ಭಾರತೀಯ ಸಂಖ್ಯಾ ಪದ್ದತಿ: ಒಂದು ಪರಿಚಯ

ಭಾರತೀಯ ಸಂಖ್ಯಾ ಪದ್ದತಿ: ಒಂದು ಪರಿಚಯ



    ಬಸವಣ್ಣನವರ ವಚನವೊಂದರಲ್ಲಿ ಬತ್ತೀಸ ರಾಗಗಳ ಬಗ್ಗೆ ಪ್ರಸ್ತಾವನೆ ಬಂದರೆ, ಪುರಂದರ ದಾಸರ ಕೀರ್ತನೆಗಳಲ್ಲಿ ತೆತ್ತೀಸ ಕೋಟಿ ದೇವತೆಗಳ ಬಗ್ಗೆ ಬರುತ್ತದೆ ಮತ್ತು ಕನ್ನಡದ ಮುದ್ರಾಮಂಜೂಷ (ಚಾಣಕ್ಯ ಚಂದ್ರಗುಪ್ತರ ಬಗ್ಗೆ ಇರುವ ಕಥೆ)ಯಲ್ಲಿ ಚಪ್ಪನ್ನಾರು ದೇಶಗಳ ಬಗ್ಗೆ ಬರುತ್ತವೆ. ಇವು ಮೂಲತಃ ಕನ್ನಡದ ಸಂಖ್ಯೆಗಳಲ್ಲದಿದ್ದರೂ ಅವುಗಳ ಉಪಯೋಗ ಕನ್ನಡ ಭಾಷೆಯಲ್ಲಿತ್ತು. ಬತ್ತೀಸ ಎಂದರೆ ಮೂವತ್ತೆರಡು; ತೆತ್ತೀಸ ಅಂದರೆ ಮೂವತ್ತಮೂರು ಮತ್ತು ಚಪ್ಪನ್ ಎಂದರೆ ಐವತ್ತಾರು ಅದೇ ಕನ್ನಡದಲ್ಲಿ ಚಪ್ಪನ್ನಾರು ಆಗಿದೆ. ಇವು ಹಿಂದಿಯಿಂದ ಬಂದು ಕನ್ನಡ ಸಾಹಿತ್ಯದಲ್ಲಿ ಹಾಸುಹೊಕ್ಕಾಗಿರುವ ಒಂದೆರಡು ಉದಾಹರಣೆಗಳು ಮಾತ್ರ. ಆದರೆ ವಾಸ್ತವದಲ್ಲಿ ನಾವು ಬಳಸುವ ಒಂದು, ಎರಡು.... ನೂರು,..... ಸಾವಿರದವರೆಗಿರಿನ ಸಂಖ್ಯೆಗಳು ಮಾತ್ರ ದ್ರಾವಿಡ ಅಥವಾ ಕನ್ನಡದಲ್ಲಿ ಸ್ವತಂತ್ರವಾಗಿ ವ್ಯುತ್ಪತ್ತಿಯಾಗಿರುವುವು. ತದನಂತರ ನಾವು ಉಪಯೋಗಿಸುವ ಲಕ್ಷ, ದಶಲಕ್ಷ, ಕೋಟಿ ಇವೆಲ್ಲೆವೂ ನಾವು ಸಂಸ್ಕೃತದಿಂದ ಎರವಲು ಪಡೆದಂತಹವುಗಳೇ. ದಿನ ನಿತ್ಯದ ತಿಥಿಗಳನ್ನು ತಿಳಿಸಲು ಬಳಸುವ ಪಾಡ್ಯ, ಬಿದಿಗೆ, ತದಿಗೆ, ಅದರ ನಂತರ ನಾವು ಬಳಸುವ ಚೌತಿ, ಪಂಚಮಿ, ಷಷ್ಠಿ (ಆರು), ಸಪ್ತಮಿ ಇವೆಲ್ಲಾ ಸಕ್ಕದ ಅಥವಾ ಅದರಿಂದ ಆವಿರ್ಭವಿಸಿದ ಪದಗಳೇ. ಇನ್ನು ಇಂಗ್ಲೀಷರ ಅಥವಾ ಪಾಶ್ಚಿಮಾತ್ಯರ ಕಲ್ಪನೆಯೂ ತೌಸ್ಯಂಡ್ (ಸಾವಿರವನ್ನು) ದಾಟಲಿಲ್ಲ. ಲಕ್ಷಕ್ಕೆ ಅವರು ಉಪಯೋಗಿಸುವುದು ಲ್ಯಾಕ್ ಎಂದು ಸಂಸ್ಕೃತದ ಪ್ರಭಾವವಿರುವ ಪದವೇ. ಅಥವಾ ಅವರಿಗೆ ಗೊತ್ತಿರುವ ಅಥವಾ ೨೦ನೇ ಶತಮಾನದಲ್ಲಿ ಬಳಕೆಯಲ್ಲಿ ತಂದ ಶಬ್ದಗಳೆಂದರೆ ಮಿಲಿಯನ್ (ದಶಲಕ್ಷ), ಬಿಲಿಯನ್ (ನೂರು ಕೋಟಿ), ಟ್ರಿಲಿಯನ್ (ಸಾವಿರ ಕೋಟಿ?). ಇವನ್ನೆಲ್ಲಾ ಗಣಿತದ ಪರಿಭಾಷೆಯಲ್ಲಿ ಬರೆದರೆ ಮಿಲಿಯನ್=೧ರ ಮುಂದೆ ಆರು ಸೊನ್ನೆಗಳು ಅಥವಾ 106, ಬಿಲಿಯನ್=೧ರ ಮುಂದೆ ಒಂಭತ್ತು ಸೊನ್ನೆಗಳು ಅಥವಾ 109, ಮತ್ತು ಟ್ರಿಲಿಯನ್=೧ರ ಮುಂದೆ ೧೨ ಸೊನ್ನೆಗಳು ಅಥವಾ 1012. ಇಲ್ಲಿಗೆ ಅವರ ಕಲ್ಪನಾ ಶಕ್ತಿ ಮುಗಿದುಹೋಗುತ್ತದೆ. ಆದರೆ ಭಾರತೀಯರ ಸಂಖ್ಯಾ ಜ್ಞಾನ ೧ರ ಮುಂದೆ ೩೪ ಸೊನ್ನೆಗಳ (1034)  ಸಂಖ್ಯೆ ಇತ್ತು ಮತ್ತು ಅವೆಲ್ಲವೂ ದಿನನಿತ್ಯ ಬಳಕೆಯಲ್ಲಿದ್ದವು ಹಾಗೂ ಅವೆಲ್ಲಕ್ಕೂ ಒಂದು ಪ್ರತ್ಯೇಕ ಹೆಸರಿದ್ದವಿದ್ದವು! ಅವರ ಸಂಖ್ಯಾ ಶಾಸ್ತ್ರದ ತಿಳಿವಳಿಕೆ ಮತ್ತು ಉಪಯೋಗ ಎಷ್ಟು ಆಳವಾಗಿತ್ತು ಎಂದು ನಾವು ಊಹಿಸಿಕೊಂಡರೆ ಒಂದು ಕ್ಷಣ ನಮ್ಮ ಪೂರ್ವಿಕರ ಬಗ್ಗೆ ಗೌರವದ ಭಾವನೆ ಮೂಡದೆ ಇರದು. ಅವರು ಉಪಯೋಗಿಸುತ್ತಿದ್ದ ವಿವಿಧ ಸಂಖ್ಯೆಗಳು ಮತ್ತು ಅವುಗಳ ಹೆಸರುಗಳು ಈ ರೀತಿ ಇವೆ.


ಸಹಸ್ರ=೧೦-೩
ದಶಸಹಸ್ರ=೧೦-೪
ಲಕ್ಷ=೧೦-೫
ದಶಲಕ್ಷ=೧೦-೬
ಕೋಟಿ=೧೦-೭
ದಶಕೋಟಿ=೧೦-೮
ಅರ್ಬುದಂ=೧೦-೯
ನ್ಯರ್ಬುದಮ್=೧೦-೧೦
ಖರ್ವಮ್=೧೦-೧೧
ಮಹಾಖರ್ವಮ್=೧೦-೧೨
ಪದ್ಮಮ್=೧೦-೧೩
ಮಹಾಪದ್ಮಮ್=೧೦-೧೪
ಕ್ಷೋಣಿ=೧೦-೧೫
ಮಹಾಕ್ಷೋಣಿ=೧೦-೧೬
ಶಂಖಮ್=೧೦-೧೭
ಮಹಾಶಂಖಮ್=೧೦-೧೮
ಕ್ಷಿತಿ=೧೦-೧೯
ಮಹಾಕ್ಷಿತಿ=೧೦-೨೦
ಕ್ಷೋಭಮ್=೧೦-೨೧
ಮಹಾಕ್ಷೋಭಮ್=೧೦-೨೨
ನಿಧಿ=೧೦-೨೩
ಮಹಾನಿಧಿ=೧೦-೨೪
ಪರ್ವಮ್=೧೦-೨೫
ಮಹಾಪರ್ವಮ್=೧೦-೨೬
ಪರಾರ್ಥಮ್=೧೦-೨೭
ಅನಂತಮ್=೧೦-೨೮
ಸಾಗರಮ್=೧೦-೨೯
ಅವ್ಯಯಮ್=೧೦-೩೦
ಅಚಿಂತ್ಯಮ್=೧೦-೩೧
ಅಮೇಯಮ್=೧೦-೩೨
ಭೂರಿ=೧೦-೩೩
ಮಹಾಭೂರಿ=೧೦-೩೪

ವಿ. ಸೂ: -೩,೪,ಮೊದಲಾದವುಗಳನ್ನು ಟು ದ ಪವರ್ ಆಫ್ ಎಂದು ಓದಿಕೊಳ್ಳಿ. ಏಕೆಂದರೆ ಬರಹ/ಸಂಪದದಲ್ಲಿ ಸೂಪರ‍್ಸ್ಕ್ರಿಪ್ಟ್ ಉಪಯೋಗಿಸುವುದು ಹೇಗೆಂದು ತಿಳಿಯದು.
==============================================================================================

ಗೂಗಲ್ ಎಂದರೆ ಒಂದು ಅಂಕೆಯ ಮುಂದೆ ನೂರು ಸೊನ್ನೆಗಳು ಇರುವ ಒಂದು ಕಾಲ್ಪನಿಕ ಸಂಖ್ಯೆಯೆಂದು ಇತ್ತೀಚೆಗೆ ಗೆಳೆಯನೊಬ್ಬ ಪ್ರಾಸಂಗಿಕವಾಗಿ ಹೇಳಿದ. ಆಗ ನನಗೆ ಹಲವಾರು ವರ್ಷಗಳ ಹಿಂದೆ ತೆಲುಗು ಪತ್ರಿಕೆಯೊಂದರಲ್ಲಿ ಓದಿದ್ದ ಭಾರತೀಯ ಸಂಖ್ಯಾ ಪದ್ದತಿಯ ಬಗ್ಗೆ ಓದಿದ್ದು ಜ್ಞಾಪಕಕ್ಕೆ ಬಂದಿತು. ಅದರ ಬಗ್ಗೆ ಟಿಪ್ಪಣಿ ಮಾಡಿಟ್ಟುಕೊಂಡು ಅದನ್ನು ಯಾವುದೋ ಒಂದು ಪುಸ್ತಕದಲ್ಲಿಟ್ಟು ಮರೆತಿದ್ದೆ. ಇತ್ತೀಚೆಗೆ ನನ್ನ ಕಕ್ಷಿದಾರನೊಬ್ಬನಿಗೆ ಬೇಕಾಗಿದ್ದ ಮಾಹಿತಿಗೋಸ್ಕರವಾಗಿ ಹಲವಾರು ಹಳೆಯ ಪುಸ್ತಕಗಳನ್ನು ಹುಡುಕುತ್ತಿದ್ದವನಿಗೆ ಭಾರತೀಯ ಸಂಖ್ಯೆಗಳ ಬಗ್ಗೆ ಬರೆದಿಟ್ಟುಕೊಂಡಿದ್ದ ಆ ಟಿಪ್ಪಣಿ ಸಿಕ್ಕಿತು. ಅದರ ಆಧಾರದ ಮೇಲೆ ಈ ಲೇಖನವನ್ನು ಬರೆದಿದ್ದೇನೆ.



 

Rating
Average: 5 (1 vote)

Comments