ಭಿಕ್ಸುಕರ ಪೆಸೆಲ್

ಭಿಕ್ಸುಕರ ಪೆಸೆಲ್


ಅಮ್ಮಾ, ತಾಯೀ...........ಭಿಕ್ಸೆ ಹಾಕ್ರಮ್ಮಾ
ಮಹಿಳೆ : ನೋಡಪ್ಪಾ, ಇವತ್ತು ಏಕಾದಸಿ, ಹಂಗಾಗಿ ನಮ್ಮನೇಲಿ ಚಪಾತಿ ಬಿಟ್ಟರೆ ಇನ್ನೇನು ಮಾಡಿಲ್ಲ ಕಣಪ್ಪಾ.
-
-
-
-
-
-
-
ಭಿಕ್ಸುಕ : ಪರವಾಗಿಲ್ಲ ಕಣಮ್ಮಾ, ಚಪಾತಿನೇ ಒಂದು ನಾಲ್ಕು ಹಾಕಿ. ದರಿದ್ರ ಸೊಪ್ಪಿನ ಪಲ್ಯ ನೀವೇ ತಿನ್ನಿ. ಕಡೇ ಮುಲ್ಲಾಸಾಬಿ ಕ್ಯಾಂಟೀನಲ್ಲಿ ಚಿಕನ್ ಫ್ರೈ ತಗೊಂಡು ನೆಂಚ್ಕಂಡು ತಿಂತೀನಿ ಕಣಮ್ಮಾ.
ಅಯ್ಯೋ ಲೇ, ಎದ್ದು ಹೋಗೋ.
-----------------------------
ಹೆಂಡತಿ : ರೀ ಪಾಪ, ಅವನನ್ನ ನೋಡಿದ್ರೆ, ಅಯ್ಯೋ ಅನಿಸುತ್ತೆ. ಒಂದು ನೂರು ರೂಪಾಯಿ ಹಾಕ್ರಿ.
ಗಂಡ : ಹೌದು, ನಿನ್ನ ಮುಖ ನೋಡಿದ್ರೆ, ಚೆನ್ನಾಗಿ ಬಾಳಿ ಬದುಕಿದಂಗೆ ಇದೆ. ಯಾಕಪ್ಪಾ ಹೀಗಾದೆ.
-
-
-
-
-
ಭಿಕ್ಸುಕ : ಸಾ ನಿಮ್ಮ ತರಾನೇ ಕೋಟ್ಯಾಧಿಪತಿ ಆಗಿದ್ದೆ. ನನ್ನ ಹೆಂಡರು ಮಾತು ಕಟ್ಕಂಡು, ಕಂಡ, ಕಂಡೋರಿಗೆಲ್ಲಾ ಸಾವಿರಾರು ರೂಪಾಯಿ ಹಾಕ್ಕಿದ್ದಕ್ಕೆ, ಈಗ ಈ ಡ್ಯೂಟಿಗೆ ಬಂದಿದೀನಿ ಸಾ.
ಗಂಡ : ಮತ್ತೆ ನಿನ್ನ ಹೆಂಡರು
ಭಿಕ್ಸುಕ : ಮೆಜಿಸ್ಟಿಕ್ ಹೋಟೆಲ್ನಾಗೆ ಪಾತ್ರೆ ತೊಳಿತಾವ್ಳೆ ಸಾ...................
----------------------------------------------
ಭಿಕ್ಸುಕ : ಅಮ್ಮಾ ನಿಮ್ಮನೇಲಿ ಯಾರೂ ಇಲ್ವಾ.
ಮನೆಯವಳು : ಯಾಕಪ್ಪಾ
ಭಿಕ್ಸುಕ : ಏನೂ ವಾಸನೆ ಬತ್ತಾ ಇಲ್ವಲ್ಲಾ ಅದಕ್ಕೆ ಕೇಳಿದೆ.
ಮನೆಯವಳು : ನಿಮ್ಮಂತಹ ಮುಂಡೇ ಮಕ್ಕಳು ಬರ್ತಾರೆ ಅಂತಾನೆ ಬೆಳಗ್ಗೆ 5ಕ್ಕೆ ವಗ್ಗರಣೆ ಹಾಕಿರ್ತೀನಿ. ನಿನ್ನೆದು ಅನ್ನ ಐತೆ ಬೇಕಾ.
ಭಿಕ್ಸುಕ : ನಿಮ್ಮ ಮನೆ ನಾಯಿಗೆ ಹಾಕ್ರಿ, ಯಾವನಿಗ್ರೀ ಬೇಕು.
ಮನೆಯವಳು : ಅದು ತಿನ್ತಾ ಇಲ್ಲ. ಅದಕ್ಕೆ ಕೇಳಿದ್ದು....ಸುಮ್ನೆ ವೇಸ್ಟ್ ಆಗುತ್ತೆ ಅಂತಾ......ಆಹ್
-------------------------------------------------
ವ್ಯಕ್ತಿ : ಪಾಪ ನಿಮ್ಮನ್ನು ನೋಡಿದ್ರೆ ಅಯ್ಯೋ ಅನಿಸುತ್ತೆ. ಮಳೆ, ಚಳಿ, ಬಿಸಿಲು ಎನ್ನದೆ ಇಷ್ಟೆಲ್ಲಾ ಕಷ್ಟ ಪಡ್ತೀರಾ, ರಾತ್ರಿ ಹೊತ್ತು ಎಲ್ಲಪ್ಪಾ ಮಲಗ್ತೀಯಾ.........
-
-
-
-
-
--
ಭಿಕ್ಸುಕ : ಸಾ ಇಲ್ಲೇ ಜಯನಗರದಲ್ಲಿ ಫ್ಲಾಟ್ ಇದೆ . ಸಾ ಡ್ಯೂಟಿ ಮುಗಿದ ಮೇಲೆ ನನ್ನ ಮಕ್ಕಳು ಬಂದು ಕಾರಲ್ಲಿ ಕರ್ಕಂಡು ಹೋಗ್ತಾರೆ ಸಾ. ಬಾಡಿಗೆಗೆ ಏನಾದರೂ ಮನೆ ಬೇಕಿತ್ತಾ ಸಾ.
ಯಾಕಪ್ಪಾ, ಅಲ್ಲಾ ನಂದೇ ಇನ್ನೊಂದು ಫ್ಲಾಟ್ ಖಾಲಿ ಇದೆ. ಅದಕ್ಕೆ ಕೇಳಿದೆ.
ಅಯ್ಯೋ ಲೇ. ನಿನ್ನ ಮಕ್ಕೆ ಹಳೇ ಅಲುಮಿನಿಯಂ ತಟ್ಟೇಲಿ ಹೊಡಿಯಾ. ನಿನಗೆ ಭಿಕ್ಸೆ ಹಾಕಿದರೆ ನನಗೆ ಕರ್ಮ ಬರುತ್ತೆ ಆಟೆಯಾ.
-------------------------------------------------

Rating
No votes yet

Comments