ಭಾನುವಾರದ ಬೆಳಗಿನ ಮೌನ

ಭಾನುವಾರದ ಬೆಳಗಿನ ಮೌನ

ಭಾನುವಾರದ ಬೆಳಗಿನ ಮೌನ ನನಗೆ ಇಷ್ಟ. ನನಗಂತೂ ಭಾನುವಾರ ಎಲ್ಲ ಜಗ್ಗಾಟದ ದಿನಗಳ ನಡುವೆ ತಣ್ಣಗೆ ತೇಲುವ ನಡುಗಡ್ಡೆ.

ಶನಿವಾರದ ವೀಕೆಂಡ್ ಅಬ್ಬರಗಳು ಮುಗಿದಿದೆ. ಶುಕ್ರವಾರದ - ಕೆಲಸದ ಕಡೆಯ ದಿನದ - ಸಂತೋಷ ಕರಗಿದೆ. ಗುರುವಾರದ - ವೀಕೆಂಡ್ ಬಂತೆ - ಎಂಬ ಪ್ರಶ್ನೆ ಆಗಲೆ ಉತ್ತರವಾಗದೆ. ಬುಧವಾರದ ವೀಕೆಂಡ್ ಯಾವಗಪ್ಪ - ಹಿಂದಕ್ಕಾಗಿದೆ. ಮಂಗಳವಾರದ - ವೀಕೆಂಡಿನ ಕನಸು ನಿಜವಾ - ಎಂಬ ಅನುಮಾನ ನಿಜವಾಗಿದೆ. ಸೋಮವಾರದ - ಮತ್ತೆ ಶುರುವಾಯಿತಲ್ಲ-ದ ಬೇಸರ ಹೋದ ಶತಮಾನದ್ದು ಅನಿಸುತ್ತಿದೆ.

ಭಾನುವಾರದ ಬೆಳಗಿನ ಮೌನ ನನಗೆ ಇಷ್ಟ. ಆಗಲೇ ಇದನ್ನು ಬರೆಯುತ್ತಿದ್ದೇನೆ. ಇದು ನನ್ನ ಇಷ್ಟದ ಸವಿಯನ್ನು ಹೆಚ್ಚಿಸಿದೆ.

ದೂರದಲ್ಲಿ ನನ್ನ ಹಾಗೆ ಬೇಗ ಎಚ್ಚರವಾದ ಹಕ್ಕಿ ಯಾರನ್ನೋ ಕರೆಯುತ್ತಿದೆ. ಅಥವಾ ಭಾನುವಾರದ ಬೆಳಗಿನ ಮೌನ ಅದಕ್ಕೆ ಅಸಹನೀಯವಾಗಿದೆ.

Rating
No votes yet