ಭಾಷೆ "Idea" ವ್ಯಕ್ತ ಪಡಿಸುವ ಸಾಧನ ಮಾತ್ರವೆ ?

ಭಾಷೆ "Idea" ವ್ಯಕ್ತ ಪಡಿಸುವ ಸಾಧನ ಮಾತ್ರವೆ ?

ಕರ್ನಾಟಕದಲ್ಲಿ ಸುಮಾರು ಜನರನ್ನ ನೋಡಿದ್ದಿನಿ. ಅದೇನೋ levelಲ್ಲು . ಯಾರೂ ಕೇಳಿಸಿಕೊಳ್ಳದಾಗ ಮಾತ್ರ ಕನ್ನಡ ಮಾತಾಡೋದು. ಯಾರಾದ್ರು ಕೇಳಿಸ್ಕೊಳ್ಳೋರ್ ಇದ್ದರೆ ಸಾಕು, ಅದು ಯಾರೇ ಆಗಿರ್ಲಿ, English ಶುರು ಮಾದ್ಬಿಡೋದು. ಕನ್ನಡ ಎಲ್ಲರ್ಗೂ ಗೊತ್ತಿದ್ರೂ English ಅಲ್ಲೇ ಮಾತಾಡೊದು.

ಮೈಸೂರಲ್ಲಿ ನನಗೆ ಒಬ್ಬಕೆ ಹೀಗೆ ಪರಿಚಯ ಆಗಿದ್ಲು. ನಾನೂ ಸ್ವಲ್ಪ ಪರಿಚಯ ಮಡ್ಕೊಳ್ವಾಗ Englishಎ use ಮಾಡಿದ್ದೆ ;) ಏನು ಮಾಡೊದು, English ಮಾ್ತಾಡ್ದಿದ್ರೆ ಯಾವ ಹುಡ್ಗೀರೂ ಸೊಪ್ಪೇ ಹಾಕಲ್ಲ .. ಸ್ವಲ್ಪ ಚೆನ್ನಗಿ ಪರಿಚಯ ಆದ್ಮೇಲೆ ನನ್ನ ಕನ್ನಡ ಶುರು ಅಚ್ಕೊಂಡೆ. ಅವಳಂತೂ ಅರ್ದಂಬರ್ದ english ಬಂದ್ರೂ ಟಸ್ ಫುಸ್ ಅಂತ ಏನೇನೋ ಒದ್ರುತನೇ ಇದ್ಲು. English ಮಾತಡುದ್ರೆನೇ levelಲ್ಲು ಅಂತ ತಿಳ್ಕೊಂದಿದ್ಲು. ಸ್ವಲ್ಪ Funda ಕೊಟ್ಟೆ. "ಯಾವುದೇ ಭಾಷೆ ನಮ್ಮ ಅಭಿಮತನ(Idea) ಬೇರೆಯವರಿಗೆ ವ್ಯಕ್ತಪಡಿಸ್ಲಿಕ್ಕೆ ಒಂದು ಸಾದನ ಮಾತ್ರ. ಭಾಷೆ ಯಾವ್ದಿದ್ರೂ ನಮ್ಮ Idea ಬಹಳ ಮುಖ್ಯ... Idea ಚೆನ್ನಾಗಿದ್ರೆ, ಯಾವುದೇ ಭಾಷೆ ಸೊಗಸಾಗಿ ಕಾಣ್ಸುತ್ತೆ" ಅಂತ ಹೇಳ್ದೆ.. ಆವತ್ತಿಂದ ನನ್ನತ್ರ ಅವಳು ಬರೀ ಕನ್ನಡ..

ಆವತ್ತೇನೋ ಹಾಗೇಳ್ದೆ.. ಆದ್ರೆ, ಈಗ ಸ್ವಲ್ಪ ಬೇರೆನೇ ಅನ್ನಿಸ್ತಿದೆ.. ಭಾಷೆ ಬರೀ ಅಭಿಮತ ವ್ಯಕ್ತ ಪಡಿಸುವ ಸಾದನ ಅಲ್ಲ..ಒಂದು ಸಂಸ್ಕ್ರುತಿ ಯನ್ನ ಪ್ರತಿಬಿಂಬಿಸುವ ಸಾದನ ಅಂತ... ನಿವೇನು ಹೇಳ್ತೀರಿ ?

Rating
No votes yet