ಭಾಷೆಯ ಸ್ವಾಮ್ಯ
1. ಅಹೋಯ್! ಹೋಯ್!! ಹ್ಯೋಯ್!!! ಹಾಯ್!
ಯಾರಾದರೂ ಕುಂದಾಪುರದ ಕಡೆಯವರಿದ್ದರೆ ಅವರಿಗೆ ಮೇಲಿನ ಎರಡು ಮೂರನೆಯ ಪದ ಸಾಮಾನ್ಯವಾಗಿರುತ್ತದೆ. ಅಲ್ಲಿ ಸಂಭೋಧನಾ ಕ್Rಈಯೆಯ ಯಾವುದೇ ರೀತಿಯ ಮಾತುಕಥೆ ಶುರುವಾಗುವುದೇ ಈ ಮೇಲಿನೆರಡು ಶಬ್ದಗಳಿಂದ. ಈ ಕುಂದಾಪುರದ ಭಾಷೆ ಕೆಲವರಿಗೆ ವಿಚಿತ್ರ ಅನ್ನಿಸೀತು, ಈ ಸಮಯದಲ್ಲಿ ಒಂದು ಜೋಕು ನೆನಪಿಗೆ ಬರ್ತಾ ಇದೆ,. ಹಿಂದೊಮ್ಮೆ ಕನ್ನಡ ಭಾಷೆಯನ್ನು ತುಳಿದರು, ಅಳಿಸಿದರು, ಅಂತ ಎಲ್ಲ ಕಡೆ ಕೂಗು ಹಾಕುತ್ತ ಇರಬೇಕಾದರೆ, ಮೀಡಿಯಾದವರು ಬರೆದರು! ದಕ್ಷಿಣ ಕನ್ನಡದಲ್ಲಿ ಅಂತಹ ಕೂಗು ಎದ್ದಿಲ್ಲ ಯಾಕೆ ಅಂತ ? "ಅಲ್ಲಿ ಬೇರೆ ಭಾಷೆ ಇದ್ದರಲ್ಲವಾ ಮಾರಾಯರೇಅಲ್ಲ ಎಲವೂ ಎಲ್ಲರೂ ಕನ್ನಡವೇ ಅಲ್ಲವಾ?" ಅಂತ ಉತ್ತರ ಬಂತು. ಇದು ಹಿಂದಿನ ಮಾತು, ಈಗ ಅಲ್ಲಿಯೂ ಮಲೆಯಾಳಮಯ ಆಗಿದ್ದು, ಕುಂದಾಪುರ ಉಡುಪಿಗೆ ಸೇರಿಯೂ ಆಯ್ತು.
ಆ ಭಾಷೆ ಯಾಕೆ ಹೀಗೆ ಆಗಿರಬಹುದೂ ಅನ್ನುವುದಕ್ಕೆ ನನ್ನ ಸಮಜಾಯಿಸಿ ಇದು. ಅಲ್ಲಿಯ ಕನ್ನಡ ನೀವು ಸರಿಯಾಗಿ ಯೋಚಿಸಿ ನೋಡಿದರೆ ನಿಮಗೆ ಅರಿವಾದೀತು, ಹಳೆಗನ್ನಡದ ಒತ್ತು ಜಾಸ್ತಿಯಿದ್ದು, ಕನ್ನಡದ ಎಲ್ಲಶಬ್ದಗಳೂ ಹೃಸ್ವವಾಗಿರುವುದು ನಿಮಗೆ ಅರಿವಿಗೆ ಬಂದೀತು.ಹೋಗಲಿ ಬಿಡಿ ಈ ವಿಷಯ ಇನ್ಯಾವಾಗಲಾದರೂ ಮುಂದುವರಿಸೋಣ.ಈಗ ವಿಷಯಕ್ಕೆ ಬರುತ್ತೇನೆ.
ಹೋಯ್ ಎಂತ ಮಾಡ್ತ್ರಿ? ಊಟ್ ಆಯ್ತಾ
ಹೋಯ್ ಯಾರದು? ಎತ್ಲಾಗ್ ಆಯ್ತ್!
ಹೋY ಎಲ್ಲಿಗೆ ಹೊರಟದ್ದು, ನಾನೂ ಬತ್ತೆ ತಡಿಯಾ.
ಹೋಯ! ನಾನಾ! ನೀನ್ ಯಾರ ಅಂದ್ಕಂಡೆ!
ಹ್ಯೋಯ್ ಎಂತ್ ಮರ್ರಾಯ್ರೆ? ನಿಮ್ಗೆ ಮಂಡೆ ಸಮ ಇತ್ತಾ?
ಹಾಗಂತ ನಾನು ಕುಂದಾಪುರ ಬಾಷೆ ನಿಮಗೆ ಕಲಿಸ್ತಾ ಇಲ್ಲ. ನಾನು ಕುಂದಾಪುರದ ಕಡೆಯವನಾದುದರಿಂದಲೂ ಅಲ್ಲದೇ ಆಭಾಷೆಯ ಮೇಲಿನ ಅತಿಯಾದ ನನ್ನ ವ್ಯಾಮೋಹ ನಿಮಗೆ ಈ ರೀತಿ ಹೇಳಲು ಬಯಸಿದ್ದೂ ಅಲ್ಲ. ನಿಮಗೆ ಅನ್ನಿ ಸುವುದಿಲ್ಲವಾ? ಈಗಿನ ಅತ್ಯಾಧುನಿಕ ಯುವ ಜನರ ಅಚ್ಚು ಮೆಚ್ಚಿನ ಶಬ್ದ " ಹಾಯ್" ಕೂಡಾ ಹೀಗೆಯೇ ಇದೆಯಲ್ಲ ಅಂತ. ಅದೇ ಮಾರಾಯ್ರೆ ನಾನು ಹೇಳ್ತಾ ಇರೋದು.
ನಾನು ಉತ್ತರ ಭಾರತದಲ್ಲಿದ್ದಾಗ, ಪಂಜಾಬಿಗಳು ಈ ಮೇಲಿನ ನಾಲ್ಕನೆಯ ಪದವನ್ನು ಉಚ್ಚರಿಸುವುದು ಕಂಡೆ.ಆದರೆ ಈ ಶಬ್ದ ಅಲ್ಲಿ ಸಂಭೋಧನೆಗಾಗಿ ಉಪಯೋಗಿಸುತ್ತಿಲ್ಲ. ಬದಲಾಗಿ ಅದನ್ನು ಹೌದು ಎಂಬ ಶಬ್ದಕ್ಕೆ ಪರ್ಯಾಯವಾಗಿ ಉಪಯೋಗಿಸುತ್ತಾರೆ. ವಿಚಿತ್ರ ಅಲ್ಲವಾ ಎಲ್ಲಿಯ ಕುಂದಾಪುರ ಕನ್ನಡ, ಎಲ್ಲಿಯ ಇಂಗ್ಲೀಷು!! ಎಲ್ಲಿಯ ಪಂಜಾಬೀ !!! ಇಂತಹದ್ದೇನಾದರೂ ನಿಮ್ಮ ಅರಿವಿಗೆ ಬಂದರೆ ತಿಳಿಸಿ ನೋಡೋಣ!!
ಕೊನೆಯಲ್ಲಿ ಒಂದು ಜೋಕು.( ಇದು ಪಂಜಾಬಿಯಲ್ಲಿ ಪ್ರಚಲಿತ)
ಒಬ್ಬ ಇಂಗ್ಲೀಷರವ ಆ ಊರಲ್ಲಿ ಸಿಕ್ಕಿ ಹಾಕಿಕೊಂಡ. ಅವನಿಗೆ ಪಂಜಾಬಿ ಬರುತ್ತಿರಲಿಲ್ಲ. ಈಗ ರೈಲು ನಿಲ್ದಾಣಕ್ಕೆ ಹೋಗಬೇಕಾದರೆ ಹೇಗೆ ಹೋಗಬೇಕು? ಅವನು ನಡೆಯುತ್ತಿರುವ ದಿಶೆ ಸರಿಯಾಗಿದೆಯಾ ಅಂತ ಆ ದಾರಿಯಲ್ಲಿ ಬರುವ ಎಲ್ಲರಲ್ಲಿಯೂ ಕೇಳ್ತಾನೇ ಇದ್ದ. ಬಂದವರೆಲ್ಲರೂ ಅವನ ಪ್ರಶ್ನೆಗೆ ಅಹೋಯ್ ಅಂತಾನೇ ಉತ್ತರಕೊಡ್ತಿದ್ದರಂತೆ. ಅದು ಇವನಿಗೆ ಅರ್ಥವಾಗಲಿಲ್ಲ.ಕೊನೆಗೊಮ್ಮೆ ಸೂಟು ಬೂಟು ತೊಟ್ಟ ಮಹಾಶಯನೊಬ್ಬ ತಾನೇ ಇವನನ್ನು ಕರೆದು ಇಂಗ್ಲೀಷಿನಲ್ಲೇ ಕೇಳಿ, ಅವನ ಸಂಶಯ ದೂರ ಮಾಡಿದ. ಕೊನೆಯಲ್ಲಿ ಇಂಗ್ಲೀಷರವ ಕೇಳಿದ, ಎಲ್ಲರೂ ತಾನು ಕೇಳಿದಾಗ ಆಹೋಯ್ ಎಂದರಲ್ಲ. ಹಾಗೆಂದರೇನು ಎಂತ?. ಅದಕ್ಕೆ ಈ ಮಹಾಶಯ ಹಳ್ಳಿಯ ಕಡೆಯಲ್ಲಿ( ನಿರಕ್ಷರರು) ಹೌದು ಎನ್ನುವುದಕ್ಕೆ ಪರ್ಯಾಯವಾಗಿ ಈ ಶಬ್ದವನ್ನು ಉಪಯೋಗಿಸುತ್ತಾರೆ ಎಂದ. ಆಗ ಹೊಸಬ ಕೇಳಿದನಂತೆ ಅಂದರೆ ನೀವು ಓದುಬರಹ ಕಲಿತವರಾ ಅಂತ ಅದಕ್ಕೆ ಈತ ಉತ್ತರ ಕೊಟ್ಟ " ಆಹೋY"
Comments
ಉ: ಭಾಷೆಯ ಸ್ವಾಮ್ಯ