂ ಅವನಿಗೆ ತಿಳಿಯಲಿಲ್ಲ. ಮರುದಿನ ರಾತ್ರಿ ಸಹ ಅವರು ತಮ್ಮ ತಂದೆಗೆ ದ್ರಾಕ್ಷಾರಸವನ್ನು ಕುಡಿಸಿದ ನಂತರ ಕಿರಿಯ ಕುಮಾರಿಯು ಎದ್ದು ಒಳಗೆ ಹೋಗಿ ಅವನೊಂದಿಗೆ ಶಯನಿಸಿದಳು. ಅವಳು ಮಲಗಿಕೊಳ್ಳುವಾಗಲೂ ಏಳುವಾಗಲೂ ಅವನಿಗೆ ತಿಳಿಯಲಿಲ್ಲ. ಆ ವಿಧವಾಗಿ ಲೋಟನ ಇಬ್ಬರು ಕುಮಾರಿಯರು ತಮ್ಮ ತಂದೆಯಿಂದ ಗರ್ಭವತಿಯರಾದರು. (ಆದಿಕಾಂಡ, ೧೯ನೇ ಅಧ್ಯಾಯ, ೩೦ -೩೬ ವಾಕ್ಯಗಳು)
ಮಹಾಜ್ಞಾನಿಗಳೇ, ಈಗ ಹೇಳಿ! ಪವಿತ್ರವಾದ ಬೈಬಲ್‌ನಲ್ಲಿ ಪ್ರಸ್ತಾವಿಸಿರುವ ಆ ಮಹಾನ್ ತಂದೆ ಮತ್ತು ಅವನು ಹೆತ್ತ ಕುಮಾರಿಯರಿಬ್ಬರಿಗೂ ಮಧ್ಯ ಇದ್ದದ್ದು ನಿಮ್ಮ ದೃಷ್ಟಿಯಲ್ಲಿ, "ಪವಿತ್ರ, ಹೇತುಬದ್ಧ, ಪ್ರಗತಿಪರ ಮತ್ತು ಸಮಾಜವನ್ನು ಮುಂದಕ್ಕೊಯ್ಯುವ ಸಂಬಂಧವೇ? ಕಾಲದೋಷವುಂಟಾದ ಮನುಸ್ಮೃತಿಯಲ್ಲಿ ಸ್ತ್ರೀ ಪುರುಷರ ಸಂಬಂಧಗಳ ಕುರಿತು ವಿಧಿಸಿದ ಓಬೀರಾಯನ ಕಾಲದ ಕಟ್ಟುಪಾಡುಗಳಿಗೆ ಚಾವಣಿ ಕುಸಿಯುವಂತೆ ಗಂಟಲು ಹರಿದುಕೊಳ್ಳುವ ನೀವು, ಈಗಲೂ ಸಹ ವಿಶ್ವದೆಲ್ಲೆಡೆ ಕೋಟ್ಯಾದಿ ಮಂದಿ ಭಕ್ತಿಯಿಂದ ಪಾರಾಯಣ ಮಾಡುತ್ತಿರುವ ಪವಿತ್ರ ಗ್ರಂಥದೊಳಗಿನ ಇಂತಹ ವಾಕರಿಕೆ ಹುಟ್ಟಿಸುವಂತಹ ವಿಷಯಗಳ ಕುರಿತು ಏಕೆ ತುಟಿ ಎರಡು ಮಾಡುತ್ತಿಲ್ಲ?
ರೋಷ, ಪೌರುಷಗಳಿಲ್ಲದ ಹಿಂದೂಗಳ ಮೇಲೆಯಷ್ಟೆ ನಿಮ್ಮ ಪ್ರತಾಪವನ್ನು ತೋರಿಸುತ್ತಿದ್ದೀರಿಯೇ ಹೊರತು ತಮ್ಮ ತಂಟೆಗೆ ಬಂದರೆ ತಕ್ಕ ಶಾಸ್ತಿ ಮಾಡುವ ಅನ್ಯ ಮತಗಳ ಮೇಲೇಕೆ ಇಲ್ಲ?
ಮುಂದುವರೆಯುವುದು.................
(ಆಧಾರ: ತೆಲುಗಿನಲ್ಲಿ ಶ್ರೀಯುತ ಎಂ.ವಿ.ಆರ್ ಶಾಸ್ತ್ರಿ ಅವರು ರಚಿಸಿರುವ "ಮನುಧರ್ಮ - ನಮಗೆ ಬೇಡವಾದ ಮನು: ಮನುಧರ್ಮಂ, ಮನಕು ಗಿಟ್ಟನಿ ಮನುವು" ಪುಸ್ತಕದ ಎಂಟನೆಯ ಅಧ್ಯಾಯ).
*****
ಈ ಸರಣಿಯ ಹಿಂದಿನ ಲೇಖನ ಭಾಗ - ೭ ಮನುವಿನ ಧರ್ಮ: ಯಾವುದು ಅಶುದ್ಧ? ಯಾವುದು ಪರಿಶುದ್ಧ? ಓದಲು ಈ ಕೊಂಡಿಯನ್ನು ನೋಡಿ: https://sampada.net/blog/%E0%B2%AD%E0%B2%BE%E0%B2%97-%E0%B3%AD-%E0%B2%AE...
ಚಿತ್ರಗಳ ಕೃಪೆ: ಗೂಗಲ್
ಚಿತ್ರ - ೧: ಮನುಸ್ಮೃತಿಸಾರ
ಚಿತ್ರ -೨: ಪರಿಶುದ್ಧ ಗ್ರಂಥಮು
Comments
ಉ: ಭಾಗ - ೮ ಮನುವಿನ ಧರ್ಮ: ಪುಕ್ಕಟೆಯಾಗಿ ಸಿಕ್ಕಿರುವುದು ಹಿಂದೂಗಳು...
ಈ ಸರಣಿಯ ಮುಂದಿನ ಲೇಖನ ಭಾಗ - ೯ ಮನುವಿನ ಧರ್ಮ: ಜಾತಿಯೇ ಬೇರೆ..... ವರ್ಣವೇ ಬೇರೆ! ಓದಲು ಈ ಕೊಂಡಿಯನ್ನು ನೋಡಿ:https://sampada.net/blog/%E0%B2%AD%E0%B2%BE%E0%B2%97-%E0%B3%AF-%E0%B2%AE...