ಭಾರತ ದೇಶದಲ್ಲಿ ಸಧ್ಯದ ರಾಜಕೀಯ ಪರಿಸ್ಥಿತಿ..

ಭಾರತ ದೇಶದಲ್ಲಿ ಸಧ್ಯದ ರಾಜಕೀಯ ಪರಿಸ್ಥಿತಿ..

ಚಿತ್ರ

 

ಭಾರತ ದೇಶದಲ್ಲಿ ಸಧ್ಯದ  ರಾಜಕೀಯ  ಪರಿಸ್ಥಿತಿಯನ್ನ  ಅವಲೋಕಿಸಿದಾಗ 
 
 
 
 
ಶಾಲೆಯಲ್ಲಿ :  
========
 
ಟೀಚರ್  ಮಕ್ಕಳೇ  ಈಗ ಸಾಮಾನ್ಯ ಜ್ಞಾನದ  ಪ್ರಶ್ನೆ  ಸರಿ ಉತ್ತರ ಹೇಳಿದವರಿಗೆ  ಬಹುಮಾನ..
ಪ್ರಶ್ನೆ ಏನು ಟೀಚರ್? ಮಕ್ಕಳೆಲ್ಲರ ಒಕ್ಕೊರಲ  ಪ್ರಶ್ನೆ...
 
ಟೀಚರ್: ಮಕ್ಕಳೇ  ಒಬ್ಬೊಬ್ಬರಿಗೆ  ನಾ ಒಂದು ಪ್ರಶ್ನೆ  ಕೇಳುವೆ ,ಅವರು ಉತ್ತರಿಸದಿದ್ದರೆ  ಮುಂದಿನವರಿಗೆ ಅವಕಾಶ..
ಸ್ಸರಿ  ಟೀಚರ್..
 
ಪ್ರಶ್ನೆ: ನಮ್ ರಾಜ್ಯದ ಮುಖ್ಯಮಂತ್ರಿ ,
ಮತ್ತು ಇನ್ನಿತರ  ಸಚಿವರು ಯಾರು?
 
ಎಲ್ಲ ಮಕ್ಕಳು ನಾ ತಾ ಎಂದು ಮುಗಿ ಬೀಳಲು  ಟೀಚರ್ಗೆ  ಅಚ್ಚರಿ ಆಗಿ  ಯಾಕೆ ಧಾವಂತ ? ಒಬ್ಬೊಬ್ಬರೇ ಹೇಳಿ ಅನ್ನಲು 
ಮಕ್ಕಳೆಲ್ಲ: ಟೀಚರ್  ನಾವ್ ಈಗಲೇ  ಅವರ ಹೆಸರು ಹೇಳಬೇಕು , ಇಲ್ಲವಾದರೆ  ಅವರ ಜಾಗಕ್ಕೆ ಮತ್ತೊಬ್ಬರು  ಬಂದಿರುತ್ತಾರೆ..!!
ಖಾತೆ ಬದಲಾವಣೆ ವರ್ಷಪೂರ್ತಿ  ಯಾವಾಗಾದರೂ ನಡೆವ  ಕ್ರಿಯೆ.
 
ಅದ್ಕೆ???
 
ಟೀಚರ್ ಇನ್ಮೇಲೆ ನಮಗೆ ರಾಜಕೀಯದ ಪ್ರಶ್ನೆಗಳನ್ನೇ  ಕೇಳಬೇಡಿ ..
ಟೀಚರ್ ಗಪ್ಚುಪ್....!!
 
 
 
ಸದನದಲ್ಲಿ: 
=======
ವಿರೋಧ ಪಕ್ಷದ  ನಾಯಕರ ಪ್ರಶ್ನೆಗೆ  ಉತರಿಸಲು ತುದಿಗಾಲಲ್ಲಿ  ನಿಂತ  ಆಡಳಿತ ಪಕ್ಷದ  ಸಚಿವರ  ಧಾವಂತ ಕಂಡು ವಿರೋಧ ಪಕ್ಷದ  ನಾಯಕರು -
ಸಚಿವರೇ 
ಈಗಲೇ ಉತ್ತರ ಹೇಳಿ  ಇಲ್ಲವಾದರೆ  ಸಂಜೆ ಒಳಗಡೆ  ನಿಮ್ಮ ಜಾಗದಲ್ಲಿ ಬೇರೆ ಒಬ್ಬರು  ಬರಬಹುದು..!!
 
ತಮಾಷೆ ಅನ್ನಿಸಿದರೂ  ಈಗ ಆಗುತ್ತಿರುವುದು ಅದೇನೇ ..!!
ರಾಜಕೀಯ ವ್ಯವಸ್ಥೆ  ಅವ್ಯವಸ್ಥೆ ಆಗಿ ಹದಗೆಟ್ತಿದ್ದಕ್ಕೆ  ಹಲವು ಉದಾಹರಣೆಗಳು ಕಣ್ಣ  ಮುಂದಿವೆ...
ಮತದಾರರು  ಮೂಕ ಪ್ರೇಕ್ಷಕರು-ವೀಕ್ಷಕರು...:((
 
=======================================================
 
 
>>>ಈ ಬಗ್ಗೆಯೇ ಹಿಂದೆ  ಚಿಕ್ಕು ಬರೆದ  ಹಿಂದಿನ/ ಮುಂದಿನ/  ಇಂದಿನ/ ಮುಖ್ಯಮಂತ್ರಿ ಯಾರು? 
 ಬರಹ ನೆನಪಿಗೆ ಬಂತೆ?
 
 
 
Rating
No votes yet

Comments