ಭಾವಾನುವಾದಿಸಿದ ಸಂದೇಶಗಳು!!!

ಭಾವಾನುವಾದಿಸಿದ ಸಂದೇಶಗಳು!!!

ಹೂವುಗಳಂತೆ ನಗುತಿರಲು ಅದುವೇ ಜೀವನ
ನಕ್ಕು ದುಃಖವನು ಮರೆಯುತಿರುವುದೇ ಜೀವನ
ಗೆಲುವಿನಿಂದ ದೊರೆವ ಸಂತಸ ಎಷ್ಟಿದ್ದರೇನಂತೆ
ಈ ಹೃದಯ ಯಾರಿಗಾದರೂ ಸೋತರೆ ಸಿಗುವ ಸಂತಸವೇ ಜೀವನ

ಕನಸುಗಳು ನಮ್ಮನ್ನು ನಿದ್ರೆಯಲೇ ಸಂದರ್ಶಿಸುತ್ತವೆ ನಿಜ
ಆ ದೇವರು ಪ್ರತೀ ಮುಂಜಾನೆ ನಮ್ಮನ್ನೆಬ್ಬಿಸಿ ಹೊಸ
ದಿನವನ್ನು ನೀಡುತ್ತಾನೆ ಆ ಕನಸುಗಳನ್ನು ಆಗಿಸಲು ನಿಜ

ಸದಾ ಹಸನ್ಮುಖಿಯಾಗಿರುವವನಿಗೆ ಸಮಸ್ಯೆಗಳಿಲ್ಲವೆಂದರಿಯದಿರು
ಸಮಸ್ಯೆಗಳನ್ನು ಗೆಲುವ ಶಕ್ತಿಯ ಸೂಚನೆ ಆತನ ನಗೆಯೆಂದರಿತಿರು

ಕ್ರೋಧದಿಂದ ನಾವಾಡುವ ಒಂದು ಮಾತು ಎಷ್ಟೊಂದು ವಿಷಕಾರಿಯೆಂದರೆ
ಹಿಂದಿನ ನೂರು ಪ್ರೀತಿಯ ಮಾತುಗಳನ್ನು ಮಾಡಿಸುತ್ತದೆ ನೆನಪಿನಿಂದ ಮರೆ

ಕನಸು ಎಲ್ಲವನ್ನು ಸಾಧ್ಯವಾಗಿಸುತ್ತದೆ
ಆಶಾಭಾವ ಎಲ್ಲವನ್ನೂ ಮುಂದುವರಿಸುತ್ತದೆ
ಪ್ರೀತಿ ಎಲ್ಲವನ್ನೂ ಸುಂದರವಾಗಿಸುತ್ತದೆ
ಆದರೊಂದು ಮುಗುಳ್ನಗೆ ಈ ಮೂರನ್ನೂ ಮಾಡಿಸುತ್ತದೆ

ಕೆಲವೊಮ್ಮೆ ಜೀವನದಲ್ಲಿ ನಿರ್ಧಾರಕ್ಕೆ ಬರುವುದು ಕಷ್ಟವಾಗುತ್ತದೆ
ಯಾವುದು ತಪ್ಪು ಇವೆರಡರಲ್ಲಿ ಎನ್ನುವುದೇ ತಿಳಿಯದಾಗುತ್ತದೆ
ನಗು ಬರಿಸುವ ಸುಳ್ಳೋ ಅಥವಾ ಕಣ್ಣೀರಿಳಿಸುವ ಸತ್ಯವೋ?

ಕ್ರೋಧ ನಮ್ಮ ನಾಲಿಗೆಯನ್ನು ಮನಸ್ಸಿಗಿಂತ ವೇಗವಾಗಿ ಚಲಿಸುವಂತೆ ಮಾಡುತ್ತದೆ
ಮುಗುಳ್ನಗೆ ನಾಲಿಗೆಯನ್ನುಳಿದು ಎಲ್ಲವನ್ನೂ ವೇಗವಾಗಿ ಚಲಿಸುವಂತೆ ಮಾಡುತ್ತದೆ

ನೀವಿಬ್ಬರೂ ಎಷ್ಟು ಕಾಲ ಸ್ನೇಹಿತರಾಗಿ ಉಳಿಯುತ್ತೀರಿ ಎಂದು ಕೇಳಿದಾಗ ನಾ ಮೌನಿಯಾಗಿರಬೇಕಾಯ್ತು
ಸದಾಕಾಲ ಮತ್ತು ಯಾವಾಗಲೂ ಇವೆರಡರಲ್ಲಿ ಯಾವುದು ದೀರ್ಘ ಎಂಬುದೇ ನನಗೆ ತಿಳಿಯದಂತಾಯ್ತು

Rating
No votes yet

Comments