ಭಾಷಾಂತರದ ಅವಾಂತರ

ಭಾಷಾಂತರದ ಅವಾಂತರ

(ಆಯುರ್ವೇದ ಸಂಬಂಧಿತ ಭಾಷಾಂತರಗಳ ಕುರಿತು ಬರೆದ ಲೇಖನ)
ಮೈಸೂರು ವಿಶ್ವವಿದ್ಯಾನಿಲಯ ವೈದ್ಯವಿಶ್ವಕೋಶ ಸಮಿತಿಗೆ ಡಾ. ಎಂ. ಜಿ ಆರ್. ಅರಸರು ಸದಸ್ಯರಾಗಿ ನೇಮಕಗೊಂಡಿದ್ದರಬಗ್ಗೆ, ಅಥವಾ ಡಾ.ಜಯಪ್ರಕಾಶನಾರಾಯಣರವರ ನೇತ್ರತ್ವದಲ್ಲಿ ಆಯುರ್ವೇದ ಶ್ಲೋಕಗಳನ್ನು ಐದು ವಿದೇಶಿ ಭಾಷೆಗಳಿಗೆ ಭಾಷಾಂತರಿಸುವ ಅಪೂರ್ವಯೋಜನೆಗಳಿಗೆ ಸಂಬಂಧ ಪಟ್ಟಂತೆ ಈಗಾಗಲೇ ಸಾಕಷ್ಟು ಅಭಿನಂದನೆಗಳ ಸುರಿಮಳೆಯಾಗುತ್ತಿರಬಹುದು. ಆದರೆ ನಾನು ಸಧ್ಯಕ್ಕೆ ಅಭಿನಂದಿಸಲಾರೆ! ಅಭಿನೆಂದನೆಯನ್ನು ಕಾಯ್ದಿಟ್ಟಿದ್ದೇನೆ!!

ನಿಮಗೆ ಒಂದು ಸ್ವಂತ ಅನುಭವವನ್ನು ಹಾಗೂ ಒಂದು ಜೋಕನ್ನು ಹೇಳುತ್ತೇನೆ;-

ಜೋಕು ;- ಮೂವರು ಮಿತ್ರರು ಸೇರಿ ಚಾಮುಂಡಿ ಬೆಟ್ಟಕ್ಕೆ ಸೈಕಲ್ಲಮೇಲೆ ಹೊರಟಿದ್ದರಂತೆ. ವಯಸ್ಸಿನ ಹುಮ್ಮಸು. ಎಲ್ಲೂ ಸೈಕಲ್ಮೇಲಿಂದ ಇಳಿಯದೇ ಚಾಮುಂಡಿ ಗುಡಿಯಬಾಗಿಲವರೆಗೂ ಸೈಕಲ್ತುಳಿಯುವ ಪ್ರತಿಜ್ಞೆಮಾಡಿದರು. ಒಬ್ಬನು ಸೀಟಿನಮೇಲೆ ಇನ್ನೊಬ್ಬನು ಕ್ಯಾರಿಯಾರ್ಮೇಲೆ ಕುಳಿತಿದ್ದರೆ ಮಗದೊಬ್ಬ ಮುಂದಿನಬಾರ್ಮೇಲೆ ಕುಳಿತಿದ್ದ. ಸೀಟಿನಮೇಲೆ ಕುಳಿತು ಪೆಡೆಲ್ ತುಳಿಯುವಾತನಿಗೆ ಕ್ಯಾರಿಯರ್ವಾಲಾನೂ ಸಾಥನೀಡುತ್ತಿದ್ದು ಕಷ್ಟಪಟು ಗುರಿಸಾದಿಸಿದ ಸುಖದಲ್ಲಿ ಇಬ್ಬರೂ ತನ್ನ ಪರಿಶ್ರಮದಿಂದಲೇ ಬೆಟ್ಟ ಏರಲು ಸಾಧ್ಯವಾಯಿತೆಂದು ಜಗಳ ಶುರು ಹಚ್ಚಿಕೊಂಡರು.

ಮೂರನೆಯವನಿಗೆ ಬಹಳ ಬೇಸರವಾಯಿತು. ತನ್ನ ಪ್ರಯತ್ನಕ್ಕೆ ಇವರು ಬೆಲೆಯನ್ನೇ ಕೊಡುತ್ತಿಲ್ಲವಲ್ಲಾ ಎಂದು ತನ್ನ ಅಳಿಲನ್ನೂ ತೋಡಿಕೊಂಡ. ಆತಮಾಡಿದ ಸಹಾಯ ಬಹಳ ಅಗಾಧ ಹಾಗೂ ವಿಶಿಷ್ಟವಾದದ್ದಾಗಿತ್ತು. ಉಳಿದಿಬ್ಬರೂ ಶ್ರಮಪಟ್ಟು ಪೆಡಲ್ತುಳಿಯುತ್ತಿರುವಾಗ ಈತ ಸೈಕಲ್ ಹಿಂದಕ್ಕೆ ಹೋಗದರುವಂತೆ ಸಹಾಯಮಾಡಲು ಬ್ರೆಕ್ಕ್ ಹಿಡಿಯುತ್ತಿದ್ದ!!

ಅನುಭವ;-

ಒಮ್ಮೆ ನಾನು ಸೈಕಲ್ಮೇಲೆ ಏರಲು ಪ್ರಯತ್ನಿಸುತ್ತಿದ್ದೆ.ಹತ್ತುವ ಸಮಯದಲ್ಲಿ ಬ್ಯಾಲೆನ್ಸ್ ಸ್ವಲ್ಪ ಏರು ಪೇರು ಆಯಿತು.ಬೀಳದಿರಲೆಂದು ಪ್ರಯತ್ನಿಸುತ್ತಿದ್ದೆ.ಅದು ಸಾದ್ಯವಿಲ್ಲವೆಂಬುದು ಅರಿವಿಗೆಬಂದಿತು. ನಾನು ಸುಲಭವಾಗಿ ನೆಲಕ್ಕೆ ಇಳಿಯುತ್ತಿದ್ದೆ. ಅಷ್ಟರಲ್ಲಿ ಒಬ್ಬ ಪುಣ್ಯಾತ್ಮ ಸಹಾಯಹಸ್ತನೀಡಿ ಸೈಕಲ್ನ್ನು ಬಿಗಿಯಾಗಿ ಹಿಡಿದು ಕೊಂಡ. ಸೈಕಲ್ ಅವನ ಕೈಯಲ್ಲಿ ಭದ್ರವಾಗಿ ಉಳಿಯಿತು. ನಾನು ಕಾಲುವೆಗೆ ಉರುಳಿದೆ!! ಗಮನಿಸಿ ;- ಈ ಎರಡೂ ಸಂದರ್ಭಗಳಲ್ಲೂ ಆಪದ್ಭಾದವನೇ ಅಪಾಯಕಾರಿಯಾದ.

ಡಾ. ಎಂ.ಜಿ, ಆರ್. ಅರಸರ ಹಾಗೂ ಡಾ. ಜಯಪ್ರಕಾಶನಾರಾಯಣರವರ ಪ್ರಯತ್ನದ ಪರಿಣಾಮ ಒಳಿತನ್ನು ಮಾಡುತ್ತದೆ ಎಂದು ನನಗೇನೂ ಅನ್ನಿಸುವುದಿಲ್ಲ.

ವೈಜ್ಞಾನಿಕ ಪರಿಭಾಷೆಗಳನ್ನು ಭಾಷಾತರಿಸುವುದನ್ನು ನಾನು ದ್ವೇಷಿಸುತ್ತೇನೆ. ಕನ್ನಡದ ಭಕ್ತರು ಆಕ್ಸಿಜನ್ಗೆ ಪ್ರಾಣವಾಯು, ಕಾರ್ಬನ್ ಡಯಾಕ್ಶೈಡ್ಗೆ ಅಂಗಾರಾಮ್ಲ ವಾಯು ಇತ್ಯಾದಿ ಭಾಷಾಂತರಿಸಿದ್ದರಿಂದಲೇ ನಮ್ಮ ಮಕ್ಕಳನ್ನು ಅವರ ಭವಿಷ್ಯದ ಹಿತದೃಷ್ಠಿಯಿಂದ ಆಂಗ್ಲಮಾಧ್ಯಮಕ್ಕೆ ಡೊನೇಷನ್ ಸುರಿದು ಸೇರಿಸುವ ಅನಿವಾರ್ಯ ಪ್ರಮೇಯ ಬಂದಿರುವುದು. ಈ ಬಗ್ಗೆ ವೈದ್ಯವಾರ್ತೆಯಲ್ಲಿ ಹಿಂದೊಮ್ಮೆ ನನ್ನ ಲೇಖನವೂ ಪ್ರಕಟವಾಗಿತ್ತು. ಆಯುರ್ವೇದದ ಅವನತಿಗೆ ಹಾಗೂ ಅಸಡ್ಡೆಗಳಿಗೆ ಅಡ್ನಾಡಿ ಭಾಷಾತರಕಾರು ವಾತ ಪಿತ್ತ ಕಫಗಳಿಗೆ ವಿಂಡ್, ಬೈಲ್, ಪ್ಲಮ್ ಇತ್ಯಾದಿ ಭಾಷಾಂತರಿಸಿದ್ದೇ ಕಾರಣ. ಡಾ. ಜಯಪ್ರಕಾಶನಾರಾಯಣರ ಪ್ರಯತ್ನ ಹಾಗೂ ನಿಮ್ಮ ಪ್ರೋತ್ಸಾಹ ಇದೇ ದಿPನಿಲ್ಲಿ ಸಾಗಿದರೆ ಅಪಾಯ ಖಂಡಿತ.

ಭಾಷೆಯಮೇಲೆ ಪ್ರಭುತ್ವವಿರುವಾತನಿಗೆ ಶಾಸ್ತ್ರಜ್ಞಾನವಿಲ್ಲ. ಶಾಸ್ತ್ರಕೋವಿದನಿಗೆ ಭಾಷೆಯಮೇಲೆ ಹಿಡಿತವಿಲ್ಲ. ಶಿವಾಜಿಯ ಕಾಲಚಲ್ಲಿ ಔರಂಗಜೇಬನ ಆಟ ನಡೇಯಲಿಲ್ಲಎಂಬುದಕ್ಕೆ-at the leg of the shivaaji ouranga jebs play could not walk ಎಂದು ಭಾಷಾಂತರಿಸಿದರೆ ಏನಾಗುತ್ತದೆ?

ಈ ಕೆಳಗಿನದು ವಿಕಿಪೀಡಿಯಾ ಎಂಬ ವಿಶ್ವಕೋಶದ ತುಣುಕು. ಈಗಷ್ಟೆ ಇದನ್ನು ನನ್ನ ಕಂಪ್ಯೂಟರಿಗೆ ಇಂಟರ್ನೆಟ್ನಿಂದ ಇಳಿಸಿಕೊಂಡಿದ್ದೇನೆ.

Ayurvedic tastes
Ayurveda holds that the tastes of foods or herbs have specific physiological effects. Those tastes that transform after digestion (Vipaka) are more powerful.

Sweet - Madhura

Sweet foods nourish, cool, moisten, oil, and increase weight

Sour - Amla

Sour foods warm, oil, and increase weight

Salty - Lavan

Salty foods warm, dissolve, stimulate, soften, oil, and increase weight

Bitter - Katu

Bitter foods cool, dry, purify and decrease weight

Pungent - Tikta

Pungent foods warm, dry, stimulate, and decrease weight

Astringent - Kasaya

Astringent foods cool, dry, reduce stickiness

ಪರಿಶೀಲಿಸಿನೋಡಿ. ಷಡ್ರಸದ Bitter – Katu *** Pungent – Tikta ಇವೆರಡೂ ಸರಿಯಾಗೆವೆಯೇ? ಯಾವುದು ತಿಕ್ತ? ಯಾವುದು ಕಟು? ಇವೆರಡೂ ಅದಲು ಬದಲಾಗಿದೆ ಎಂದು ಅನ್ನಿಸುತ್ತಿಲ್ಲಾವೆ? ಇಡೀ ಜಗತ್ತು ಈ ವಿಕಿಪಿಡಿಯಾವನ್ನು ನಂಬುತ್ತದೆ ಎಂದ ಮೇಲೆ ಅಪಾಯ ಎಲ್ಲಿದೆ ಎಂಬುದು ನಿಮಗೆ ಅರ್ಥವಾಗುತ್ತಿರಬಹುದು.

ಮೈಯೆಲ್ಲಾ ಖಾರತುಂಬಿಕೋಡ ಮೆಣಸು ಹಿಪ್ಪಲಿ ಶುಂಠಿಯನ್ನು ತಿಕ್ತವೆನ್ನಬೇಕಾ? - ಅಥವಾ ಮೈಯೆಲ್ಲಾ ಕಹಿತುಂಬಿಕೊಂಡಿರುವ ಚಂದನ ಬೇವು ಅಮೃತಬಳ್ಳಿ ಕಹಿಪಟೊಲವನ್ನು ತಿಕ್ತವೆಂದು ಕರೆಯಬೇಕಾ?

ಸ್ವಯಂವೈದ್ಯ(self medication) ಮಾಡಿಕೊಳ್ಳುತ್ತಿರುವ ರೋಗಿಯೊಬ್ಬ ಒಂದೊಮ್ಮೆ ವಾಗ್ಭಟನ " ಕಷಾಯ ತಿಕ್ತ ಮಧುರಾಃ ಪಿತ್ತಂ-(ಘ್ನಂತಿ=ನಾಶಮಾಡುತ್ತದೆ) ಎಂಬವಾಕ್ಯವನ್ನು ತಿಳಿದಿದ್ದು, ವಿಕಿಪೀಡಿಯಾ ಓದಿ- ಪಿತ್ತಕ್ಕೆ ಖಾರ ಪದಾರ್ಥಗಳನ್ನು ತಿನ್ನತೊಡಗಿದರೆ - ರೋಗಿಯ ಪರಿಸ್ಥಿತಿ ಏನಾಗಬಹುದು. ಅದೇರೀತಿ ಯಲ್ಲಿ ಕಟುರಸಕ್ಕೆ ಖಾರದ ಬದಲು ಕಹಿಯೆಂದು ಭಾವಿಸಿ ಆಹಾರ ಔಷಧಗಳನ್ನು ಸೇವಿಸುತ್ತಿದ್ದರೆ ರೋಗ ಗುಣವಾಗಬಹುದೋ? ಅಥವಾ ಉಲ್ಭಣವಾಗಬಹುದೊ ಭಗವಾನ್ ಧನ್ವಂತರಿಗೆ ಗೊತ್ತು.

ನಿಮ್ಮ ಮಾಹಿತಿಗೆ ಇದೀಗ ನಡೆದ ತಾಜಾ ತಾಜಾ ಭಾಷಾಂತರದ ಆವಾಂತರ- ’ನನ್ನ ಇಂಗ್ಲೀಷ ಮೀಡಿಯಮ್ ಮಗ ತನ್ನ ತಾಯಿಗೆ ಇಡ್ಲಿಮಾಡುವುದರಬಗ್ಗೆ ಇಂಟರನೆಟ್ನಲ್ಲಿರುವ ಮಾಹಿತಿಯನ್ನು ಓದಿ ಹೇಳುತ್ತಿದ್ದ. ಪ್ರಜಾವಾಣಿಯ ಪದಬಂಧವನ್ನು ಸುಲಭವಾಗಿ ತುಂಬುವಸ್ಟರಮಟ್ಟಿಗೆ ಆತ ಕನ್ನಡ ಪಂಡಿತ. ಆದರೂ ಬೊಯಿಲ್ಡ ರೈಸಗೆ ಅರ್ಥವನ್ನು ಬೆಂದ ಅನ್ನ ಎಂದು ತಾಯಿಗೆ ವಿವರಿಸಿದ. ಕುಸುಬಲು ಅಕ್ಕಿಗೆ ಬೋಯಿಲ್ಡರೈಸ ಎನ್ನುತ್ತಾರೆ ಅನ್ನೋದು ಎಂಬುದು ಆತನ ನೆನಪಿಗೆ ಬರಲಿಲ್ಲ .

ಡಾ. ಆಯಪ್ರಕಾಶನಾರಾಯಣರು ಆಯುರ್ವೇದ ಹಾಗೂ ಅಲೋಪತಿ ಎರಡೂ ಶಾಸ್ತ್ರಗಳನ್ನು ಸಮರ್ಥವಾಗಿ ಬಲ್ಲವರು. ಇಂಗ್ಲೀಷ್ ಕರಗತವಾಗಿರಬಹುದು. ಆದರೆ ಫ಼್ರೆಂಚ್ ಜರ್ಮನಿಯ ವಿಷಯದಲ್ಲಿಹೀಗಾಗದು. ಆದಾಗ್ಯೂ ಭಾಷಾಂತರವು ವ್ಯಭಿಚಾರವಾಗದಂತಿರುತ್ತದೆ ಎಂದು ನಂಬುತ್ತೇನೆ. ಅವರ ಸಾಮರ್ಥ್ಯದಲ್ಲಿ ನಂಬಿಕೆ ಇದ್ದರೂ ಅವರ ಯಶಸ್ಸಿನ ಬಗ್ಗೆ ಭಯವೂ ಇದೆ.

ಡಾ. ಎಂ.ಜಿ.ಆರ್. ಅರಸರ ಬಗ್ಗೆ ವಿಶ್ವಾಸವಿದೆ. ಆದರೆ ಈ ವಿಷಯದಲ್ಲಿ ಭರವಸೆ ಕಡಿಮೆ ಇದೆ. ಆತಂಕ ಹೆಚ್ಚಿಗೆ ಇದೆ. ಹೀಗಾಗಿ ಅಭಿನಂದನೆಗಳನ್ನು ಕಾಯ್ದಿರಿಸಿದ್ದೇನೆ.

ಈ ಇಬ್ಬರ ಶೃಮವು ಭಗವಾನ್ ಧನ್ವಂತರಿಗೆ ಮೆಚ್ಚುಗೆಯಾಗಿ ಅವರು ದೇವನ ಕೃಪೆಗೆ ಪಾತ್ರರಾಗಲಿ ಎಂದು ಆಶಿಸುತ್ತೇನೆ

ಜೊತೆಗೆ ಒಂದು ಕೊನೆಹನಿ. ಇದು ಭಾಷಾಂತರದ ಆವಾಂತರಕ್ಕೆ ಸಂಬಂಧ ಪಟ್ಟಿದ್ದು;- ಹಿಂದಿ ಭಾಷೆಯಿಂದ ಕನ್ನಡಕ್ಕೆ ಭಾಷಾಂತರಿಸುವ ಪರೀಕ್ಷೆ ನಡೆದಿತ್ತು. ಹೇಗಿದ್ದರೂ ಹಿಂದಿ ಭಾಷೆ ಪರೀಕ್ಷೆಯಲ್ಲಿ ಲೆಕ್ಕಕ್ಕುಂಟು ಆಟಕ್ಕಿಲ್ಲ. ಹೀಗಾಗೆ ಮೇಸ್ಟ್ರು ಸೂಚನೆ ಕೊಟ್ಟಿದ್ದರು. ಗೊತ್ತಿದ್ದ ಪದಗಳನ್ನು ಭಾಷಾಂತರಿಸಿ ತಿಳಿಯಲಾರದ ಪದಗಳನ್ನು ಹಾಗೆಯೇ ಇಡಬಹುದು. ಪ್ರಶ್ನೆ ಹೀಗಿತ್ತು- ಆಗೇ ರಾಮ್ ಪೀಛೆ ಲಕ್ಷ್ಮಣ್ ಬೀಚಮೆ ಸೀತಾ [ ಮುಂದೆ ರಾಮ ಹಿಂದೆ ಲಕ್ಷ್ಮಣ ಮಧ್ಯದಲ್ಲಿ ಸೀತೆ]. ಒಬ್ಬ ಪ್ರಭೃತಿಯ ಭಾಷಾತರವು ಹೀಗೆ ಇತ್ತು.- ಮುಂದೆ ರಾಮ ಹಿಂದೆ ಲಕ್ಷ್ಮಣ ಬೀಚಿನಲ್ಲಿ ಸೀತೆ!

Rating
No votes yet