ಭಾವನಾ, ಹಂಗಾಮ, ಜಯಂತ್ ಇತ್ಯಾದಿ
ಅವಧಿಯಲ್ಲಿ(avadhi.wordpress.com) ಹಂಗಾಮ ಎನ್ನುವ ಪತ್ರಿಕೆಯ ಬಗ್ಗೆ, ಅದು ನಿಂತು ಹೋದುದರ ಬಗ್ಗೆ ಆಗಾಗ್ಗೆ ಪ್ರಸ್ತಾಪ ಆಗುತ್ತಿರುತ್ತದೆ. ಭಾವನಾ ಬರುತ್ತಿದ್ದ ಕಾಲದಲ್ಲಿ ಅದರ ಬಗ್ಗೆ ಮತ್ತೆ ಮತ್ತೆ ಚರ್ಚಿಸುತ್ತಿದ್ದ ನನಗೆ, ನನ್ನ ರಾಜಣ್ಣ ಮಾವನಿಗೆ ಮತ್ತು ನಮ್ಮಂತಹ ಸಾವಿರಾರು ಭಾವನಾಭಿಮಾನಿಗಳಿಗೆ ಹೀಗೆಯೇ ನೀರಿನಿಂದ ತೆಗೆದ ಮೀನಿನಂತೆ ಆಗಿತ್ತು. ಮತ್ತೆ ಮತ್ತೆ ಪುಸ್ತಕದಂಗಡಿಗಳಲ್ಲಿ ಕೇಳುತ್ತಿದ್ದೆವು ಭಾವನಾದ ಬಗ್ಗೆ. ಕೊನೆಗೊಮ್ಮೆ ನಿರಾಶೆ ಹೆಚ್ಚಿ ಹುಬ್ಬಳ್ಳಿಯಲ್ಲಿ ಭಾವನಾದ ಕಛೇರಿಗೆ ಫೋನ್ ಮಾಡಿ, ಕಾಯ್ಕಿಣಿಯವರಿಗಾಗಿ ವಿಚಾರಿಸಿದೆವು. ಅವರು ಈಗ ಅಲ್ಲಿರುವುದಿಲ್ಲ ಎಂದು ತಿಳಿದು ಬಂದ ಮೇಲೆ ಸುಮ್ಮನಾದೆವು. ಆಮೇಲೆ ಕೆಲಸಕ್ಕೆ ಸೇರಿದ ಮೇಲೆ ನಾನೊಮ್ಮೆ ಕಾಯ್ಕಿಣಿಯವರಿಗೆ ಮೈಲ್ ಮಾಡಿ, ಭಾವನಾ ನಿಂತದ್ದೇಕೆ, ಓದುಗರ ಕೊರತೆಯಿಂದಲೋ, ಮ್ಯಾನೇಜ್ ಮೆಂಟ್ ಪ್ರೋತ್ಸಾಹವಿಲ್ಲದೆಯೋ ಎಂದು ವಿಚಾರಿಸಿದೆ. ಕಾಯ್ಕಿಣಿಯವರು ಉತ್ತರಿಸಿ ಓದುಗರ ಕೊರತೆ ಭಾವನಾಕ್ಕೆ ಇರಲೇ ಇಲ್ಲ ಎಂದು ಸ್ಪಷ್ಟಪಡಿಸಿದರು.. ನನ್ನಲ್ಲಿ ಇದೆ ಆ ಮೈಲ್ ಬಹುಶ:..
ಭಾವನಾ ಅದ್ಭುತವಾಗಿತ್ತು. ಸುಮಂಗಲಾ ಬಾದರದಿನ್ನಿ, ರೇಖಾ ಕುಂದಾರು ಮುಂತಾದವರೆಲ್ಲ ಅದರಲ್ಲಿ ಚೆನ್ನಾದ ಕಥೆಗಳನ್ನು ಬರೆಯುತ್ತಿದ್ದರು. ನನ್ನಲ್ಲಿ ಭಾವನಾದ ಹೆಚ್ಚಿನ ಎಲ್ಲ ಪ್ರತಿಗಳೂ ಇವೆ. ಈಗಲೂ ಅದರ ಕೆಲವು ಕತೆಗಳನ್ನು ಓದುತ್ತಿರುತ್ತೇನೆ..
ವಸಂತ್ ಕಜೆ
Comments
ಉ: ಭಾವನಾ, ಹಂಗಾಮ, ಜಯಂತ್ ಇತ್ಯಾದಿ
ಉ: ಭಾವನಾ, ಹಂಗಾಮ, ಜಯಂತ್ ಇತ್ಯಾದಿ
In reply to ಉ: ಭಾವನಾ, ಹಂಗಾಮ, ಜಯಂತ್ ಇತ್ಯಾದಿ by jaiguruji
ಉ: ಭಾವನಾ, ಹಂಗಾಮ, ಜಯಂತ್ ಇತ್ಯಾದಿ
In reply to ಉ: ಭಾವನಾ, ಹಂಗಾಮ, ಜಯಂತ್ ಇತ್ಯಾದಿ by Vasanth Kaje
ಉ: ಭಾವನಾ, ಹಂಗಾಮ, ಜಯಂತ್ ಇತ್ಯಾದಿ
In reply to ಉ: ಭಾವನಾ, ಹಂಗಾಮ, ಜಯಂತ್ ಇತ್ಯಾದಿ by jaiguruji
ಉ: ಭಾವನಾ, ಹಂಗಾಮ, ಜಯಂತ್ ಇತ್ಯಾದಿ