ಭೂತದ ಬಾಯ ಭಗವದ್ಗೀತೆ!
ಯಾವುದೇ ಧರ್ಮಗ್ರಂಥವನ್ನು ಪುರಸ್ಕರಿಸುವ, ತಿರಸ್ಕರಿಸುವ ಹಕ್ಕು ಸೈಬೀರಿಯಾ ಕೋರ್ಟಗಿದೆ. ಇಲ್ಲವೆನ್ನುವುದಾದರೆ, ಅಲ್ಲಿನ ಕೋರ್ಟ್ ಪ್ರಕರಣವೊಂದರ ಬಗ್ಗೆ ಕೋಲಾಹಲ ಎಬ್ಬಿಸಲು ಇಲ್ಲಿನ ಸಂಸತ್ತಿಗಾದರೂ ಅಧಿಕಾರ ಏನಿದ್ದೀತು?
ಪ್ರಭುಪಾದರು ಬರೆದ ಗೀತಾ ವ್ಯಾಖ್ಯಾನವನ್ನು ಸೈಬೀರಿಯಾ ನ್ಯಾಯಾಲಯ ನಿಷೇಧಿಸಬಹುದಾದ ಪ್ರಸಂಗವನ್ನು ಪ್ರಸ್ತಾಪಿಸಿ ಪ್ರಲಾಪಿಸುವ ಅಣ್ಣಗಳು, ಇಂಡಿಯಾದ ಎಲ್ಲಾ ಶಾಲೆ-ಕಾಲೇಜುಗಳಲ್ಲಿ ಭಗವದ್ಗೀತೆ ಅಧ್ಯಯನವನ್ನು ಕಡ್ಡಾಯಮಾಡಿದರೆ ಒಪ್ಪಿಕೊಳ್ಳುತ್ತಾರೆಯೇ?
ಭಗವದ್ಗೀತೆ ಕುರಿತು ಶಂಕರಾಚಾರ್ಯರು ಭಾಷ್ಯ ಬರೆದಿದ್ದಾರೆ; ಅದಕ್ಕೆ ರಾಮಾನುಜಾಚಾರ್ಯರ ತಿದ್ದುಪಡಿ ಭಾಷ್ಯವಿದೆ; ಎರಡನ್ನೂ ಖಂಡಿಸಿ ಮಧ್ವಾಚಾರ್ಯರು ಪಾಂಡಿತ್ಯ ಮೆರೆದಿದ್ದಾರೆ. ಒಮ್ಮಸಮ್ಮತ ಮಾತ್ರಾ ಇನ್ನೂ ಬಂದಿಲ್ಲ. ಲೋಕಮಾನ್ಯ ಟಿಳಕರೂ ಅವರ ಚಿಂತನೆಗನುಸಾರವಾಗಿ 'ಗೀತಾರಹಸ್ಯ' ಬರೆದಿದ್ದಾರೆ. ಗಾಂಧೀಜಿ ಸಹ ದಿನಕ್ಕೊಂದು ಶ್ಲೋಕದಂತೆ ಈ ಮಹಾನ್ ಗ್ರಂಥವನ್ನು ಉರುಹೊಡೆಯಲು ಯತ್ನಿಸಿ ಕೈಬಿಟ್ಟರಂತೆ. ಈಗ ಎಲ್ಲಿನದೋ ಕೋರ್ಟಿನ ಯಾವುದೋ ಪ್ರಸಂಗದ ಬಗ್ಗೆ ಕೋಲಾಹಲ ಎಬ್ಬಿಸುತ್ತಿರುವ ಇಲ್ಲಿನ ಮಹೋದಯರಿಗಾದರೂ ಭಗವದ್ಗೀತೆಯ ಆಳ-ಅಗಲಗಳ 'ಅನುಭಾವ' ಎಷ್ಟುಂಟೋ!
ಭಗವದ್ಗೀತೆ ನಿಷೇಧದಿಂದ ಶ್ರೀಕೃಷ್ಣನಿಗೆ ಅವಮಾನವಂತೆ! ಅದರ ಮೂಲ ದ್ರಷ್ಟಾರರಾದರೋ ಭಗವಾನ್ ವೇದವ್ಯಾಸರು. ನಂತರದ ಪಟ್ಟಭದ್ರ ಹಿತಾಸಕ್ತಿಗಳೂ ಇದರಲ್ಲಿ, ಕಾಲಕ್ಕೆ ತಕ್ಕಂತೆ ಪಾಠಾತರ-ಪ್ರಕ್ಷಿಪ್ತಿಗಳನ್ನು ತೂರಿಸದೆ ಇಲ್ಲ. ಪ್ರಸಕ್ತ ಸಂವಿಧಾನದ ವಿಧಿ-ವಿಧಾನಗಳನ್ನು ಗೌರವಿಸಿ ನಡೆಯಬೇಕಾದ ಸಂಸತ್ ಸದನ, ಯಾವುದೋ ದೇಶದ ಧರ್ಮ-ನಂಬಿಕೆಗಳಲ್ಲಿ ಉಪದ್ವ್ಯಾಪ ಮಾಡಬೇಕಾದರೂ ಏಕೆ?
Comments
ಉ: ಭೂತದ ಬಾಯ ಭಗವದ್ಗೀತೆ!
In reply to ಉ: ಭೂತದ ಬಾಯ ಭಗವದ್ಗೀತೆ! by lgnandan
ಉ: ಭೂತದ ಬಾಯ ಭಗವದ್ಗೀತೆ!
ಉ: ಭೂತದ ಬಾಯ ಭಗವದ್ಗೀತೆ!
In reply to ಉ: ಭೂತದ ಬಾಯ ಭಗವದ್ಗೀತೆ! by makara
ಉ: ಭೂತದ ಬಾಯ ಭಗವದ್ಗೀತೆ!
In reply to ಉ: ಭೂತದ ಬಾಯ ಭಗವದ್ಗೀತೆ! by Shreekar
ಉ: ಭೂತದ ಬಾಯ ಭಗವದ್ಗೀತೆ!
In reply to ಉ: ಭೂತದ ಬಾಯ ಭಗವದ್ಗೀತೆ! by Shreekar
ಉ: ಭೂತದ ಬಾಯ ಭಗವದ್ಗೀತೆ!
In reply to ಉ: ಭೂತದ ಬಾಯ ಭಗವದ್ಗೀತೆ! by makara
ಉ: ಭೂತದ ಬಾಯ ಭಗವದ್ಗೀತೆ!
ಉ: ಭೂತದ ಬಾಯ ಭಗವದ್ಗೀತೆ!
In reply to ಉ: ಭೂತದ ಬಾಯ ಭಗವದ್ಗೀತೆ! by kavinagaraj
ಉ: ಭೂತದ ಬಾಯ ಭಗವದ್ಗೀತೆ!
In reply to ಉ: ಭೂತದ ಬಾಯ ಭಗವದ್ಗೀತೆ! by Shreekar
ಉ: ಭೂತದ ಬಾಯ ಭಗವದ್ಗೀತೆ!