"ಭಾವನೆಗಳು ಮಾತನಾಡುತ್ತಿವೆ...... "

"ಭಾವನೆಗಳು ಮಾತನಾಡುತ್ತಿವೆ...... "

ಚಿತ್ರ

ಭಾವನೆಗಳು ಮಾತನಾಡುತ್ತಿವೆ....

 

 

    ಪ್ರೀತಿಯ ಅಣ್ಣಾ.. ಹೇಗಿದ್ದಿಯಾ? ಆರಾಮಾ? ನೀನ್ ಯಾವತ್ತಿದ್ರೂ ಖುಷಿ ಖುಷಿಯಾಗೇ  ಇರಬೇಕು.... ಅದೇ ನಿನ್ ಈ ತಂಗಿ ಆಸೆ ಕಣೋ... ನಿನ್ ಹತ್ರ ತುಂಬಾ ಮಾತ್ನಾಡೋಕಿದೆ.....  ಆದ್ರೆ ಎಲ್ಲಿಂದ ಶುರು ಮಾಡ್ಬೇಕುಂತಾನೆ  ಗೊತ್ತಾಗ್ತಿಲ್ಲ... ನಾವಿಬ್ರೂ ಒಂದೇ ತಾಯಿ ಮಕ್ಳಾಗ್ ಹುಟ್ಟಿಲ್ಲ... ಸಂಬಂಧದಲ್ಲಿ ನೀನ್ ನಂಗೆ ಸೋದರ ಅತ್ತೆ ಮಗ ....  ಆದ್ರೆ ನಮ್ ಮಧ್ಯೆ ಇರೋ ವಾತ್ಸಲ್ಯ ಒಂದೇ ತಾಯಿ ಮಕ್ಕಳ ಸಂಬಂಧಕ್ಕಿಂತ powerful ..... ವರ್ಷಕ್ ಒಂದ್ಸಲಾನೋ ಎರಡ್ಸಲನೋ  ನಾವು ಯಾವುದಾದ್ರೂ family  functionಲ್ಲಿ ಮೀಟ್ ಆಗ್ತೀವಿ. ಆಗ ಕೂತ್ಕೊಂಡು ಸಿಕ್ಕಾಪಟ್ಟೆ ಹರಟ್ತೀವಿ... ಬೇರೆ ಟೈಮಲ್ಲಿ phone calls, e-mails, messages ಇದ್ದೇ ಇರುತ್ತೆ.

 

     ಅಣ್ಣಾ.. ನಾವು ಒಟ್ಗೆ ಕೂತ್ಕೊಂಡು ಹರಟೋದಕ್ಕೆ ನಮ್ ಸಂಬಧಿಕರು ಬಾಯಿಗ್  ಬಂದಹಾಗ್  ಆಡ್ಕೊತಾರೆ... ಅದೆಲ್ಲ ನಿಂಗೂ ಗೊತ್ತಿದೆ ಅಂದ್ಕೊತೀನಿ. ಆವಾಗೆಲ್ಲ ಕರುಳು ಕಿತ್ತು ಕೈಯಲ್ಲಿಕೊಟ್ಟಷ್ಟು  ನೋವಾಗುತ್ತೆ. ನಮ್ ಮಧ್ಯೆ ಇರೋ ವಾತ್ಸಲ್ಯ ಈ ಸಮಾಜಕ್ಕೆ ಅರ್ಥ ಅಗೋಲ್ಲ ಅಣ್ಣಾ.. ಅದನ್ನೆಲ್ಲ ಕಂಡಾಗ ನಂಗೆ ವಿಪರೀತ ಸಿಟ್ಟು ಬರುತ್ತೆ.. ಎಲುಬಿಲ್ಲದ ನಾಲಿಗೆ ಬೇಕಾಬಿಟ್ಟಿ ತಿರುಗೋದನ್ ಕಂಡಾಗ ನಿನ್ ಕೈ ಗಟ್ಟಿಯಾಗ್ ಹಿಡ್ಕೊಂಡು "ಇವನ್  ನನ್ ಸ್ವಂತ ಅಣ್ಣ ಅಲ್ದೇಇರ್ಬಹುದು... ಸ್ವಂತ  ಅಣ್ಣಂದ್ರು ನಂಗೂ ಇಲ್ಲ.. ನಿಮಗೆ ಕಾಮಾಲೆ ಕಣ್ಣಿದ್ರೆ ಜಗತ್ತೇ ಹಳದಿಯಾಗ್ ಕಾಣುತ್ತೆ... ಅದು ನಿಮ್ ಸಮಸ್ಯೆ ... ಅದಕ್ಕೋಸ್ಕರ ನಮ್ ಭಾವನೆಗಳನ್ನ ಬಲಿಪಶು ಮಾಡೋ ಪ್ರಯತ್ನ ಮಾಡ್ಬೇಡಿ.. "  ಅಂತ ಕಿರುಚಾಡ್ಬೇಕು ಅನ್ಸುತ್ತೆ.. ಆದ್ರೆ ಅಷ್ಟೊಂದು ಒರಟಾಗ್ behave ಮಾಡೋದ್ ನಿಂಗೆ ಇಷ್ಟ ಆಗೋಲ್ಲ ಅಂತ ಗೊತ್ತು ಅಣ್ಣಾ... ನಮ್ ಭಾವನೆಗಳನ್ನ ಈ ಸಮಾಜ ಅರ್ಥ ಮಾಡ್ಕೊಳಲ್ಲ... ಆದ್ರೆ ನಿನ್ ಮಾತಿಗ್ ನಾನ್ ಯಾವತ್ತಿದ್ರೂ ಬೆಲೆ ಕೊಡ್ತೀನಿ... ನಿನ್ ಪ್ರೀತಿ ಮುಂದೆ ನಾನ್ ಯಾವತ್ತಿದ್ರೂ ತಲೆ ತಗ್ಗಿಸ್ತೀನಿ ...

 

    ನಮ್ ಭಾವನೆಗಳನ್ನ ಈ  ಸಮಾಜಕ್ explain  ಮಾಡೋ ಅಗತ್ಯ ಇಲ್ಲ ಅಣ್ಣಾ.. ಯಾರೋ ಏನೋ ಹೇಳ್ತಾರೆ ಅಂತ ನಾವ್ ಬದಲಾಗೊಲ್ಲ.. ಯಾಕಂದ್ರೆ ನಮ್ ಮಧ್ಯೆ ಇರೋ ವಾತ್ಸಲ್ಲ್ಯ ನಮ್ ಕರುಳಲ್ಲೇ ಬೆರೆತುಹೋಗಿದೆ ಅಣ್ಣಾ.. ಅದನ್ನ ಅಳಿಸೋ ಪ್ರಯತ್ನ ಮಾಡಿದ್ರೆ  ನಾವಿಬ್ರೂ ಸತ್ತೇ ಹೋಗ್ತೀವಿ ಅಣ್ಣಾ... ನಮ್ಮಿಬ್ರ ಭಾವನೆಗಳನ್ನ ಯಾರ್ ಅರ್ಥ ಮಾಡ್ಕೊಳ್ದೇ ಇದ್ರೂ ಪರ್ವಾಗಿಲ್ಲ.. ನಮ್ ಹೆತ್ತವರಿಗೂ, ನಮ್ಮಿಬ್ರ life partners ಗೆ ಅದ್ ಅರ್ಥ ಆದ್ರೆ ಸಾಕು ಅಲ್ವಾ ಅಣ್ಣಾ...

 

  ಈ ಪತ್ರ ಎಲ್ಲಿ ಶುರು ಆಗಿ ಎಲ್ಲಿ ಕೊನೆ ಆಗುತ್ತೆ ಅನ್ನೋದು ನಂಗೇ ಗೊತ್ತಿಲ್ಲ... ಯಾಕಂದ್ರೆ ನಿನ್ ಜೊತೆ ನಾನ್ ಮಾತ್ನಾಡೋ ಧಾಟಿನೆ ಹಾಗೆ... ನಿನ್ ಪ್ರೀತಿ ವಾತ್ಸಲ್ಯ ಕಾಳಜೀನ ನಾನ್ ಈ ಪತ್ರದಲ್ ಹೇಗಣ್ಣ ತುಂಬಿಸ್ಲಿ..? ಎಷ್ಟು ಬರೆದ್ರೂ ಕಡ್ಮೆ ಅನ್ಸುತ್ತೆ ನಂಗೆ... ವಿಶಾಲವಾಗಿರೋ ಆಳವಾಗಿರೋ ಸಮುದ್ರದ ನೀರನ್ನ ಕೊಡದಲ್ ತುಂಬ್ಸೋಕಾಗುತ್ತ ಹೇಳು ... ತಾಯಿ ಪ್ರೀತಿ ಹಾಗೆ.... ಅದಕ್ಕೇ ನಿನ್ನನ್ನು second mother ಅಂತ ಕರೀತಿದ್ದದ್ದು.. ಆದ್ರೆ ನಿಂಗೆ ನಾನ್ ಹಾಗ್ ಕರಿಯೋದು ಇಷ್ಟ ಆಗೋಲ್ಲ ಅಲ್ವಾ  ಅಣ್ಣಾ.. ಕಾರಣ ನನಗ್ ಗೊತ್ತು.. ನಿನಗ್ publicity ಇಷ್ಟ ಇಲ್ಲ... ಎಲೆ ಮರೆ ಕಾಯಿ ಹಾಗ್ ಬದ್ಕೋಕ್  ಇಷ್ಟ ಪಡ್ತೀಯ...

ನೀನ್ ಅಪರಂಜಿ ಕಣೋ ಅಣ್ಣಾ.... ಅಪ್ಪಟ ಚಿನ್ನ ನೀನು... ಆ ದೇವ್ರು ನಂಗೆ ಕೊಟ್ಟಿರೋ precious gift ಅಂದ್ರೆ ನೀನೇ... ದೇವ್ರು ಬಂದು ನಿನ್ ಬದ್ಲಿಗೆ ಕೋಟಿ ಕೊಡ್ತೀನಿ ಅಂದ್ರೂ ನಂಗೆ ಬೇಡ.. ನಂಗೆ ನನ್ ಅಣ್ಣ ಬೇಕು....  ಅಷ್ಟೇ...

 

   ಅಣ್ಣಾ... ನಾವು ಒಂದೇ ಮನೇಲಿ ಒಟ್ಗೆ ಬದ್ಕೋದ್  ಸಾಧ್ಯ ಇಲ್ಲ.. ಈಗ ನಾನ್ ಓದ್ತಾ ಇದೀನಿ.. ನೀನ್ ಕೆಲಸ ಮಾಡ್ತಿದೀಯ.. ಮುಂದೆ ನಮ್ಮಿಬ್ರ ಬದುಕೂ ಬದ್ಲಾಗುತ್ತೆ... ಮನೆ ಮಕ್ಳು ಸಂಸಾರದ ಗೋಜೊಳಗ್ ಬಿದ್ದೋಗ್ತೀವಿ... ಆದ್ರೆ ನಾವೆಲ್ಲೇ ಹೋದ್ರೂ ನಮ್ ಭಾವನೆಗಳು, ತಲೆಹರಟೆ, ಕಿತ್ತಾಟ, ಪ್ರೀತಿ, ವಾತ್ಸಲ್ಯ ಕೊನೆತನಕ ಹೀಗೆ ಇರುತ್ತೆ ಅಣ್ಣಾ....

 

   ಅಣ್ಣಾ... ನಿನಗ್ ನೆನಪಿದೆಯಾ? ನಾನ್ ಚಿಕ್ಕೊಳಾಗಿದ್ದಾಗ ನೀನು ನನ್ನ ತುಂಬಾ ಮುದ್ದು ಮಾಡ್ತಿದ್ದೆ.. ಈಗ್ಲೂ ಹಾಗೆ ಪ್ರೀತಿ ಮಾಡ್ತಿದೀಯ.. ನನ್ನ ಬೇರೆ ಅಣ್ಣಂದ್ರು ನಿನ್ ಹಾಗ್ ನನ್ನ ಅರ್ಥ ಮಾಡ್ಕೊಂಡಿಲ್ಲ.. ನನ್ನನ್ನ ಸಣ್ಣ ಪುಟ್ಟ ವಿಷಯ ಇಟ್ಕೊಂಡು  ಚಾಳಿಸ್ತಾಇದ್ದೆ.. ಆವಾಗೆಲ್ಲ ನಿನ್ ಜೊತೆ ಕೋಪ ಮಾಡ್ಕೊಂಡು ಕೂತ್ಕೊತಿದ್ದೆ .. ಆದ್ರೆ ಆ ಕೋಪ ೨ ನಿಮಿಷ ಮಾತ್ರ.. ಮರುಕ್ಷಣ "ಅಣ್ಣಾ ..... " ಅಂದ್ ಕೂಡ್ಲೇ ನನ್ ಹತ್ರ ಬಂದು ತಲೆ ಸವರಿ "ಏನ್ ಹೇಳಮ್ಮಾ .... " ಅಂತಿದ್ದೆ...  ನಿನ್ ಕಣ್ಣಲ್ಲಿ ನಾನ್ ಪ್ರತಿ ಕ್ಷಣ ಕಂಡಿದ್ದು ವಾತ್ಸಲ್ಯ.. ವಾತ್ಸಲ್ಯಕ್ ಇನ್ನೊಂದು ಹೆಸ್ರೇ ನೀನು ಕಣೋ ಅಣ್ಣಾ....

 

   ಅಣ್ಣಾ... ಕೆಲವೊಮ್ಮೆ ಕಾರಣಾನೇ ಇಲ್ದೆ ನಿನ್ ಜೊತೆ ಕಾಲ್ಕೆರೆದು ಜಗಳ ಆಡ್ತೀನಿ.. ಆದ್ರೆ ಅದಕ್ಕೆಲ್ಲ ನೀನ್ ನನ್ ಮೇಲೆ  ಸಿಟ್ ಮಾಡ್ಕೊಂಡ ದ್ದಿಲ್ಲ... ಯಾವತ್ತೂ ನನ್ ಜೊತೆ ನಗ್ ನಗ್ತಾ ಇರ್ತೀಯ..  ನಾನ್ ಅತ್ರೆ ಕಣ್ಣೀರನ್ನ ನಗು ಕಡೆ ತಿರ್ಗಿಸ್ತೀಯ.. ನಿನ್ ಮನಸ್ಸಲ್ಲಿ ಅದೆಷ್ಟೇ ನೋವಿದ್ರೂ ಎಲ್ಲಾ ಮುಚ್ಚಿಟ್ಟು  ನನ್ problems ನಲ್ಲಿ share ತಗೋತ ಇರ್ತೀಯ... ಅಲ್ವಾ ಅಣ್ಣಾ... ಹಂದಿ ಕಣೋ ನೀನು... ಅದೇ ನಂಗೆ ಆಗ್ಬರೋಲ್ಲ... ನಾನ್ ನಿನ್ ತಂಗಿ ಅಂದ್ಮೇಲೆ ನಿನ್ ಕಣ್ಣೀರಲ್ಲಿ ಪಾಲು ತಗೊಳ್ಳೋ ಅಧಿಕಾರ ನಂಗೂ ಇದೆ... ಬದುಕಲ್ಲಿ ಏನೇ ಸಮಸ್ಯೆ ಬಂದ್ರೂ ಇಬ್ರೂ ಒಟ್ಗೆ face ಮಾಡೋಣ.. ನಾನ್ ನಿನ್ ತಂಗಿ ಕಣೋ ಅಣ್ಣಾ... ಒಬ್ನೇ ಕೂತ್ಕೊಂಡು ಯಾವತ್ತೂ feel ಮಾಡ್ಕೋಬೇಡ ಅಣ್ಣಾ..  ನಿನ್ lifeಲ್ಲಿ ನಿಂಗೆ ಮುಂದೆ ಯಾವತ್ತಾದ್ರೂ ವಿಪರೀತ ನೋವಾದ್ರೆ (ಹಾಗಾಗ್ಬಾರ್ದು ಅಂತ ಆಶಿಸ್ತೀನಿ ) ನಿಂಗೆ ಯಾರೂ ಇಲ್ಲ ಅಂತ ಮಾತ್ರ ಯೋಚನೆ ಮಾಡ್ಬೇಡ... ಯಾಕಂದ್ರೆ ನಿನ್ ಈ ತಂಗಿ ನಿನ್ಜೊತೆ ಕೊನೆತನಕ ಇರ್ತಾಳೆ. ನಾವಿಬ್ರೂ ಬದ್ಕೋದೆ ಹೀಗೆ ಅಣ್ಣಾ...  ಎಷ್ಟೇ ದೂರದಲ್ಲಿದ್ರೂ ನಮ್ ಮನಸ್ಸು ಯಾವಾಗ್ಲೂ ಹತ್ರವಾಗೇ ಇರುತ್ತೆ.. ನಾನ್ ನಿನ್ಮುಂದೆ ಯಾವತ್ತಿದ್ರೂ ತುಂಬಾ ಚಿಕ್ಕೊಳಾಗಿರೋಕೆ ಆಸೆಪಡ್ತೀನಿ.. ಹಾಗೇ ಇರ್ತೀನಿ ಕೂಡಾ ಅಣ್ಣಾ....

 

   ಅಣ್ಣಾ ನಿನಗ್ ನೆನಪಿದೆಯಾ? ಕೆಲವರುಷಗಳ ಹಿಂದೆ ನಮ್ family problemsನಿಂದಾಗಿ ನೀನ್ ನನ್ನಿಂದ ೪-೫ ವರುಷ ದೂರ ಇದ್ದೆ.. ನಾನು 8th standardಲ್ಲಿ ಇದ್ದಾಗ ನಮ್ family ಮಧ್ಯೆ misunderstanding ಬಂದಿತ್ತು. ಆವತ್ತು ನೀನು ನನ್ ತಲೆ ಸವರಿ ಮನೆ ಮೆಟ್ಟಿಲಿಳಿದು ಹೋಗಿದ್ದೆ.. ಕೊರಳ ಸೆರೆ ಉಬ್ಬಿ ಬಂದಿತ್ತಣ್ಣಾ ಆ ದಿನ.. ಒಂದು ಮಾತು ಆಡೋ ಪರಿಸ್ಥಿತಿಲೂ ನಾನಿರ್ಲಿಲ್ಲ... ನಾನು ನಿನ್ನನ್ನ ಇಷ್ಟೊಂದು ಹಚ್ಹ್ಕೊಂಡಿದೀನಿ ಅಂತ ನಿಂಗೆ ಆವಾಗ ಗೊತ್ತಿರ್ಲಿಲ್ಲ.. ಆದ್ರೆ ನಿನ್ ಮಗು ಮನಸ್ಸಿನ ಪ್ರೀತಿ ನನಗ್ ಅರ್ಥ ಆಗಿತ್ತು.. ಆದ್ರೂ ಸುಮ್ನಿದ್ದೆ.. ಕಾರಣ ನಿನ್ ಮೇಲಿನ ನಂಬಿಕೆ.. ಯಾರಾದ್ರೂ ನಿನ್ ಜೊತೆ ಸೈಲೆಂಟ್ ಆಗಿ ಇದ್ದಾರೆ ಅಂದ್ರೆ ಅವರು ನಿನ್ನನ್ನ ಅವಾಯ್ಡ್ ಮಾಡ್ತಿದಾರೆ  ಅಂತ ಅರ್ಥ ಅಲ್ಲ ಅಣ್ಣಾ..  ನಿನ್ಮೇಲ್ ತುಂಬಾ ನಂಬಿಕೆ ಇಟ್ಟಿರೋರ್ ಕೂಡ ನೀನ್ ಏನೇ ಹೇಳಿದ್ರೂ silentಆಗ್ ಕೂತ್ಕೊಂಡು ನಿನ್ ಮಾತನ್ನ ಕೇಳ್ತಿರ್ತಾರೆ.

 

   ಅಣ್ಣಾ.. ಪ್ರತಿ ವರ್ಷ ರಾಖಿ ಹಬ್ಬದ ದಿನ ನಿನ್ ಜೊತೆ ಇರ್ಬೇಕು ಅಂತ ಆಸೆಪಡ್ತೀನಿ.. ಆದ್ರೆ ಇಲ್ಲೀತನಕ ನಾವು ಒಟ್ಟಿಗೆ ಇರ್ಲೇ ಇಲ್ಲ ಅಲ್ವಾ ಅಣ್ಣಾ.... ನೀನ್ ಕೆಲಸದ ಮಧ್ಯೆ busy ಇರ್ತೀಯ.. ನಾನು ಕಾಲೇಜು studies ಅಂತ ಬ್ಯುಸಿ ಇರ್ತೀನಿ.. ಆದ್ರೆ ಪ್ರತಿ ವರ್ಷ ರಾಖಿ ಹಬ್ಬದ ದಿನ ತುಂಬ miss ಮಾಡಿದ್ದು ಅಂದ್ರೆ ನಿನ್ನನ್ನೇ.. ನಾವಿಬ್ರೂ ಯಾಕ್ ಇಷ್ಟೊಂದು ಕ್ಲೋಸ್ ಇದ್ದೀವಿ ಅಂದ್ರೆ ಕಾರಣ ನಮಗಿಬ್ರಿಗೂ ಗೊತ್ತಿಲ್ಲ. ಒಂದು ಒಳ್ಳೆ affectionಗೆ ಕಾರಣ ಬೇಕಿಲ್ಲ.. ಕಾರಣ ಇರೋದು ಕೂಡ ಸಾಧ್ಯ ಇಲ್ಲ.. ಆಲ್ವಾ ಅಣ್ಣಾ..

 

  ಇದನ್ನೆಲ್ಲಾ ಓದಿ ನೀನ್ ಏನ್  ಹೇಳ್ತೀಯ ಅನ್ನೋದು ನಂಗೆ ಚೆನ್ನಾಗ್ ಗೊತ್ತು.. "ನಿನ್ ಪ್ರೀತಿಗ್ ನ್ಯಾಯ ಒದಗಿಸ್ಕೊಡೋಕ್ ಟ್ರೈ ಮಾಡ್ತೀನಿ" ಅಂತಿಯಾ ಅಲ್ವಾ ಅಣ್ಣಾ... ಆದ್ರೆ ನೀನ್ ನನ್ಮೇಲ್ ತೋರಿಸ್ತಿರೋ ಕಾಳಜಿ ಮುಂದೆ ಇವೆಲ್ಲಾ ಏನೂ ಅಲ್ಲ ಅಣ್ಣಾ .. ದೇವ್ರಿಗೆ ನನ್ ಜೊತೆ ಬಂದ್ ಇರೋಕ್ ಸಾಧ್ಯ ಇಲ್ಲ.  ಅದಕ್ಕೆ ತಾಯಿನ್ ಕಳಿಸ್ಕೊಟ್ಟ.. ತಾಯಿಗೆ ಮಗಳ್ ಜೊತೆ ಜೀವನ ಪರ್ಯಂತ ಬದ್ಕೋಕ್  ಸಾಧ್ಯ ಇಲ್ಲ. ಅದಕ್ಕೆ ನಿನ್ನಂತ ಅಣ್ಣನ್  ಕಳಿಸ್ಕೊಟ್ಟ.. ತಾಯಿ ಅಂದ್ರೆ ದೇವರ ಸಮಾನ... ಅಣ್ಣ ಅಂದ್ರೆ ತಾಯಿನೂ ಹೌದು...  ದೇವರೂ ಹೌದು... ನಾನು ಈ ರೀತಿ ಮಾತ್ನಾಡೋದು ನಿಂಗೆ ಇಷ್ಟ ಆಗೋಲ್ಲ..  ಗೊತ್ತು ನಂಗೆ.. ನೀನ್ ಯಾರ್ ಮುಂದೇನೂ ದೊಡ್ದವನಾಗೊಕ್ ಇಷ್ಟ ಪಡೋದೇ ಇಲ್ಲ.. ಅದು ನಿನ್ನ ಒಳ್ಳೆತನ ಅಣ್ಣಾ...

 

   ಈ ಪ್ರಪಂಚದಲ್ಲಿರೋ ಎಲ್ಲ ಹುಡ್ಗೀರಿಗೂ ನಿನ್ನಂತ ಅಣ್ಣ ಸಿಕ್ಕಿದ್ರೆ ಈ ಸಮಾಜದಲ್ ನಡೀತಿರೋ women violence ಖಂಡಿತ ಕಡಿಮೆ ಆಗುತ್ತೆ.. ಹೇಗಂದ್ರೆ ತಂಗಿ personal life ಅಣ್ಣನಿಗ್ ಗೊತ್ತಿರುತ್ತೆ... ತಂಗಿ ಜೊತೆ ಅಣ್ಣ ಇರೋವಾಗ ಯಾವ ಭೂಪನಿಗೂ ಏನೂ ಮಾಡೋಕಾಗೊಲ್ಲ... "ಅಣ್ಣಾ ... " ಅಂದ್ ಕೂಡ್ಲೆ security feeling ಬಂದ್ಬಿಡುತ್ತೆ. ನಿನ್ ಜೊತೆ ನನ್ Facebook password ನಿಂದ ಹಿಡ್ದು ಎಲ್ಲಾ ವಿಷಯ share ಮಾಡ್ಕೋತಾಇರ್ತೀನಿ... ನಾನ್ ತಪ್ಪ್ ಮಾಡಿದ್ರೆ ತಿದ್ದಿ ಬುದ್ಧಿ ಹೇಳ್ತಿಯಾ... ಅಳ್ತಾ ಇದ್ರೆ ಹತ್ರ ಬಂದು ಕಣ್ಣೀರ್ ಒರೆಸ್ತೀಯ..  "ಅಣ್ಣಾ i miss you... " ಅಂದ್ರೆ "ನಾನು ನಿನ್ನ ಅಣ್ಣ ಅಂದ್ಮೇಲೆ ನಿನಗ help ಮಾಡೋಕ್ ಹೇಗ್ ಸಾಧ್ಯ ? ನಾನ್ ಇದನ್ನೆಲ್ಲಾ help ಅಂತ ಮಾಡ್ತಿಲ್ಲ.. ನನ್ duty ಅಂತ ಮಾಡ್ತಿದೀನಿ.... " ಅಂತೀಯ.

 

   ಅಣ್ಣಾ... ಒಂದು ದಿನಾನೂ ನಿಂಗೆ ನನ್ಮೆಲ್ ಸಂಶಯ ಹಿಡ್ದು ಗೊತ್ತಿಲ್ಲ.. ನಿನ್ ವಿಶ್ವಾಸಕ್ಕೆ ನಾನ್ ಯಾವತ್ತೂ ಮೋಸ ಮಾಡೋಲ್ಲ ಅಣ್ಣಾ...  ಅಣ್ಣಾ ನಿನಗ್ ಗೊತ್ತಲ್ಲ...  ಎಲ್ಲಾ hai bye relationships ಜೊತೆ ತುಂಬಾ reserved ಆಗಿರ್ತೀನಿ... ಆದ್ರೆ ಒಮ್ಮೆ close ಆದ್ರೆ ನಂಗೆ ಇಷ್ಟ ಬಂದ್ಹಾಗ್   behave ಮಾಡ್ತೀನಿ.. ತೋಚಿದ್ದನ್ನೆಲ್ಲ ಹೇಳ್ತೀನಿ, ಜಗಳ ಆಡ್ತೀನಿ, ಕಿತ್ತಾಡ್ತೀನಿ, ತಂಟೆ ಮಾಡ್ತೀನಿ, ಪ್ರೀತಿ ಮಾಡ್ತೀನಿ, ಹಠ ಹಿಡೀತೀನಿ ಹಾಗೇ ಕೇರ್ ತಗೋತೀನಿ.. ಸದ್ಯಕ್ ನಾನ್ ಎಸ್ಟೊಂದು ಕ್ಲೋಸ್ ಇರೋದ್ ಅಂದ್ರೆ ಅದು ನಿನ್ ಜೊತೆ ಮಾತ್ರ... ನಿನ್ ಜಾಗಾನ ನನ್ ಬೇರೆ ಅಣ್ಣಂದ್ರಿಂದ ರಿಪ್ಲೇಸ್ ಮಾಡೋಕಾಗೋಲ್ಲ.. ಹಾಗಾಗೊದಕ್ ನಾನ್ ಬಿಡೋದು ಇಲ್ಲ.. ನಿನ್ ಹಾಗೆ ನನ್ ಬೇರೆ brothers ನನ್ನ ಅರ್ಥ ಮಾಡ್ಕೊಳ್ಳೋದು ಕೂಡ ಸಾಧ್ಯ ಇಲ್ಲ... ಆಕಾಶದಲ್ಲಿ ಕೋಟಿಗಟ್ಟಲೆ ನಕ್ಷತ್ರಗಳಿದ್ರೂ ಚಂದ್ರನ್ ಮುಂದೆ ಅವು ಏನೂ ಅಲ್ಲ... ನಂಗೆ ನೂರಾರು  ಅಣ್ಣಂದ್ರಿದ್ರೂ ನಿನ್ ಹಾಗ್ ಅವ್ರು ಯಾರೂ ಅಲ್ಲ...

 

   ಅಣ್ಣಾ... ನಿನ್ ಜೊತೆ ತುಂಬಾ ಮಾತಾಡೋಕಿದೆ.. ಈ letterಲ್ಲಿ ಎಲ್ಲಾ ಬರೆಯೋಕಾಗೊಲ್ಲ.. ಯಾವಾಗ್ ಬರ್ತಿಯೋ ಮನೆಗೆ? ನಿನ್ಗೋಸ್ಕರ ಕಾಯ್ತಾ ಇರ್ತೀನಿ... ಯಾಕೋ ಹಂದಿ ನಗ್ತೀಯಾ? ಇಷ್ಟುದ್ದ letter ಬರೆದ್ರೂ ಮಾತು ಮುಗೀಲಿಲ್ಲ ಅಂತ ನಗ್ತಿದೀಯ.... ? ನನ್ನ ನಿನ್ನ ಮಧ್ಯೆ ಮಾತಿಗೆ, ಪ್ರೀತಿಗೆ, ಜಗಳಕ್ಕೆ, ಕಿತ್ತಾಟಕ್ಕೆ, ವಿಶ್ವಾಸಕ್ಕೆ ವಾತ್ಸಲ್ಯಕ್ಕೆ limit ಅನ್ನೋದೇ ಇಲ್ಲ... limit ಹಾಕೋದು ನನ್ನಿಂದ ಸಾಧ್ಯನೂ ಇಲ್ಲ... ನಿಂಗಂತೂ ಅದು ಮೊದ್ಲೇ ಇಷ್ಟ ಇಲ್ಲ.... ನಿನ್ ಜೊತೆ ಇರೋವಾಗ ಏನಾದ್ರೂ ತಂಟೆ ತಕಲಾಟ ಆಡ್ತಾ ಇರ್ಬೇಕು ನಂಗೆ.. ಸುಮ್ನಿರೋಕ್ ಗೊತ್ತಿಲ್ಲ ಅಣ್ಣಾ.... I  love you always and I trust you blindly...

                                                                                                 

                                                                                                       ನಿನ್ನ ದಾರಿ ಕಾಯ್ತಾ ಇರೋ,    

                                                                                                         ನಿನ್ನ ಮುದ್ದು ತಂಗಿ,

                                                                                                            ಅನನ್ಯಾ,

 

  ಪತ್ರ ಬರೆದು ಮುಗಿಸಿದ ಅನನ್ಯಾಳ ಕಣ್ಣಲ್ಲಿ ವಾತ್ಸಲ್ಯದ ಹನಿಗಳು ತುಂಬಿ ಬಂದು ಅವಳ ಕೆನ್ನೆ ತೋಯುತ್ತಿವೆ.. ಮನದೊಳಗಿನ ಪ್ರೀತಿ ವಿಶ್ವಾಸವನ್ನ ಬಿಚ್ಚಿಟ್ಟ ಪತ್ರವನ್ನು ಎದೆಗೊತ್ತಿ ಹಾಸಿಗೆಗೊರಗಿದ ಕ್ಷಣವೇ ಆ ಪತ್ರವೇ ಅವಳನ್ನು ಜೋಗುಳ ಹಾಡಿ ನಿದ್ದೆ ಕಡೆಗೆ ಕರೆದೊಯ್ಯುತ್ತಿದೆ... ಎಳೆ ಮಗುವನು ತಾಯಿ ತಟ್ಟಿ ಮಲಗಿಸುವ ಹಾಗೆ... ಆ ಭ್ರಾತ್ಹ್ರ್ರು ಆರ್ದ್ರತೆ ಬೆರೆತಿರುವ ಪತ್ರ ಅವಳ ತಟ್ಟಿ ಮಲಗಿಸುತ್ತಿದೆ... ಅದೇ ಅಣ್ಣನ ವಾತ್ಸಲ್ಯ ತಾಯಿಯಂತೆ ಬಳಿ ಬಂದು ಅವಳ ಮುಂಗುರುಳ ನೇವರಿಸಿ ಮಲಗಿಸುತ್ತಿದೆ... ಅವಳ ಪತ್ರದಲ್ಲಿ ಅವಳ "ಭಾವನೆಗಳು ಮಾತನಾಡುತ್ತಿವೆ... ".  ದೂರದಲ್ಲೆಲ್ಲೊ ಅದೇ ಹಿಂದಿ ಹಾಡು ಹಿತವಾಗಿ ಕೇಳಿಬರುತ್ತಿದೆ...

 

                                   "ಮೇರೆ ಭಯ್ಯಾ ಮೇರೇ ಚಂದಾ ಮೇರೇ ಅನ್ಮೋಲ್ ರತನ್

                                     ತೆರೆ ಬದಲೇ  ಮೇ ಏ ಜಮಾನೇ ಮೆ ಕೋಯಿ ಚೀಜ್ ನಹಿ "

 

ಆದರೆ ಇದೀಗ ಅವಳ ಪತ್ರ ಓದಿ ಮುಗಿಸಿದ ನನಗನಿಸುತ್ತಿದೆ... ಇಲ್ಲಿ

ನನ್ನದೇ "ಭಾವನೆಗಳು ಮಾತನಾಡುತ್ತಿವೆ... !!".

                                                                                                 

 

 

Rating
No votes yet