ಭಾರತ ದೇಶದಲ್ಲಿ ಸಧ್ಯದ ರಾಜಕೀಯ ಪರಿಸ್ಥಿತಿ..
ಚಿತ್ರ
ಭಾರತ ದೇಶದಲ್ಲಿ ಸಧ್ಯದ ರಾಜಕೀಯ ಪರಿಸ್ಥಿತಿಯನ್ನ ಅವಲೋಕಿಸಿದಾಗ
ಶಾಲೆಯಲ್ಲಿ :
========
ಟೀಚರ್ ಮಕ್ಕಳೇ ಈಗ ಸಾಮಾನ್ಯ ಜ್ಞಾನದ ಪ್ರಶ್ನೆ ಸರಿ ಉತ್ತರ ಹೇಳಿದವರಿಗೆ ಬಹುಮಾನ..
ಪ್ರಶ್ನೆ ಏನು ಟೀಚರ್? ಮಕ್ಕಳೆಲ್ಲರ ಒಕ್ಕೊರಲ ಪ್ರಶ್ನೆ...
ಟೀಚರ್: ಮಕ್ಕಳೇ ಒಬ್ಬೊಬ್ಬರಿಗೆ ನಾ ಒಂದು ಪ್ರಶ್ನೆ ಕೇಳುವೆ ,ಅವರು ಉತ್ತರಿಸದಿದ್ದರೆ ಮುಂದಿನವರಿಗೆ ಅವಕಾಶ..
ಸ್ಸರಿ ಟೀಚರ್..
ಪ್ರಶ್ನೆ: ನಮ್ ರಾಜ್ಯದ ಮುಖ್ಯಮಂತ್ರಿ ,
ಮತ್ತು ಇನ್ನಿತರ ಸಚಿವರು ಯಾರು?
ಎಲ್ಲ ಮಕ್ಕಳು ನಾ ತಾ ಎಂದು ಮುಗಿ ಬೀಳಲು ಟೀಚರ್ಗೆ ಅಚ್ಚರಿ ಆಗಿ ಯಾಕೆ ಧಾವಂತ ? ಒಬ್ಬೊಬ್ಬರೇ ಹೇಳಿ ಅನ್ನಲು
ಮಕ್ಕಳೆಲ್ಲ: ಟೀಚರ್ ನಾವ್ ಈಗಲೇ ಅವರ ಹೆಸರು ಹೇಳಬೇಕು , ಇಲ್ಲವಾದರೆ ಅವರ ಜಾಗಕ್ಕೆ ಮತ್ತೊಬ್ಬರು ಬಂದಿರುತ್ತಾರೆ..!!
ಖಾತೆ ಬದಲಾವಣೆ ವರ್ಷಪೂರ್ತಿ ಯಾವಾಗಾದರೂ ನಡೆವ ಕ್ರಿಯೆ.
ಅದ್ಕೆ???
ಟೀಚರ್ ಇನ್ಮೇಲೆ ನಮಗೆ ರಾಜಕೀಯದ ಪ್ರಶ್ನೆಗಳನ್ನೇ ಕೇಳಬೇಡಿ ..
ಟೀಚರ್ ಗಪ್ಚುಪ್....!!
ಸದನದಲ್ಲಿ:
=======
ವಿರೋಧ ಪಕ್ಷದ ನಾಯಕರ ಪ್ರಶ್ನೆಗೆ ಉತರಿಸಲು ತುದಿಗಾಲಲ್ಲಿ ನಿಂತ ಆಡಳಿತ ಪಕ್ಷದ ಸಚಿವರ ಧಾವಂತ ಕಂಡು ವಿರೋಧ ಪಕ್ಷದ ನಾಯಕರು -
ಸಚಿವರೇ
ಈಗಲೇ ಉತ್ತರ ಹೇಳಿ ಇಲ್ಲವಾದರೆ ಸಂಜೆ ಒಳಗಡೆ ನಿಮ್ಮ ಜಾಗದಲ್ಲಿ ಬೇರೆ ಒಬ್ಬರು ಬರಬಹುದು..!!
ತಮಾಷೆ ಅನ್ನಿಸಿದರೂ ಈಗ ಆಗುತ್ತಿರುವುದು ಅದೇನೇ ..!!
ರಾಜಕೀಯ ವ್ಯವಸ್ಥೆ ಅವ್ಯವಸ್ಥೆ ಆಗಿ ಹದಗೆಟ್ತಿದ್ದಕ್ಕೆ ಹಲವು ಉದಾಹರಣೆಗಳು ಕಣ್ಣ ಮುಂದಿವೆ...
ಮತದಾರರು ಮೂಕ ಪ್ರೇಕ್ಷಕರು-ವೀಕ್ಷಕರು...:((
=======================================================
>>>ಈ ಬಗ್ಗೆಯೇ ಹಿಂದೆ ಚಿಕ್ಕು ಬರೆದ ಹಿಂದಿನ/ ಮುಂದಿನ/ ಇಂದಿನ/ ಮುಖ್ಯಮಂತ್ರಿ ಯಾರು?
ಬರಹ ನೆನಪಿಗೆ ಬಂತೆ?
Rating
Comments
ಉತ್ತಮ ನಿದರ್ಶನ. ವಾಸ್ತವದ
ಉತ್ತಮ ನಿದರ್ಶನ. ವಾಸ್ತವದ ಚಿತ್ರಣ ಹಾಸ್ಯಮಯವಾಗಿದೆ. ಶುಭಾಶಯಗಳು.
ಮಮತಾ ಅವ್ರೆ ತಮ್ಮ ಪ್ರತಿಕ್ರಿಯೆಗೆ
ಮಮತಾ ಅವ್ರೆ ತಮ್ಮ ಪ್ರತಿಕ್ರಿಯೆಗೆ ನನ್ನಿ ...
ಶುಭವಾಗಲಿ..
\|