ಭಾವಗೀತೆಯ ಮೆಲುಕು - ಎಲ್ಲಿಜಾರಿತೋ ಮನವು....
ಅದೇಕೊ ಇಂದು ಸಂಜೆ ಬರೀ ಭಾವಗೀತೆಯನ್ನು ಓದುತ್ತ ಮನಪರವಾಶವಾಯಿತು, ಲಕ್ಷ್ಮೀನಾರಯಣ ಭಟ್ಟರ ಎಲ್ಲಿಜಾರಿತೂ ಮನವೂ.... ಹಾಗೆ
ಅಡಿಗರ ಅಮೃತವಾಹಿನಿಯೊಂದು..... ಓದುತ್ತ ಇರುವಂತೆ, ಒಬ್ಬರೂ ಕೃಷ್ಣಪ್ರಸಾದ್ ಎನ್ನುವವರು ಯೂ-ಟುಭ್ ನ ಲಿಂಕ್ ಒಂದನ್ನು ಕಳಿಸಿದರು,
ನಾನೊಬ್ಬನೆ ಖುಷಿಪಟ್ಟರೆ ಹೇಗೆ ನೀವೂ ಆ ಲಹರಿಯನ್ನು ಸವಿಯಿರಿ
ಎಲ್ಲಿ ಜಾರಿತೋ ಮನವು...
ಎಲ್ಲಿ ಜಾರಿತೋ ಮನವು ಎಲ್ಲೇ ಮೀರಿತೋ,
ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ.
ದೂರದೊಂದು ತೀರದಿಂದ
ತೇಲಿ ಪಾರಿಜಾತ ಗಂಧ
ದಾಟಿ ಬಂದು ಬೇಲಿಸಾಲ
ಪ್ರೀತಿ ಹಳೆಯ ಮಧುರ ನೋವ
ಎಲ್ಲಿ ಜಾರಿತೋ...
ಬಾನಿನಲ್ಲಿ ಒಂಟಿ ತಾರೆ
ಸೋನೆ ಸುರಿವ ಇರುಳ ಮೊರೆ
ಕತ್ತಲಲ್ಲಿ ಕುಳಿತು ಒಳಗೆ
ಬಿಕ್ಕುತಿಹಳು ಯಾರೋ ನೀರೆ
ಎಲ್ಲಿ ಜಾರಿತೋ...
ಹಿಂದೆ ಯಾವ ಜನ್ಮದಲ್ಲೋ
ಮಿಂದ ಪ್ರೇಮ ಜಲದ ಕಂಪು
ಬಂದು ಚೀರುವೆದೆಯ ಭಾವ
ಹೇಳಲಾರೆ ತಾಳಲಾರೆ
ಎಲ್ಲಿ ಜಾರಿತೋ...
ಎಲ್ಲಿ ಜಾರಿತೋ ಮನವು ಎಲ್ಲೇ ಮೀರಿತೋ,
ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ.
ಎಲ್ಲಿ ಜಾರಿತೋ, ಎಲ್ಲೇ ಮೀರಿತೋ, ಇಲ್ಲದಾಯಿತೋ...
- ಎನ್. ಎಸ್. ಲಕ್ಷ್ಮಿನಾರಾಯಣ ಭಟ್ಟ
ಈ ಲಿಂಕ್ ನಲ್ಲಿ ಇದೇ ಹಾಡನ್ನು ಕೇಳಿ ಅನಂದಿಸಿರಿ
http://www.youtube.com/watch?v=9Kh52K0ghbY&app=desktop
Comments
ಉ: ಭಾವಗೀತೆಯ ಮೆಲುಕು - ಎಲ್ಲಿಜಾರಿತೋ ಮನವು....
ಪಾರ್ಥ ಸಾರಥಿ ಯವರಿಗೆ ವಂದನೆಗಳು
'ಎಲ್ಲಿ ಜಾರಿತೋ ಮನವು' ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರ ಎವರ್ ಗ್ರೀನ್ ಸಾಂಗ್ ಜೊತೆಗೆ ನನ್ನ ಮೆಚ್ಚಿನ ಗೀತೆ ಕೂಡ. ಎನ್.ಎಸ್. ಮನತಟ್ಟುವ ರೀತಿಯಲ್ಲಿ ಹೃದಯಕ್ಕೆ ಮನದ ಸೂಕ್ಷ್ಮ ಭಾವಗಳನ್ನು ತಟ್ಟಿ ಬಿಡುತ್ತಾರೆ. ಈ ಹಾಡಿನ ಸಾಹಿತ್ಯ ಸುಂದರ ರಾಗ ಸಂಯೋಜನೆ ಎಷ್ಟು ಸಲ ಕೇಳಿದರೂ ಬೇಸರವಾಗದ ಗೀತೆ. ಈ ಸಲದ ಶಿವಮೊಗ್ಗದಲ್ಲಿ ಮಾರ್ಚ 8 ಮತ್ತು 9 ರಂದು ನಡೆಯಲಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ, ಹೋಗಿ ಬರಬೇಕು ಎಂಬ ಆಶೆ ಬಲವಾಗಿದೆ.ಕನ್ನಡವಷ್ಟೆ ಅಲ್ಲ ಜಗದ ಸಾಹಿತ್ಯದ ಬಗೆಗಿರುವ ಅವರ ಜ್ಞಾನ ಅಪಾರ, ಸಾಹಿತ್ಯ ಕುರಿತಂತೆ ಅವರು ಮಾಡುವ ಭಾಷಣ ಕೇಳುವುದೇ ಒಂದು ಸಾಹಿತ್ಯದ ರಸದೌತಣ. ಇದೊಂದು ಸಕಾಲಿಕ ಬರಹ, ಅದರಲ್ಲೂ ಶಿವಮೊಗ್ಗ ಜಿಲ್ಲೆಯವರಿಗೆ,+ ಧನ್ಯವಾದಗಳು.
ಉ: ಭಾವಗೀತೆಯ ಮೆಲುಕು - ಎಲ್ಲಿಜಾರಿತೋ ಮನವು....
ಪಾರ್ಥರೆ,
ಮೊನ್ನೆ ಸಂಪದ ತೆರೆದಾಗ ಮೊದಲಿಗೆ ನಿಮ್ಮ ಈ ಸಲಹೆ ನೋಡಿದೆ. ಹಾಗೇ ಒಂದರ ನಂತರ ಒಂದು ಭಾವಗೀತೆಯಲ್ಲಿ ಮುಳುಗಿಹೋದೆ..
In reply to ಉ: ಭಾವಗೀತೆಯ ಮೆಲುಕು - ಎಲ್ಲಿಜಾರಿತೋ ಮನವು.... by ಗಣೇಶ
ಉ: ಭಾವಗೀತೆಯ ಮೆಲುಕು - ಎಲ್ಲಿಜಾರಿತೋ ಮನವು....
ಪಾಟೀಲರಿಗೆ ಹಾಗು ಗಣೇಶರಿಗೆ ವಂದನೆಗಳೂ
ಭಾವಗೀತೆಗಳ ಪ್ರಭಾವವೇ ಹಾಗೆ!
ಭಾವಗೀತೆಗಳನ್ನು ಇಲ್ಲೊಬ್ಬರು ಸಂಗ್ರಹಿಸಿದ್ದಾರೆ ನೋಡಿ ...ಕನ್ನಡಭಾವಗೀತೆಗಳು
ಉ: ಭಾವಗೀತೆಯ ಮೆಲುಕು - ಎಲ್ಲಿಜಾರಿತೋ ಮನವು....
ಭಾವಪ್ರಧಾನ ಗೀತೆಗಳೇ ಹಾಗೆ!