ಭೂಮಿ ಬೆಚ್ಚಗಾಗಿದೆ
ಭೂಮಿ ಬೆಚ್ಚಗಾಗಿದೆ
(ಸ್ಪೂರ್ತಿ : Global Warming ಬಗ್ಯೆಯ ಚಿತ್ರ An Inconvenient Truth )
ಭೂಮಿ ಬೆಚ್ಚಗಾಗಿದೆ
ಭೂಮಿ ಬೆಚ್ಚಗಾಗಿದೆ
ನಮ್ಮ ನಿಮ್ಮ ಅಚ್ಚುಮೆಚ್ಚು
ಭೂಮಿ ಬೆಚ್ಚಗಾಗಿದೆ
ಝಗಝಗಿಸುವ ಹೋಟೆಲಿನಲಿ
ಹಡಗಿನಂಥ ಕಾರುಗಳಲಿ
ಬಹುಮಹಡಿಯ ಮಾಲುಗಳಲಿ
ತಂಗಾಳಿಯು ಬೀಸಿದೆ
ಏಸಿಯಂತ್ರ ಉಸಿರುಗಟ್ಟಿ
ಬಿಸಿಯ ಹೊರಗೆ ನೂಕಿದೆ
ಭೂಮಿ ಬೆಚ್ಚಗಾಗಿದೆ ಭೂಮಿ ಬೆಚ್ಚಗಾಗಿದೆ
ಹಾವಿನಂಥ ರಸ್ತೆಗಳಲಿ
ಕಿಕ್ಕಿರಿದಿಹ ಕಾರುಗಳಿಗೆ
ದಟ್ಟೈಸಿದ ಟ್ರಕ್ಕುಗಳಿಗೆ
ತೆವಳು ಸ್ಪರ್ಧೆ ನಡೆದಿದೆ
ಕಾರುತಿರುವ ಕಾರ್ಮೋಡಕೆ
ಹಗಲೆ ಕತ್ತಲಾಗಿದೆ
ಭೂಮಿ ಬೆಚ್ಚಗಾಗಿದೆ ಭೂಮಿ ಬೆಚ್ಚಗಾಗಿದೆ
ಕಾರ್ಖಾನೆಯ ಚಿಮಣಿಗಳಲಿ
ಧೂಮರಾಶಿ ಉಕ್ಕಿದೆ
ದಟ್ಟ ಕಾಡ ಹಸುರ ಬದಲು
ಬಟ್ಟ ಬಯಲು ಕಂಡಿದೆ
ಮೀನು ಹಕ್ಕಿ ಪ್ರಾಣಿಗಳಿಗೆ
ದಿಕ್ಕು ತೋರದಾಗಿದೆ
ಭೂಮಿ ಬೆಚ್ಚಗಾಗಿದೆ ಭೂಮಿ ಬೆಚ್ಚಗಾಗಿದೆ
ಧ್ರುವನಾಡಿನ ಮುಗಿಲೆತ್ತರ
ಹಿಮಪರ್ವತ ಕುಸಿದಿದೆ
ಕಡಲು ಸೊಕ್ಕಿ ನದಿಯು ಉಕ್ಕಿ
ಜನಜೀವನ ಕದಡಿದೆ
ನೆಲವಾವುದು ನೀರಾವುದು
ಒಂದೂ ತಿಳಿಯದಾಗಿದೆ
ಭೂಮಿ ಬೆಚ್ಚಗಾಗಿದೆ ಭೂಮಿ ಬೆಚ್ಚಗಾಗಿದೆ
ಇಳೆಯಮ್ಮನ ಆರ್ತನಾದ
ನಮಗೆ ಕೇಳದಾಗಿದೆ
ಭೂದೇವಿಯ ಜ್ವರವೇರುವ
ಕರಿಯ ಘಳಿಗೆ ಬಂದಿದೆ
ಸಿಡಿಮದ್ದಿನ ಉಗ್ರಾಣಕೆ
ಉರಿವ ಕೆಂಡ ಬಿದ್ದಿದೆ
ಭೂಮಿ ಬೆಚ್ಚಗಾಗಿದೆ ಭೂಮಿ ಬೆಚ್ಚಗಾಗಿದೆ
ನ್ಯೂಯಾರ್ಕಿನ ಮೈಲೆತ್ತರ
ಕಟ್ಟಡಗಳು ಮುಳುಗವೇ?
ಬಂಗಾಳದ ಸುಂದರಬನ
ಕಡಲಭಾಗವಾಗವೇ?
ನಮ್ಮೆಲ್ಲರ ನಾಳೆಗಳವು
ಕಡುಕಠೋರವಾಗವೇ?
ಭೂಮಿ ಬೆಚ್ಚಗಾಗಿದೆ ಭೂಮಿ ಬೆಚ್ಚಗಾಗಿದೆ
ಅಣುಬಾಂಬನು ಸಿಡಿಸಿದವರು
ಚಂದ್ರನೆಲವ ಮೆಟ್ಟಿದವರು
ದೇಶದೇಶ ಕಟ್ಟಿದವರು
ನಮಗೆ ಯಾರು ಸಾಟಿಯು?
ಇಳೆಯ ತಂಪು ಮಾಡಿಯೇವು
ನಾಚುವಂತೆ ಊಟಿಯು
ಭೂಮಿ ಬೆಚ್ಚಗಾಗಿದೆ ಭೂಮಿ ಬೆಚ್ಚಗಾಗಿದೆ
ಭೂಮಿ ಸ್ವಚ್ಚ ಮಾಡುವಾ
ನಾಳೆಯತ್ತ ನೋಡುವಾ
ನಮ್ಮ ನಿಮ್ಮ ಅಚ್ಚುಮೆಚ್ಚು
ಭೂಮಿ ಸ್ವಸ್ಥ ಮಾಡುವಾ
-
Comments
ಉ: ಭೂಮಿ ಬೆಚ್ಚಗಾಗಿದೆ
In reply to ಉ: ಭೂಮಿ ಬೆಚ್ಚಗಾಗಿದೆ by shylaswamy
ಉ: ಭೂಮಿ ಬೆಚ್ಚಗಾಗಿದೆ
In reply to ಉ: ಭೂಮಿ ಬೆಚ್ಚಗಾಗಿದೆ by Narayana
ಉ: ಭೂಮಿ ಬೆಚ್ಚಗಾಗಿದೆ
In reply to ಉ: ಭೂಮಿ ಬೆಚ್ಚಗಾಗಿದೆ by ASHOKKUMAR
ಉ: ಭೂಮಿ ಬೆಚ್ಚಗಾಗಿದೆ
In reply to ಉ: ಭೂಮಿ ಬೆಚ್ಚಗಾಗಿದೆ by Narayana
ಉ: ಭೂಮಿ ಬೆಚ್ಚಗಾಗಿದೆ
In reply to ಉ: ಭೂಮಿ ಬೆಚ್ಚಗಾಗಿದೆ by shylaswamy
ಉ: ಭೂಮಿ ಬೆಚ್ಚಗಾಗಿದೆ