ಭಾವ ಬಂಧುರ

ಭಾವ ಬಂಧುರ

ನಿನ್ನೆಗಳ ಹಕ್ಕಿ

ಸಾಗರದ ಅಂಚಲ್ಲಿ ಬಾಗಿದ ತೆಂಗಿನ ಗಿರಿಗಳನಡುವೆ
ಪುಟ್ಟ ಗೂಡೊಂದು ಕಟ್ಟುವ ಆಸೆ
ಅತ್ತ ಬಾಗಿದರೆ ಚಿಮ್ಮುವ ತೆರೆ
ಇತ್ತ ಬಾಗಿದರೆ ಮುತ್ತಿಡುವ ದಡ
ಬಾನಂಗಳಕೆ ಕೈ ಬೀಸಿ ಕರೆದು
ಪಿಸುದನಿಯಲ್ಲಿ ಹೇಳಬಯಸುವೆ
ಕೇಳುವೆಯಾ ಚಂದ್ರಮನೆ
ನನ್ನೊಲವ ದನಿಯಾ

ಸಾಗರದ ಒಳಗೆ ಸುನಾಮಿಯಿತ್ತು!
ಮರಳಿನ ದಡದಲ್ಲಿ ಸುಡುಬಿಸಿಲಿತ್ತು!
ತೆರೆಯ ಮೇಲಿನ ಹನಿಗೆ ಹಗೆಯು ಯಾಕಿತ್ತು?
ಬೋರ್ಗರೆಯುವ ಕಡಲಿಗೆ ಮುನಿಸೇಕೆ ಬಂತು?
ಗೊತ್ತಿಲ್ಲ ಗೆಳೆಯಾ, ಬಹುಶಃ
ಅವಕಿಲ್ಲ ನಿನ್ನಂತೆ ಪ್ರೀತಿಸುವ ಹೃದಯ
ಗೊತ್ತಿಲ್ಲ ಅವರಿಗೆ ಪ್ರೀತಿಸುವ ಪರಿಯ

ಓ ತೆರೆಯೇ ಕಲಿಸುವೆಯಾ ಬೋರ್ಗರೆಯುವ ಪರಿಯ
ಭಾವದುಂಬಿಗೆ ಪ್ರೇಮ ಝೇಂಕರಿಸೊ ಸಿರಿಯಾ
ಕಂಬನಿಯ ಅಲೆಗೊಮ್ಮೆ ಮುತ್ತಿಟ್ಟು ರಮಿಸು
ಎದೆಯ ಕಡಲಿಗೆ ಒಮ್ಮೆ ಕಿವಿಗೊಟ್ಟು ಆಲಿಸು

ಅಬ್ಬರದ ಅಲೆಯೊಸಗೆ ಕೇಳಿಸದೆ ನಿನಗೆ
ಹೆಬ್ಬಂಡೆ ಯಾಕಾದೆ ನೀನೆ ನಿನ್ನೊಳಗೆ
ಎಲ್ಲಿ ಹಾರಿತು ನಿನ್ನ ನಿನ್ನೆಗಳ ಹಕ್ಕಿ
ಕನಸುಗಳ ಮೂಟೆಗೆ ಕಾರಿರುಳ ಕುಕ್ಕಿ!!

Rating
No votes yet

Comments