ಭಾರತೀಯ ಹಿಂದೂ ದೇವಸ್ಥಾನ ---- ಕೊಲಂಬಸ್
ಇವತ್ತು ಉಗಾದಿ ಅಂತ ನೆನ್ನೇ ನನ್ನ ಸಂಭಂದಿ ಜೊತೆಗೆ Columbus ನ ದೇವಸ್ಥಾನಕ್ಕೆ ಹೋಗಿದ್ದೆ. ಇಲ್ಲೆಲ್ಲಾ weekend ಹಬ್ಬ ಮತ್ತೆ weekend ದೇವರ ದರ್ಶನ!!
Bharatiya Hindu Temple ಅಂತ ಕಾಣಿಸಿತ್ತು. ಅಭ ಅಂತು ಸಿಕ್ತು ಅಂತ ನೋಡುದ್ರೆ ದೇವಸ್ಥಾನ ನಂಗೆ ಕಾಣಿಸಲೇ ಇಲ್ಲ. ನಮ್ಮೂರು ದೇವಸ್ಥಾನ ನೋಡಿರೋ ನಂಗೆ, ಈ ಗೋಪುರ ಇಲ್ಲದೆ ಇರೋದೇ ದೇವಸ್ಥಾನ ಅಂತ ನಂಗೆ ಹೇಗೆ ಗೊತ್ತಾಗಬೇಕು! ಯಾಕೋ ಬೋಳು ಬೋಳಾಗಿ ಕಾಣಿಸುತ್ತಿತು.
ಒಳಗಡೆ ದೇವಸ್ಥಾನ ಚೆನ್ನಾಗೇ ಇತ್ತು. ಎಲ್ಲ ದೇವರ ದರ್ಶಣಾನು ಮಾಡಬಹುದು. ಇಲ್ಲಿನ ಅರ್ಚಕರು linguist. ಡಾಲರ್ಗಳೇ ಮಂಗಳಾರತಿ ತಟ್ಟೆಗೆ. ನವಗ್ರಹಗಳಿಗೆ ಸೆಂಟುಗಳು....ದೇವ್ರು n ಪೂಜಾರಿ ಇಬ್ರು ಶ್ರಿಮಂತರೆ ಇಲ್ಲಿ.
ಪರ್ವಾಗಿಲ್ಲ ಜನ ಸುಮಾರಗೆ ಇದ್ರು. " ಮಿಕು ತೆಲುಗು cdಳು ಎಕ್ಕಡ ದೊರಕ್ತುಂದಿ", "ಬೋಮ್ಮರಿಲ್ಲು ಚುಸಾರ" ಹೀಗೆ ಹೆಂಗಸರ ಮಾತು. ಕೇಳಿ ನಗು ಬಂತು.
ಎಲ್ಲರಿಗೂ ಒಳ್ಳೇದು ಮಾಡಪ್ಪಾ ಅಂತ ದೇವರಿಗೆ ನಮಸ್ಕಾರ ಹಾಕಿ ಹೊರುಟ್ವಿ. ನಂದು ಕೊಲಂಬಸ್ ತೀರ್ಥ ಯಾತ್ರೆ ಆಯಿತು.
Rating