ಭಾರತ ನಿ೦ಗೇನು ಮಾಡ್ತು?

ಭಾರತ ನಿ೦ಗೇನು ಮಾಡ್ತು?

ಜಾನ್ ಎಫ್ ಕೆನಡಿ ನುಡಿದರ೦ತೆ.. "ದೇಶ ನಿಮಗೆ ಏನು ಮಾಡಿದೆ ಎ೦ದು ಕೇಳಬೇಡಿ, ನೀವು ದೇಶಕ್ಕೆ ಎನು ಮಾಡಿದಿರಿ ಎ೦ದು ಕೇಳಿಕೊಳ್ಳಿ". ಸ್ಮಾತ೦ತ್ರಾ ದಿನವಾದ ಇ೦ದು ನಾವೊ ಇದೇ ಪ್ರಶ್ನೆ ಕೇಳಿಕೊಳ್ಳುತ್ತಾ..ನಮ್ಮ ಕರುನಾಡು ದೇಶಕ್ಕೆ, ದೇಶದ ಪ್ರಗತಿಗೆ ಹೇಗೆ ಕಾರಣವಾಗಿದೆ ಎ೦ಬುದನ್ನು ನೆನೆಯೋಣ. ನಮ್ಮಲ್ಲಿ ಸ್ವಾತ೦ತ್ರ ಹೋರಾಟಗಾರರು ಅಷ್ಟಾಗಿರಲಿಲ್ಲಿ ಎ೦ಬ ಟೀಕೆ ನನ್ನ ಸಹೋದ್ಯೋಗಿಗಳಿ೦ದ ಕೇಳಿದ್ದೇನೆ.. ನನ್ನ ನೆನಪಿಗೆ ಬರುವುದು ಮೊರು ಪ್ರಮುಖ ಹೆಸರುಗಳು ಮಾತ್ರ.

ಸ್ವಾತ೦ತ್ರ ಹೋರಾಟಗಾರರು:
1) ಸ೦ಗೊಳ್ಳಿ ರಾಯಣ್ಣ
2) ಕಿತ್ತೂರಿನ ಚೆನ್ನಮ್ಮ ಮತ್ತು
3) ಟಿಪ್ಪು ಸುಲ್ತಾನ್

"ಸಂಗೊಳ್ಳಿ ರಾಯಣ್ಣ ಜನಿಸಿದ ದಿನಾಂಕವಾದ ಆಗಸ್ಟ್ ೧೫, ಭಾರತಕ್ಕೆ ಸ್ವಾತಂತ್ರ್ಯ ದೊರೆತ ದಿನಾಂಕವಾದರೆ, ಆತ ಗಲ್ಲಿಗೇರಿದ ದಿನಾಂಕ ಜನವರಿ ೨೬, ಭಾರತವು ಗಣರಾಜ್ಯವೆಂದು ಘೋಷಿಸಿದ ದಿನಾಂಕವಾಗಿದೆ"

ನನ್ನ ಪ್ರಕಾರ ಸ್ವಾಭಿಮಾನಿಗಳಾದ ಕನ್ನಡಿಗರ ಪ್ರತಿ ಮನೆಯಲ್ಲೊ ಒಬ್ಬ ಹೋರಾಟಗಾರ ಎದ್ದು ನಿ೦ತಿರಲೇಬೇಕು.. ಏನ೦ತೀರ?

Rating
No votes yet

Comments