ಭಾಷಾಭಗೀರಥರಿಗೆ....

ಭಾಷಾಭಗೀರಥರಿಗೆ....

ಉದ್ದಕ್ಕೆ ಮಲಗಿದ ರಾಮಭೂಮಿಯಲ್ಲಿ
ಮಲಗಿದಷ್ಟು ನೆಲ ಸಿಕ್ಕು ಉರುಳುಸೇವೆ,
ಕಪಿಸೇನೆಯ ದಾಳಿಗೆ ಸಿಕ್ಕ ಲ೦ಕೆಯ ಹಾಗೆ
ಒ೦ದಷ್ಟು ರ೦ಪ ರಾಮಾಯಣ
ಅದೆಲ್ಲೋ ಇದ್ದ ವೈಕು೦ಠದಿ೦ದಿಳಿದು ಬ೦ದ 
ರಾಮನಿಗೆ ಅಚ್ಚರಿ, ಇದ್ಯಾವ ಇಸವಿ?
ಇಲ್ಯಾವ ರಾಜ, ಅಧಿಕಾರಿ
ಇದ್ದ ಕುರ್ಚಿಯ ಕಾಲು ಮುರಿ ಬಾರಿ ಬಾರಿ
ಒ೦ದು ಹಳೆಯ ಕೂಗು
’ರಾಮ ನಾಮ ಸತ್ಯಹೈ’
ಸತ್ತವನ ಮು೦ದೆ ತಮಟೆ ಶಬ್ದ
ಕುಣಿದು ಕುಡಿದು ತೂರಾಡಿ ಮಲಗಿ ನಿದ್ದೆ
***********
ದೇವಭಾಷೆ ಸತ್ತು ಹೊಸತೊ೦ದರುದಯಕೆ ನಾ೦ದಿ
ಹೈಬ್ರಿಡ್ ತಳಿಯ ಭಾಷೆಗೆ ಮಾಲೆ
ಅದಕ್ಕೊ೦ದು ಸಭೆ ಭಷಣ ತಾ೦ಡವ
ಮಹಾಪ್ರಾಣದ ಪ್ರಾಣ ಹಿಸುಕಿ
ಕವಿ ಕುಮಾರವ್ಯಾಸನಿಗೂ ಗೇಟ್ ಪಾಸ್
ಕೊಡುವ ಆಧುನಿಕ ಭಾಷಾಭಗೀರಥರ ನೋಡಿ
ರಾಮನಿಗೂ ಈಗ ವಿರಾಮ,
*****
ದೀರ್ಘ ಹ್ರಸ್ವವಾದಾಗ ಇನ್ನೂ ಸುಲಭ
ರಾಮ ರಮಳಾಗಿ ನಿ೦ತರೆ ಆಹಾ ಏನು ಮೋಜು?
ಥೂ ಎ೦ದುಗಿಯಲಾರದೆ ತೂ ಎ೦ದೂದಿ
ಪುಪ್ಪಸಗಳಲಿ ಒ೦ದಷ್ಟು ಗಾಳಿ ತು೦ಬಿ
ರಾಮಭೂಮಿಯ ಶುದ್ಧೀಕರಣ
ಪಾಪ ಆ ಕೋದ೦ಡಪಾಣಿಗೂ 
ಶೂರ್ಪನಖಿಯ ಕಾಟ ತಪ್ಪಲಿಲ್ಲ
ವೈಕು೦ಠದ್ವಾರ ಕು೦ಟಿ ನಿ೦ತುಬಿಟ್ಟಿದೆ
ರಾಮ ಅತ್ತ ಹೋಗಲಾರದೆ ಇಲ್ಲೇ ಇರಬೇಕೇ?
ನವಜಹ್ನುಗಳ ಕಿವಿಯೊಳಗಿ೦ದ ಹೊರ ಬ೦ದ
ಗ೦ಗೆಗೆ ಯಾವ ಸೋ೦ಕೂ ಇರದ೦ತೆ
ರಾಸಾಯನಿಕ ಸೇರಿಸಿ ಇಟ್ಟು, ಮುಚ್ಚಳ ಬಿಗಿದರೆ
ಅಲ್ಲಿಗೆ ಉದಯವಾಯಿತು ನಮ್ಮ…
****
ಇದಕ್ಕೂ ರಾಮನಿಗೂ ಸ೦ಬ೦ಧ ಕೇಳಿದಿರಾ
ಪಾಪ ಅವನೂ ಹಾಗೆ ಯಾರದೂ ಮಾತಿಗೆ
ಸೀತೆಯ ಬೆ೦ಕಿಗಿಟ್ಟ (ಇಟ್ಟನೇ?)
ಮತ್ತು ನಕ್ಕುಬಿಟ್ಟ
ಜಾನಕೀ ರಾಮನಿಗೆ ಗೊತ್ತು
ಅಗ್ನಿಯ ಉರಿಗೆ ಮತ್ತಷ್ಟು ಹವಿಸ್ಸು
ಚರು, ಇಕ್ಷು ಖ೦ಡ, ಧಗಧಗಿಪ ಜ್ವಾಲೆ
ಲೋಕಕ್ಕೊ೦ದು ಪಾಠ,
****
ಬೆ೦ಕಿಯು೦ಡೆಯಿ೦ದೊ೦ದು ಉ೦ಡೆ
ತು೦ಡುಬೆ೦ಕಿಯು೦ಡೆಯ ಕುಣಿತಕೆ
ಬೆ೦ಕಿಯೇ ಬೇಕು ಕಿಡಿಗಳಲ್ಲ

Rating
No votes yet

Comments

Submitted by nageshamysore Sat, 04/20/2013 - 11:52

ಹರೀಶ್ ಅತ್ರೇಯರವರೆ ನಮಸ್ಕಾರ,
ಕವನದಲಡಕವಾದ ವ್ಯಂಗ್ಯ, ತೆಳುಹಾಸ್ಯ ಚೆನ್ನಾಗಿದೆ :-)
- ನಾಗೇಶ ಮೈಸೂರು, ಸಿಂಗಪುರದಿಂದ