ಭಾಷೆಯನ್ನು ಸರಿಯಾಗಿ ಬಳಸದಿದ್ದರೆ ಆಗುವ ಅನಾಹುತಗಳು
1) ಅನಿರೀಕ್ಷಿತವಾಗಿ, ಶಕುಂತಲೆಯ ಬಗ್ಗೆ ಸಹಾನುಭೂತಿಯಿಂದ ಹೇಳುವಾಗೊಬ್ಬ ಪುಣ್ಯಾತ್ಮರು “ ದೂರ್ವಾಸನ ಶಾಪ ದಿಂದ ಗರ್ಭವತಿಯಾಗಿದ್ದ ಶಕುಂತಲೆಗೆ ಎಂತೆಂತಹ ಸಂಕಷ್ಟಗಳು ಬಂದೊದ ಗಿದವು, ಬಲ್ಲಿರಾ ? ” ಎಂದಿದ್ದರು.( ಹಳೆಯ ಕಸ್ತೂರಿಯಿಂದ)
2)ಇನ್ನೊಬ್ಬರು “ ನಮ್ಮ ಕೋರಿಕೆಯ ಮೇರೆಗೆ ದಿವಂಗತರಾದ ಕೈಲಾಸಂರವರ ದಿನಾಚರಣೆಗಾಗಿ ಶ್ರೀ ಬೀಚಿ ಯವರು ಬಂದುದಕ್ಕೆ ನಾವು ತುಂಬಾ ಋಣಿಗಳು” ಎಂದು ಆಭಾರ ಮನ್ನಣೆ ಮುಗಿಸಿದ್ದರು. (ಹಳೆಯ ಕಸ್ತೂರಿಯಿಂದ)
3) ಒಂದು ಪಾಪಿಂಗ್ ಕಾಂಪ್ಲೆಕ್ಸ ಬಳಿಯ ಬೋರ್ಡು - " ನಿಮಗೆ ಮಕ್ಕಳಿದ್ದು, ಈ ಸಂಗತಿ ಗೊತ್ತಿಲ್ಲದಿದ್ದರೆ ಗಮನಿಸಿ - ಮಕ್ಕಳಿಗಾಗಿ ನಮ್ಮಲ್ಲಿ ಶಿಶುಪಾಲನ ಕೇಂದ್ರವಿದೆ. "(ಇಂಗ್ಲಿಷ್ನಿಂದ ನಾನು ಮಾಡಿದ ಅನುವಾದ)
4)ಪತ್ರಿಕಾವರದಿ - " Teri galiyon me na rakhenge kadam (ನಿಮ್ಮ ಬೀದಿಗೆ ನಾನು ಮತ್ತೆ ಬರುವುದಿಲ್ಲ)" ಈ ಹಿಂದಿ ಹಾಡನ್ನು ಗಾಯಕರು ಹಾಡಿದಾಗ ಕೇಳುಗರಿಗೆ ಬಹಳೇ ಸಂತೋಷವಾಯಿತು.(ಇಂಗ್ಲಿಷ್ನಿಂದ ನಾನು ಮಾಡಿದ ಅನುವಾದ)
5)ಶಾಲೆಯ ಸೂಚನೆ - ನಮ್ಮ ಶಾಲೆಯ ಮಕ್ಕಳು ಶೇಕ್ಸಪಿಯರ್ ನ ಹ್ಯಾಮ್ಲೆಟ್ ಅನ್ನು ಈ ರವಿವಾರ ಸಂಜೆ ಅಭಿನಯಿಸಲಿದ್ದಾರೆ. ಈ ಟ್ರಾಜಿಡಿಯನ್ನು ಯಾವ ಕಾರಣಕ್ಕೂ ಮಿಸ್ ಮಾಡಬೇಡಿ.
(ಇಂಗ್ಲಿಷ್ನಿಂದ ನಾನು ಮಾಡಿದ ಅನುವಾದ)