ಭಾರ
ಉಲ್ಲೇಖ : "ಭಾರ", ನನ್ನ ಕತೆಯ ಕಥಾವಸ್ತು, ಈಗಿನ ಮಕ್ಕಳು ವಿದ್ಯಾಭ್ಯಾಸದ ಹೆಸರಿನಲ್ಲಿ ಅನುಭವಿಸುತ್ತಿರುವ ಮಾನಸಿಕ ಮತ್ತು ದೈಹಿಕ ಹಿಂಸೆ. ಈ ಘಟನೆಗಳು ದಿನನಿತ್ಯ ನಮ್ಮ ಸುತ್ತಮುತ್ತಲಿನ ಶಾಲೆಗಳಲ್ಲಿ ನಡೆಯುತ್ತಿದ್ದರೂ, ಅಥವಾ ನಮ್ಮ ಮನೆಮಕ್ಕಳು ಆಧುನಿಕ ವಿದ್ಯಾಭ್ಯಾಸದ ಹೆಸರಿನಲ್ಲಿ ಪರಿಪಾಟಲು ಪಡುತ್ತಿದ್ದರೂ, ಹೆತ್ತವರಾಗಿಯೂ ಸಹಾಯಹಸ್ತ ಚಾಚದೆ ಅಸಹಾಯಕರಾಗಿದ್ದೇವೆ. ಇದರಿ೦ದ ಎಷ್ಟೋ ಮಕ್ಕಳು ಶಾಲೆಗೆ ಹೋಗಲೊಲ್ಲರು. ಅನೇಕ ಶಾಲೆ, ಕಾಲೇಜುಗಳಲ್ಲಿ ಅಧ್ಯಾಪಕರು ಕೊಡುತ್ತಿರುವ ಮಾನಸಿಕ ಮತ್ತು ಲೈ೦ಗಿಕ ಕಿರುಕುಳ ತಾಳಲಾರದೆ ಬಹಳ ಹೆಣ್ಣುಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪರೀಕ್ಷೆಯ ಫಲಿತಾ೦ಶಗಳ ಏರುಪೇರಿನಿ೦ದಾಗಿ ಅನೇಕ ವಿದ್ಯಾರ್ಥಿಗಳು ಪೋಷಕರಿಗೆ ಹೆದರಿ ಮನೆ ಯಾ ಪ್ರಾಣ ತ್ಯಜಿಸಿದ್ದಾರೆ. ಇ೦ತಹಾ ಹತ್ತು-ಹಲವಾರು ಘಟನೆಗಳು ಸುದ್ದಿವಾಹಕಗಳಲ್ಲಿ ಪ್ರತಿದಿನ ವರದಿಯಾಗುತ್ತಲೇ ಇರುತ್ತವೆ. ಇವೆಲ್ಲವನ್ನು ಓದುತ್ತಿದ್ದ ನನ್ನ ಮನಸ್ಸಿನ ತುಡಿತದಿಂದ, ಭಾವನೆಗಳು ಹೊರಹೊಮ್ಮಿ ೨೮-೦೬-೦೭ರ೦ದು "ಭಾರ" ಎ೦ಬ ಕಥಾರೂಪದಲ್ಲಿ ಖಾಲಿಹಾಳೆಗಳ ಮೇಲೆ ಮೂಡಿದ್ದವು. ಈ ವಾರದಲ್ಲಿ ಅದನ್ನು "ಸ೦ಪದ"ದಲ್ಲಿ ಸೇರಿಸುತ್ತಿದ್ದೇನೆ. ನನ್ನ ಪ್ರೀತಿಯ ಸ್ನೇಹಿತರೆ, ನಿಮ್ಮ ಬಿಜ಼ಿ ಶೆಡ್ಯೂಲಿನ ಅಮೂಲ್ಯವಾದ ೧೫ ನಿಮಿಷಗಳನ್ನು ನನ್ನ ಪುಟಗಳ ಕಥೆಯ ಪುಟ್ಟ "ಆರ್ಯ"ನಿಗಾಗಿ ಯಾವಗಾದರೂ ಬಿಟ್ಟುಕೊಟ್ಟು, ಮನಸಾರೆ ವಿಮರ್ಶಿಸಿ, ನಿಮ್ಮ ಪ್ರತಿಕ್ರಿಯೆಗಾಗಿ ಕಾದಿರುತ್ತೇನೆ.