ಭಾರತವಲ್ಲ "ಮಹಾಭಾರತ"

ಭಾರತವಲ್ಲ "ಮಹಾಭಾರತ"

ವೇದ ವ್ಯಾಸರು
ಬರೆದರು
ಬರೀ ಭಾರತವಲ್ಲ
"ಮಹಾ" ಭಾರತ.
ಸತ್ಯ-ಅಸತ್ಯವನ್ನು,
ಕುರುಡರು-ಕಣ್ಣಿದ್ದೂ ಕುರುಡರು,
ಹೆಂಡತಿ ಇಬ್ಬರಿದ್ದರೂ,
ಪುತ್ರರನ್ನು ಪಡೆಯಲಾಗದವನು.
ಸಾವು ಗೊತ್ತಿದ್ದರೂ
ಇಚ್ಚಾ ಮರಣದವನು.
ಕ್ಷತ್ರೀಯನಾದರೂ,
ಸೂತ ಪುತ್ರನೆನಿಸಿಕೊಂಡವನು.
ಮನ ಸಾಕ್ಷಿ ಇದ್ದರೂ,
ಅನ್ನದ ಬಾರಕ್ಕೆ ಬಿದ್ದವರು.
ಒಂದು ಕಡೆ ಧರ್ಮದ,
ಪಾಂಡವರ ದಂಡು.
ಮತ್ತೊಂದು ಕಡೆ ಅಧರ್ಮದ,
ಕೌರವರ ಹಿಂಡು.
ಯುದ್ಧವೋ ಇಲ್ಲ!!
ಭೂ ಭಾರ ಕಳೆಯುವ
ಒಂದು ತಂತ್ರವೋ !!
ತಿಂಗಳಲ್ಲ ! ವರ್ಷವಲ್ಲ !
ಯುಗವಲ್ಲ ! ಕೇವಲ
ಹದಿನೆಂಟು ದಿನಗಳು!!
ರಾಜ್ಯ-ರಾಜ್ಯದ
ನಡುವೆ ಅಲ್ಲ,
ರಾಜ-ರಾಜರ
ನಡುವೆ ಅಲ್ಲ,
ಮನುಷ್ಯ-ಮನುಷ್ಯರ
ನಡುವೆ ಅಲ್ಲವೇ ಅಲ್ಲ.
ಕೇವಲ ಅವರ ನಡವಳಿಕೆ ನಡುವೆ.
ಗೆದ್ದಿದ್ದು ಇವರ್ಯಾರು ಅಲ್ಲ.
ಸತ್ಯ ಮೇವ ಜಯತೆ||
ಧರ್ಮ ಮೇವ ಜಯತೆ||
ಇಲ್ಲಿ ನಡೆದಿದ್ದು
ಶಕುನಿಯ ಕುತಂತ್ರ ;
ಮಹಾ ಮೂರ್ತಿಯ ಪ್ರತಿತಂತ್ರ.
ಪಾರ್ಥನ ಶೌರ್ಯ,
ವಾಯುಪುತ್ರನ ಧೈರ್ಯ.
ಧರ್ಮಜನ ಧರ್ಮ,
ದುರ್ಬುದ್ಧಿಗಳ ಅಧರ್ಮ,
ಸೂತ ಪುತ್ರನ ದಾನ,
ಹಸ್ತಿನಾವತಿಯ ಶಕ ಪುರುಷರ
ಬಲಿದಾನ.|
ಪಟ್ಟಾಭಿಷೇಕ ರಾಜ್ಯಭಾರ
ಮಾಮೂಲಿನಂತೆ
ಅವತಾರ ಅವಸಾನ||

Rating
No votes yet