ಭಾವ ಬಂಧಿ
ಭಾವ ಬಂಧಿ
ಒದಗಿತಾವುದು ಭಾವ
ಅದ ನಿರತ ಅನುಭವಿಸಿ
ಬೇಕೆಂಬ ಹೋರಾಟ ನಿತ್ಯದಲ್ಲಿ
ಸತತ ಪರಿಶ್ರಮವೆಲ್ಲ
ಮೃತ್ಯುವೆದಿರೊಳು ಒಡ್ಡಿ
ತನ್ನ ತಾ ರಕ್ಷಿಸಿದ ಹಮ್ಮಿನಲ್ಲಿ
ನಿಂತ ನೆಲವೇ ತನ್ನ
ಅಸ್ತಿತ್ವವೆಂದರಿತು
ಬೆಕ್ಕಸದಿ ಜಗ ಕಂಡ ಮಬ್ಬಿನಲ್ಲಿ
ಹುಚ್ಚು ಕನಸುಗಳಿಂದ
ಪಂಜರವು ನೆತ್ತಿಯಲಿ
ಮುಗ್ಧ ಮನಸಿನ ಭಾವ ಬಂಧಿಯಲ್ಲಿ
- ಸದಾನಂದ
Rating
Comments
ಉ: ಭಾವ ಬಂಧಿ : ಕವನ ಸಖತ್..
In reply to ಉ: ಭಾವ ಬಂಧಿ : ಕವನ ಸಖತ್.. by venkatb83
ಉ: ಭಾವ ಬಂಧಿ : ಕವನ ಸಖತ್..