ಭಾವಗೀತೆ

ಭಾವಗೀತೆ

ಈ ಸ೦ಜೆ ಕೆಲಸದಿ೦ದ ಮನೆಗೆ ಬ೦ದು ದಿನನಿತ್ಯ ಹೋಗೋ ಹಾಗೆ ವ್ಯಾಯಮ (ಜಿಮ್) ಮಾಡಲು ಹೋಗಿ ನನ್ನ ಐಪಾಡ್ ಆನ್ ಮಾಡಿದಾಗ ಭಾವಗೀತೆಗಳ ಒ೦ದು ಫ಼ೋಲ್ಡರ್ ಕಾಣಿಸಿತು. ಸರಿ ಭಾವಗೀತೆ ಕೇಳಿ ಸುಮಾರು ದಿನ ಆಗಿದೆ ಕೇಳೋಣ ಅ೦ತ ಹಾಕಿದಾಗ ಜಿ ಎಸ್ ಶಿವರುದ್ರಪ್ಪನವರು ಬರೆದು ಸಿ.ಅಶ್ವಥ್ ರವರು ಹಾಡಿರುವ ಈ ಒ೦ದು ಸುಮಧುರ ಗಾನ ನನ್ನ ಮನ್ನಸೆಳೆಯಿತು. ಎಷ್ಟು ಅದ್ಭುತವಾದ ಅರ್ಥಗರ್ಭಿತವಾದ ರಚನೆ ಜಿ ಎಸ್ ಶಿವರುದ್ರಪ್ಪನವರರದು ಮತ್ತು ಅಷ್ಟೆ ಇ೦ಪಾದ ಹಿನ್ನಲೆ ಸ೦ಗೀತ ಹಾಗೂ ಗಾಯನ ಅಶ್ವಥ್ ಅವರದು.

ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೆ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ
ಎಲ್ಲಿದೆ ನ೦ದನ ಎಲ್ಲಿದೆ ಬ೦ಧನ ಎಲ್ಲಾ ಇವೇ ಈ ನಮ್ಮೊಳಗೆ
ಒಳಗಿನ ತಿಳಿಯನು ಕಲಕದೆ ಇದ್ದರೆ ಅಮ್ರತದ ಸವಿಯಿದೆ ನಾಲಗೆಗೆ
ಹತ್ತಿರವಿದ್ದು ದೂರ ನಿಲ್ಲುವೆವು ನಮ್ಮ ಅಹ್ಮಿ೦ನ ಕೋಟೆಯಲಿ
ಎಷ್ಟು ಕಷ್ಟವೋ ಹೊ೦ದಿಕೆ ಎ೦ಬುದು ನಾಲ್ಕು ದಿನದ ಈ ಬದುಕಿನಲಿ

ಅವಕಾಶ ಸಿಕ್ಕಿದರೆ ಅಶ್ವಥ್ ಅವರು ಹಾಡಿರುವ ಈ ಹಾಡನ್ನ ಕೇಳಿ.
~ಮಾಸ

Rating
Average: 5 (1 vote)

Comments