ಭಾಗ - ೯ ವೇದ ಗಣಿತ ಕಿರು ಪರಿಚಯ: ಕಟಪಯಾದಿ ಪದ್ಧತಿಯನ್ವಯ ಗ್ರಹಗಳ ಪರಿಭ್ರಮಣ

ಭಾಗ - ೯ ವೇದ ಗಣಿತ ಕಿರು ಪರಿಚಯ: ಕಟಪಯಾದಿ ಪದ್ಧತಿಯನ್ವಯ ಗ್ರಹಗಳ ಪರಿಭ್ರಮಣ

ಚಿತ್ರ

ಭಾಗ - ೯ ವೇದ ಗಣಿತ ಕಿರು ಪರಿಚಯ: ಕಟಪಯಾದಿ ಪದ್ಧತಿಯನ್ವಯ ಗ್ರಹಗಳ ಪರಿಭ್ರಮಣ
ವಿಷಯ: ಕಟಪಯಾದಿ ಪದ್ಧತಿ - ೩ನ್ನು ಅನುಸರಿಸಿ ಗ್ರಹಗಳ ಪರಿಭ್ರಮವಣವನ್ನು ಸಾಂಕೇತಿಕವಾಗಿ ಹೇಳುವುದು
ವಿವರಣೆ: 
೧) ಆರ್ಯಭಟ್ಟನು ಒಂದು ಮಹಾಯುಗದಲ್ಲಿ ಗ್ರಹವೊಂದು ಕೈಗೊಳ್ಳುವ ಪರಿಭ್ರಮಣವನ್ನು ಕಟಪಯಾದಿ ಪದ್ಧತಿ - ೩ನ್ನು ಅನ್ವಯಿಸಿ ಸೂತ್ರೀಕರಿಸಿದ್ದಾನೆ. 
೨) ನಾಲ್ಕು ಯುಗಗಳಾದ - ಕೃತ, ತ್ರೇತಾ, ದ್ವಾಪರ ಹಾಗು ಕಲಿಯುಗಗಳ ಒಟ್ಟು ಕಾಲವನ್ನು ಒಂದು ಮಹಾಯುಗವೆಂದು ಕರೆಯಲಾಗುತ್ತದೆ (ಚಿತ್ರ ೯-೧ ನೋಡಿ). ಅವುಗಳ ಒಟ್ಟು ಅವಧಿಯು ೪೩, ೨೦, ೦೦೦ (ನಲವತ್ತಮೂರು ಲಕ್ಷದ ಇಪ್ಪತ್ತು ಸಾವಿರ ವರ್ಷಗಳು)
೩) ಆರ್ಯಭಟ್ಟನು ಪ್ರತಿಯೊಂದು ಗ್ರಹವೂ ಒಂದು ಮಹಾಯುಗದಲ್ಲಿ ಕೈಗೊಳ್ಳುವ ಪರಿಭ್ರಮಣವನ್ನು ಲೆಕ್ಕಹಾಕಿ ಅವನ್ನು ಕೆಳಗಿನಂತೆ ಕೊಟ್ಟಿರುತ್ತಾನೆ. (ಸೂರ್ಯನ ಚಲನೆಯು ಸಾಪೇಕ್ಷವಾಗಿ ನಮಗೆ ಗೋಚರಿಸುವುದರಿಂದ ಅನುಕೂಲಕ್ಕಾಗಿ ಭೂಮಿಯನ್ನು ಕೇಂದ್ರವಾಗಿರಿಸಿ ಆರ್ಯಭಟ್ಟನು ಈ ಲೆಕ್ಕಗಳನ್ನು ಕೊಟ್ಟಿರುತ್ತಾನೆ). 
 
ಶನಿ: 
ಕಟಪಯಾದಿ ಶಬ್ದ ಸಂಖ್ಯೆ - *ಧುಙ್ವಿಘ್ವ=ದು+ಙಿ+ವಿ+ಘ+ವ
=[ಧು=(ಧ+ಉ)] + [ಙಿ=(ಙ+ಇ)] + [ವಿ=(ವ+ಇ)] + [ಘ=(ಘ್+ಅ)] + [ವ=(ವ್+ಅ)]
=[(೧೪*೧೦ ೪)] + [(೫*೧೦ ೨)] + [(೬*೧೦ ೩)] + [(೪*೧೦ ೦)] + [(೬*೧೦ ೧)]
=[೧,೪೦,೦೦೦]+[೫೦೦]+[೬೦೦೦]+[೪]+[೬೦]
=೧,೪೬,೫೬೪
*ಒತ್ತಕ್ಷರಗಳು ಅಥವಾ ದ್ವಿತ್ವಾಕ್ಷರಗಳು ಬಂದಾಗ ಸ್ವರಾಕ್ಷರದ ಸಂಖ್ಯಾ ಸಂಕೇತವು ಎರಡೂ ವ್ಯಂಜನಾಕ್ಷರಗಳಿಗೆ ಅನ್ವಯಿಸುತ್ತಿದೆ ಎನ್ನುವುದನ್ನು ಗಮನಿಸಿ.  ಉದಾಹರಣೆ: ಙ್ವಿ = (ಙಿ)+(ವಿ) = (ಙ್+ಇ)+(ವ್+ಇ). ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ’ಇ’ ಅಕ್ಷರದ ಬೆಲೆಯು ವರ್ಗೀಯ ವ್ಯಂಜನಕ್ಕೆ ಹಾಗು ಅವರ್ಗೀಯ ವ್ಯಂಜನಕ್ಕೆ ಬೇರೆ ಬೇರೆಯಾಗಿದೆ. 
 
ಗುರು: 
ಕಟಪಯಾದಿ ಶಬ್ದ ಸಂಖ್ಯೆ - ಖ್ರಿಚ್ಯುಭ = ಖಿ+ರಿ+ಚು+ಯು+ಭ
=[ಖಿ=(ಖ್+ಇ)] + [ರಿ= (ರ್+ಇ)] + [ಚು=(ಚ್+ಉ)] + [ಯು= (ಯ್+ಉ)] + [ಭ=(ಭ್+ಅ)]
=[(೨*೧೦ ೨)] + [(೪*೧೦ ೩)] + [(೬*೧೦ ೪)] + [(೩*೧೦ ೫)] + [(೨೪*೧೦ ೦)]
= [೨೦೦] + [೪,೦೦೦] + [೬೦,೦೦೦] + [೩,೦೦,೦೦೦] + [೨೪]
=೩,೬೪,೨೨೪
 
ಕುಜ: 
ಕಟಪಯಾದಿ ಶಬ್ದ ಸಂಖ್ಯೆ - ಭದ್ಲಿಝುನುಖೃ = ಭ+ದಿ+ಲಿ+ಝು+ನು+ಖೃ
= [ಭ=ಭ್+ಅ] + [ದಿ=ದ್+ಇ] + [ಲಿ=ಲ್+ಇ] + [ಝ=(ಝ್+ಉ)] + [ನು=ನ್+ಉ] + [ಖೃ=ಖ+ಋ]
= [೨೪*೧೦ ೦] + [೧೮*೧೦ ೨] + [೫*೧೦ ೩] + [೯*೧೦ ೪] + [೨೦*೧೦ ೪] + [೨*೧೦ ೬]
= ೨೪+೧೮೦೦+೫,೦೦೦+೯೦,೦೦೦+೨,೦೦,೦೦೦+೨೦,೦೦,೦೦೦
= ೨೨,೯೬,೮೨೪
 
ಸೂರ್ಯ (ಭೂಮಿ):
ಕಟಪಯಾದಿ ಶಬ್ದ ಸಂಖ್ಯೆ - ಖ್ಯುಘೃ = ಖು+ಯು+ಘೃ
= [ಖು=(ಖ್+ಉ)] + [ಯು=(ಯ್+ಉ)] + [ಘೃ=(ಘ್+ಋ)]
= [(೨*೧೦ ೪)] + [(೩*೧೦ ೫)] + [(೪*೧೦ ೬)]
= [೨೦,೦೦೦] + [೩,೦೦,೦೦೦] + [೪೦,೦೦,೦೦೦]
= ೪೩,೨೦,೦೦೦
 
ಶುಕ್ರ: 
ಕಟಪಯಾದಿ ಶಬ್ದ ಸಂಖ್ಯೆ - ಜಷಬಿಖುಛೃ = ಜ+ಷ+ಬಿ+ಖು+ಛೃ
= [ಜ=(ಜ್+ಅ)] + [ಷ=(ಷ್+ಅ)] + [ಬಿ=(ಬ್+ಇ)] + [ಖು=(ಖ್+ಉ)] + [ಛೃ=(ಛ್+ಋ)]
= [(೮*೧೦ ೦)] + [(೮*೧೦ ೧)] + [(೨೩*೧೦ ೨)] + [(೨*೧೦ ೪)] + [(೭*೧೦ ೬)]
= [೮] + [೮೦] + [೨,೩೦೦] + [೨೦,೦೦೦] + [೭೦,೦೦,೦೦೦]
= ೭೦,೨೨,೩೮೮
 
ಬುಧ: 
ಕಟಪಯಾದಿ ಶಬ್ದ ಸಂಖ್ಯೆ - ಸುಗುಶಿಥೃನ = ಸು+ಗು+ಶಿ+ಥೃ+ನ
= [ಸು=(ಸ್+ಉ)] + [ಗು=(ಗ್+ಉ)] + [ಶಿ=(ಶ್+ಇ)] + [ಥೃ=(ಥ್+ಋ)] + [ನ=(ನ್+ಅ)]
= [೯*೧೦ ೫] + [೩*೧೦ ೪] + [೭*೧೦ ೩] + [೧೭*೧೦ ೬] + [೨೦*೧೦ ೦]
= [೯,೦೦,೦೦೦] + [೩೦,೦೦೦] + [೭,೦೦೦] + [೧,೭೦,೦೦,೦೦೦] + [೨೦] 
=  ೧,೭೯,೩೭,೦೨೦
 
ಚಂದ್ರ: 
ಕಟಪಯಾದಿ ಶಬ್ದ ಸಂಖ್ಯೆ - ಚಯಗಿಯಿಙುಶುಛೃಲೃ = ಚ+ಯ+ಗಿ+ಯಿ+ಙು+ಶು+ಛೃ+ಲೃ
= [ಚ=(ಚ್+ಅ)] + [ಯ=ಯ್+ಅ] + [ಗಿ=ಗ್+ಇ] + [ಯಿ=ಯ್+ಇ] + [ಙು=ಙ್+ಉ] + [ಶು=(ಶ್+ಉ)] + [ಛೃ=ಛ್+ಋ] + [ಲೃ = ಲ+ಋ]  
= [೬*೧೦ ೦] + [೩*೧೦ ೧] + [೩*೧೦ ೨] + [೩*೧೦ ೩] + [೫*೧೦ ೪] + [೭*೧೦ ೫] + [೭*೧೦ ೬] + [೫*೧೦ ೭] 
= [೬] + [೩೦] + [೩೦೦] + [೩,೦೦೦] + [೫೦,೦೦೦] + [೭,೦೦,೦೦೦] + [೭೦,೦೦,೦೦೦] + [೫,೦೦,೦೦,೦೦೦] 
=  ೫,೭೭,೫೩,೩೩೬ 
 
ವಿವಿಧ ಗ್ರಹಗಳ ಪರಿಭ್ರಮಣವನ್ನು ಮೇಲೆ ವಿವರಿಸಿದಂತೆ ಲೆಕ್ಕ ಹಾಕಿದಾಗ ಅವುಗಳ ಪರಿಭ್ರಮಣವು ಆರೋಹಣ ಕ್ರಮದಂತೆ ಕೆಳಕಂಡಂತೆ ಇರುತ್ತದೆ (ಚಿತ್ರ ೯-೨)
 
****
ಆಂಗ್ಲ ಮೂಲ: ಶ್ರೀಯುತ ಡಾ. ರೇಮೆಳ್ಳ ಅವಧಾನಿಗಳು ರಚಿಸಿರುವ ವೇದ ಗಣಿತ -೪, ಪ್ರಕಟಣೆ: ಶ್ರೀ ವೇದಭಾರತಿ, ಭಾಗ್ಯನಗರ VEDIC MATHEMATICS - 4  (PUBLISHED BY SHRI VEDA BHARATHI, AUTHOR: Dr. Remella Avadhanulu)
 
ಈ ಸರಣಿಯ ಹಿಂದಿನ ಲೇಖನಕ್ಕೆ "ಭಾಗ - ೮ ವೇದ ಗಣಿತ ಕಿರು ಪರಿಚಯ: ಕಟಪಯಾದಿ ಪದ್ಧತಿ - ೩" ಕೆಳಗಿನ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%AE-%E0%B2%B5...
 
 
 
 
 
 
 
 
 
 
 
 
 
 
 

Rating
No votes yet

Comments

Submitted by makara Mon, 04/17/2017 - 23:33

ಸಂಪದದ ವಾಚಕ ಮಿತ್ರರೆಲ್ಲರಿಗೂ ಧನ್ಯವಾದಗಳು. ಈ ಸರಣಿಯ ಮುಂದಿನ ಲೇಖನಕ್ಕಾಗಿ ಈ ಕೆಳಗಿನ ಕೊಂಡಿಯನ್ನು ನೋಡಿ. ವಂದನೆಗಳೊಂದಿಗೆ ಶ್ರೀಧರ್ ಬಂಡ್ರಿ https://sampada.net/blog/%E0%B2%AD%E0%B2%BE%E0%B2%97-%E0%B3%A7%E0%B3%A6-...